Advertisement
ಗಮನ ಸೆಳೆದಿದ್ದ ಪತ್ರಿಕೆವೇಣೂರು ಹೋಬಳಿಯ ಮೂಡು ಕೋಡಿ ಗ್ರಾಮದ ಸುಮಾರು 20 ಮಂದಿ 94ಸಿ ಫಲಾನುಭವಿ ಗ್ರಾಮ ಸ್ಥರಿಗೆ 2017ರ ಅಕ್ಟೋಬರ್‌ನಲ್ಲಿ ನೀಡಿದ್ದ ಹಕ್ಕುಪತ್ರದಲ್ಲಿ 99/2ಎಪಿ8 ಎಂಬುವುದರ ಬದಲಾಗಿ 99/2ಪಿಎ1 ಎಂದು ನಮೂದಿಸಲಾಗಿದ್ದು, ಇದರಿಂದ ಆರ್‌ಟಿಸಿ ದೊರೆಯದೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈ ಬಗ್ಗೆ ಉದಯವಾಣಿ ಸುದಿನ ಮೇ 10ರಂದು ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಈ ವೇಳೆ ಫಲಾನುಭವಿ ಗ್ರಾಮಸ್ಥರು 94ಸಿ ಹಕ್ಕುಪತ್ರಕ್ಕಾಗಿ ಕೇಸ್ ವರ್ಕರ್ ಹರೀಶ್ ಕೆ. ಅವರು 12 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿರುವುದಾಗಿ ತಹಶೀಲ್ದಾರರಲ್ಲಿ ಆರೋಪಿಸಿದರು. ತತ್‌ಕ್ಷಣ ಹರೀಶ್ ಕೆ. ಅವರನ್ನು ತನ್ನ ಕೊಠಡಿಗೆ ಕರೆಯಿಸಿಕೊಂಡು ಪ್ರಶ್ನಿಸಿದ್ದು, ಆದರೆ ಆರೋಪವನ್ನು ಹರೀಶ್ ನಿರಾಕರಿಸಿದರು. ತಾಲೂಕು ಕಚೇರಿಯ ಪ್ರತಿ ವಿಭಾಗದ ಕೊಠಡಿಗೆ ಸಿಸಿ ಕೆಮರಾ ಅಳವಡಿಸಲಾಗಿದೆ. ಲಂಚದ ಬೇಡಿಕೆಯ ಕಾಲ್ ಅಥವಾ ವೀಡಿಯೋ ದಾಖಲೆ ಗಳನ್ನು ಸಂಗ್ರಹಿಸಿ ನೀಡಿದರೆ ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆಂದರು.
Related Articles
ಸರ್ವೇ ನಂಬರ್ ಬದಲಾಗಿ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದ ಮೂಡುಕೋಡಿ ಗ್ರಾಮದ 27 ಮಂದಿ ಫಲಾನುಭವಿಗಳಿಗೆ ಜೂ. 13ರ ಒಳಗೆ ಸರ್ವೇ ನಂಬರ್ ಸರಿಪಡಿಸಿ ಆರ್‌ಟಿಸಿ ದೊರಕಿಸಿಕೊಡುವು ದಾಗಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಭರವಸೆ ನೀಡಿದರು.
Advertisement
ಸಮಸ್ಯೆ ಪರಿಹಾರಕ್ಕೆ ಭೇಟಿಹಳೆ ಕಟ್ಟಡದಿಂದ ಮಿನಿ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರಗೊಂಡಾಗ ಇಲಿ, ಹೆಗ್ಗಣಗಳು (ಭ್ರಷ್ಟಾಚಾರಿ ಸಿಬಂದಿ) ಅಲ್ಲೇ ಉಳಿಯುತ್ತವೆ ಅಂದುಕೊಂಡಿ ದ್ದೆವು. ಆದರೆ ಇದೀಗ ಹೊಸ ಕಟ್ಟಡ ದಲ್ಲಿ ತಿಮಿಂಗಿಲಗಳೇ ಇವೆ. ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ತಾ| ಕಚೇರಿಗೆ ಭೇಟಿ ನೀಡುತ್ತಲೇ ಇರುತ್ತೇನೆ.
– ಕೆ. ವಸಂತ ಬಂಗೇರ ಮಾಜಿ ಶಾಸಕರು