Advertisement

ಬಾಂಜಾರುಮಲೆಗೆ ತಹಶೀಲ್ದಾರ್‌ ಭೇಟಿ

02:30 PM Aug 07, 2018 | Team Udayavani |

ಬೆಳ್ತಂಗಡಿ: ನೆರಿಯ ಗ್ರಾಮದ ಬಾಂಜಾರುಮಲೆ ಮಲೆಕುಡಿಯ ಕಾಲನಿಗೆ ಸೋಮವಾರ ಬೆಳ್ತಂಗಡಿ ತಹಶೀಲ್ದಾರ್‌ ಮದನ್‌ಮೋಹನ್‌ ಸಿ. ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ನಿವಾಸಿಗಳಿಂದ ಸಮಸ್ಯೆಗಳ ಮಾಹಿತಿ ಪಡೆಯಿತು. ಈ ಪ್ರದೇಶದ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ 2 ಕೋ.ರೂ. ಅನುದಾನ ಮಂಜೂರುಗೊಂಡು 2 ವರ್ಷ ಕಳೆದರೂ ಕಾಮಗಾರಿ ಆರಂಭ ಗೊಳ್ಳದೇ ಇರುವ ಕುರಿತು ಸ್ಥಳೀಯರು ತಹಶೀಲ್ದಾರರ ಬಳಿ ಅಳಲು ತೋಡಿ ಕೊಂಡರು. ಚುನಾವಣೆ ಸಂದರ್ಭ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ನೀಡಿದ್ದ ಭರವಸೆ ಈಡೇರಿಸಿಲ್ಲ. ಆದಿವಾಸಿಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ರೂ. ಇದ್ದರೂ ಅಭಿವೃದ್ಧಿಯಾಗದೇ ಇರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಮಸ್ಯೆಗಳು ಹಲವು
ಬೇಡಿಕೆ ಆಲಿಸಿದ ತಹಶೀಲ್ದಾರ್‌ ಮಾತನಾಡಿ, ಇಲ್ಲಿ ಕಂದಾಯಕ್ಕಿಂತ ಇತರ ಇಲಾಖೆ ಗಳ ಸಮಸ್ಯೆಯೇ ಹೆಚ್ಚಿದೆ.
ಐಟಿಡಿಪಿ, ಸಮಾಜ ಕಲ್ಯಾಣ, ಪಂಚಾ ಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ, ಮೆಸ್ಕಾಂ ಇಲಾಖೆಗೆ ಸಂಬಂಧಿ ಸಿದ ಸಮಸ್ಯೆಗಳ ಕುರಿತು ಆಯಾಯ ಇಲಾಖೆಗೆ ಸೂಚಿಸುವುದಾಗಿ ಭರವಸೆ ನೀಡಿದರು. ನಮಗೆ ಭರವಸೆಗಿಂತಲೂ ಪರಿಹಾರ ಬೇಕಿದೆ ಎಂಬ ಜನರ ಒತ್ತಾಯಕ್ಕೆ, ಎಲ್ಲ ಸಮಸ್ಯೆಗಳನ್ನೂ ಜಿಲ್ಲಾಧಿಕಾರಿಯವರ ಗಮನಕ್ಕೆ ತರುತ್ತೇನೆ. ಕಂದಾಯ ಇಲಾಖೆಯ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದರು.

ಬಾಂಜಾರು ಸಮುದಾಯ ಭವನ
ದಲ್ಲಿ ನಡೆದ ಮಾತುಕತೆಯಲ್ಲಿ ನೆರಿಯ ಗ್ರಾ.ಪಂ. ಸದಸ್ಯೆ ಮೀನಾಕ್ಷಿ ಬಾಂಜಾರು ಅವರ ನೇತೃತ್ವದಲ್ಲಿ ಸಮಸ್ಯೆಗಳನ್ನು ಜನರು ತಹಶೀಲ್ದಾರರ ಗಮನಕ್ಕೆ ತಂದರು. ಬೆಳ್ತಂಗಡಿ ಕಂದಾಯ ನಿರೀಕ್ಷಕ ರವಿಕುಮಾರ್‌, ಪ್ರಥಮ ದರ್ಜೆ ಸಹಾಯಕ ಶಂಕರ್‌, ನೆರಿಯ ಗ್ರಾಮ ಕರಣಿಕ ಸತೀಶ್‌ ಮೊದಲಾದವರು ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next