Advertisement

ಅಕ್ರಮ ಶೆಡ್ ನಿರ್ಮಾಣ ಪ್ರಯತ್ನಕ್ಕೆ ತಹಶೀಲ್ದಾರ್‌ರಿಂದ ತಡೆ

07:13 PM Feb 26, 2022 | Suhan S |

ಸಾಗರ: ತಾಲೂಕಿನ ತ್ಯಾಗರ್ತಿ ಸಮೀಪದ ನಾಡಕಲಸಿ ಗ್ರಾಮದ ಸರ್ವೆ ನಂ. 133 ಮತ್ತು 134ರ ಸರ್ಕಾರಿ ಭೂಮಿ ಗೋಮಾಳ ಅತಿಕ್ರಮಣ ಮಾಡಿ ಮರಗಿಡಗಳನ್ನು ಕಡಿದು ಶೆಡ್ ನಿರ್ಮಾಣ ಮಾಡಲು ಆಗಮಿಸಿದ ಸಾಗರ ಪೇಟೆ ನಿವಾಸಿಗಳನ್ನು ನಾಡಕಲಸಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ವಿರೋಧಿಸಿ ಕಂದಾಯ ಇಲಾಖೆ ಅಧಿಕಾರಿಗಳ ನೆರವಿನಿಂದ ಶೆಡ್ ತೆರವುಗೊಳಿಸಿ ವಾಪಸ್ ಕಳಿಸಿದ ಘಟನೆ ಶನಿವಾರ ನಡೆದಿದೆ.

Advertisement

ಸಾಗರ ಪೇಟೆ ನಿವಾಸಿಗಳಾದ ಲಲಿತಮ್ಮ ಹೆಸರಿನಲ್ಲಿ 25 ವರ್ಷದ ಹಿಂದೆ ನಾಡಕಲಸಿ ಗ್ರಾಮದ ಸರ್ವೆ ನಂ 133 ರಲ್ಲಿ ನಾಲ್ಕು ಎಕರೆ ೩೮ ಗುಂಟೆ ಜಮೀನು ಬಗರ್ ಹುಕುಂನಲ್ಲಿ ಮಂಜೂರಾತಿ ಆಗಿತ್ತು ಎನ್ನಲಾಗಿದೆ. ಸಾಗುವಳಿ ಮಾಡದೆ ಇರುವ ದಟ್ಟ ಅರಣ್ಯ ಮರಗಿಡಗಳು ಇರುವ ಪ್ರದೇಶದಲ್ಲಿ ಗ್ರಾಮಸ್ಥರ ತೀವ್ರ ವಿರೋಧದಿಂದ ಉಪ ವಿಭಾಗಾಧಿಕಾರಿಗಳು ಮಂಜೂರಾತಿ ರದ್ದುಗೊಳಿಸಿ ಸರ್ಕಾರಿ ಕಾಯ್ದಿರಿಸಿದ ಭೂಮಿ ಎಂದು ಬೋರ್ಡ್ ಹಾಕಲಾಗಿತ್ತು. ಆದರೆ

ಶನಿವಾರ ಏಕಾಏಕಿ ಜನರ ಗುಂಪು ಕಟ್ಟಿಕೊಂಡು ಮರಗಳನ್ನು ಕಡಿಯಲು ತಯಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು.

ಸ್ಥಳಕ್ಕೆ ಆಗಮಿಸಿದ ಕಂದಾಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಮ್ಮುಖದಲ್ಲಿ ಶೆಡ್ ತೆರವುಗೊಳಿಸಿ ಅತಿಕ್ರಮ ಸಾಗುವಳಿ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ

ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಲೋಕನಾಥ್ ಬಿಳಿಸಿರಿ ಮಾತನಾಡಿ, ಹಿಂದಿನ ಅಧಿಕಾರಿಗಳ ಸಮ್ಮುಖದಲ್ಲಿ ಆಗಿರುವ ತೀರ್ಮಾನದಂತೆ ಇದನ್ನು ಕಾಯ್ದಿರಿಸಿದ ಜಾಗ ಎಂದು ಸೂಚನಾ ಫಲಕ ಹಾಕಲಾಗಿದೆ. ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗ ಇದಾಗಿದ್ದು ಇವರು ಬೇರೆ ಊರಿನಿಂದ ಗೂಂಡಾಗಳನ್ನು ಕರೆತಂದು ಅತಿಕ್ರಮ ಸಾಗುವಳಿ ಮಾಡಲು ಹುನ್ನಾರ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಅತಿಕ್ರಮ ಸಾಗುವಳಿ ಮಾಡಲು ಬಿಡುವುದಿಲ್ಲ ಎಂದು ಹೇಳಿದರು

Advertisement

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಮಾತನಾಡಿ, ನಾಡಕಲಸಿ ಗ್ರಾಮದ ಸರ್ವೆ ನಂ ೧೩೩ರಲ್ಲಿ ಯಾವುದೇ ಸಾಗುವಳಿ ಇಲ್ಲ ಯಾರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಲು ಪ್ರಯತ್ನಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ತಾಲೂಕಿನಲ್ಲಿ ಬಗರ್ ಹುಕುಂ ಹೆಸರಿನಲ್ಲಿ ಹೊಸ ಒತ್ತುವರಿ ಆಗುತ್ತಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು

ಸಂದರ್ಭದಲ್ಲಿ ಭೂನ್ಯಾಯ ಮಂಡಳಿ ಸದಸ್ಯ ದೇವೇಂದ್ರಪ್ಪ ಎಲಕುಂದ್ಲಿ, ನಾಡಕಲಸಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಬೊಮ್ಮತ್ತಿ,ಬಾಲಸುಂದರಗೌಡ, ನರೇಂದ್ರ ಮಳಲಿಕೊಪ್ಪ, ನಾರಾಯಣ, ಗ್ರಾಮ ಲೆಕ್ಕಿಗ ಪ್ರಕಾಶ್ ಸಿಂಗ್, ಅರಣ್ಯ ಇಲಾಖೆ ಅಧಿಕಾರಿ ಅಣ್ಣಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next