ನೆಲಮಂಗಲ: ಭಜರಂಗಿ 2 ಚಿತ್ರದ ಸೆಟ್ ಬೆಂಕಿಗಾಹುತಿಯಾದ ಹಿನ್ನೆಲೆ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಸ್ಟುಡಿಯೋ ಪರಿಶೀಲಿಸಿ ಸೆಟ್ ಹಾಕಲಾಗಿದ್ದ ಕಟ್ಟಡವನ್ನು ಸೀಜ್ ಮಾಡಿದ್ದಾರೆ.
ತಾಲೂಕಿನ ಶ್ರೀನಿವಾಸಪುರ ಗ್ರಾಪಂ ವ್ಯಾಪ್ತಿಯ ಮರಸರಹಳ್ಳಿ ಗ್ರಾಮದಲ್ಲಿನ ಮೋಹನ್ ಬಿ.ಕೆರೆ ಸ್ಟುಡಿಯೋ ಕುಮುದ್ವತಿ ನದಿಯಿಂದ 300 ಮೀ. ವ್ಯಾಪ್ತಿಯಲ್ಲಿದ್ದು ಗ್ರೀನ್‌ಬೆಲ್ಟ್ ಪ್ರದೇಶವಾಗಿದೆ. ಸ್ಟುಡಿಯೋ ನಡೆಸಲು ಯಾವುದೇ ಅನುಮತಿ ಪಡೆದಿಲ್ಲ ಚಿತ್ರೀಕರಣದ ವೇಳೆ ಮುಂಜಾಗೃತ ಕ್ರಮವಾಗಿ ಅನುಸರಿಸಬೇಕಾದ ಯಾವುದೇ ನಿಯಮಗಳನ್ನು ಪಾಲಿಸದಿರುವುದು ತಿಳಿದುಬಂದಿದೆ. ಇದನ್ನು ಮನಗಂಡ ಅಧಿಕಾರಿಗಳು ಸೆಟ್ ಕಟ್ಟಡವನ್ನು ಬೀಗವಾಕಿ ಸೀಜ್ ಮಾಡಿದ್ದು, ದಾಖಲೆ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.
ಪ್ರಭಾವಿಗಳ ನೆರಳು!: ಸ್ಟುಡಿಯೋ ನಡೆಸಲು ರಾಜ್ಯ ಹಾಗೂ ಸ್ಥಳೀಯ ಪ್ರಭಾವಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವಕಾರಣ ಅನುಮತಿಯಿಲ್ಲದೆ ರಾಜಾರೋಷವಾಗಿ ಚಿತ್ರಗಳ ಚಿತ್ರೀಕರಣ ನಡೆಸಲಾಗಿದೆ. ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ಪ್ರತಿದಿನಕ್ಕೆ 80 ಸಾವಿರ ಬಾಡಿಗೆ ಪಡೆಯಲಾಗುತಿದ್ದು, ಗ್ರಾಪಂ ಅನುಮತಿ ಪಡೆಯದೆ ಕಂದಾಯ ನೀಡದೆ ಕಾನೂನು ಬಾಹಿರವಾಗಿ ನಡೆಸಿಕೊಂಡು ಹೋಗುತಿದ್ದಾರೆ.
ಕಂದಾಯ ಇಲಾಖೆಯ ಬೆಂಬಲವೇ?: ಶ್ರೀನಿವಾಸಪುರ ಗ್ರಾಪಂನಿಂದ ಅಧಿಕಾರಿಗಳು ತಹಶೀಲ್ದಾರ್‌ರವರಿಗೆ ಸ್ಟುಡಿಯೋ ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆ 8 ತಿಂಗಳ ಹಿಂದೆ ಮೂರು ಭಾರಿ ಅರ್ಜಿ ನೀಡುವ ಮೂಲಕ ಗಮನಕ್ಕೆ ತಂದರು.
ಕಂದಾಯ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತ್ತಿರುವುದರಿಂದ ಇವರೇ ಬೆಂಬಲವಾ ಗಿರುವ ಅನುಮಾನ ವ್ಯಕ್ತವಾಗಿದೆ. ಮೋಹನ್ ಬಿ.ಕೆರೆ ಸ್ಟುಡಿಯೋ ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಪಟ್ಟಣ ಸಮೀಪದ ಸ್ಟುಡಿಯೋ ಅನುಮತಿಯಿಲ್ಲದೆ ನಡೆಸುತ್ತಿರುವುದು ಸೆಟ್ ಬೆಂಕಿಬಿದ್ದ ಕಾರಣ ತಿಳಿದಿದೆ ಎಂದರೆ ಈ ರೀತಿಯ ಕಾನೂನಿಗೆ ವಿರುದ್ಧವಾಗಿ ನಿರ್ಮಾಣವಾಗಿರುವ ಸ್ಟುಡಿಯೋಗಳು , ಕಟ್ಟಡ ಹಾಗೂ ರೆಸಾರ್ಟ್ ಗಳು ತಾಲೂಕಿನ ಅಧಿಕಾರಿಗಳು ಹಾಗೂ ಸದಸ್ಯರ ನೆರಳಿನಲ್ಲಿ ಬಹಳಷ್ಟಿವೆ ಎಂಬುದು ಮನಗಾಣಬೇಕಾಗಿದೆ