Advertisement

ತಹಸೀಲ್ದಾರ್‌ ಅಮಾನತಿಗೆ ಕರವೇ ಒತ್ತಾಯ

02:32 PM Jun 06, 2019 | Team Udayavani |

ಹಾವೇರಿ: ಮರಳು ಸಾಗಾಣಿಕೆದಾರರಿಂದ ಲಂಚ ಪಡೆದು ರಾಜ್ಯದ ಖನಿಜ ಸಂಪತ್ತನ್ನು ಲೂಟಿ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಸಂಘಟನೆ ಮುಖಂಡರು ಮಾತನಾಡಿ, ಹಾವೇರಿ ತಾಲೂಕು ದಂಡಾಧಿಕಾರಿ ಶಿವಕುಮಾರ ಎಚ್.ಸಿ., ಅಕ್ರಮ ಮರಳು ಸಾಗಾಣಿಕೆದಾರರೊಂದಿಗೆ ಅವ್ಯವಹಾರ ಮಾಡಿಕೊಂಡ ವಿಚಾರ ಈಗಾಗಲೇ ತಮಗೆ ತಿಳಿದ ವಿಷಯವಾಗಿದ್ದು, ಆದರೆ, ಈ ವರೆಗೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಕ್ರಮ ಮರಳು ಸಾಗಾಣಿಕೆದಾರರು ಪ್ರತಿದಿನ ಲಾರಿಗಳಲ್ಲಿ ಮರುಳನ್ನು ತುಂಬಿಕೊಂಡು ಹೋಗಲು ತಹಸೀಲ್ದಾರರು ಪ್ರತಿ ಲಾರಿಗೆ 15 ಸಾವಿರ ರೂ.ಗಳಂತೆ ಬೇಡಿಕೆ ಇಡುತ್ತಿದ್ದಾರೆ. ಒಂದು ಲಾರಿಗೆ ಇಷ್ಟು ಲಂಚಕ್ಕೆ ಬೇಡಿಕೆ ಇಟ್ಟರೆ ಆ ಮರಳನ್ನು ಕೊಳ್ಳುವವನ ಪರಿಸ್ಥಿತಿ ಏನಾಗುತ್ತದೆ ಎಂದು ಪ್ರಶ್ನಿಸಿದರು.

ಇದೇ ರೀತಿ ಮೇಲಧಿಕಾರಿಗಳೇ ಲಂಚದ ಮುಖಾಂತರ ಇಂತಹ ಅಕ್ರಮಗಳನ್ನು ಮಾಡಲು ಮುಂದಾದರೆ ನಮ್ಮ ರಾಜ್ಯದ ಖನಿಜ ಸಂಪತ್ತು ಉಳಿಯುವುದಾದರೂ ಹೇಗೆ? ಬಡಜನರು ಮನೆ ಕಟ್ಟುವುದಾರು ಹೇಗೆ ? ಎಂದು ಪ್ರಶ್ನಿಸಿದ ಅವರು, ಇಂತಹ ಲಂಚಕೋರ ಅಧಿಕಾರಿಗಳು ನಮ್ಮ ಜಿಲ್ಲೆ, ರಾಜ್ಯಕ್ಕೆ ಬೇಡ. ಅಕ್ರಮ ಎಸಗಿರುವ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಸತೀಶಗೌಡ ಮುದಿಗೌಡ್ರ, ಜಿಲ್ಲಾ ಉಪಾಧ್ಯಕ್ಷ ನಂದೀಶ ಗೊಡ್ಡೆಮ್ಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ, ಗಿರೀಶ ಬಾರ್ಕಿ, ಕೊಟ್ರೇಶ ಜಿ.ಎಸ್‌., ಕರಿಯಪ್ಪ ಕೊರವರ, ಬಸವರಾಜ ಹೊಂಭರಡಿ, ರಾಮಕೃಷ್ಣ ಅಕುಡಕರ, ಹಾಲೇಶ ಹಾಲಣ್ಣನವರ, ದಾದಾಪೀರ ಖಾಲೇ ಖಾನನವರ, ಸುನೀಲ ಬೇಂದ್ರೆ, ಚನ್ನಪ್ಪ ಹೊನ್ನಮ್ಮನವರ, ಗೌಸಪಾಕ ಭಾಲೇಬಾಯಿ, ಶಿವಯೋಗೆಪ್ಪ ನಲವತ್ತವಾಡ, ಶೇಖಪ್ಪ ನರಸಣ್ಣನವರ, ಪ್ರಸಾದ ಈಳಿಗೇರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next