ಗೌರಿಬಿದನೂರು: ತಾಲೂಕಿನಮಂಚೇನಹಳ್ಳಿ ಹೋಬಳಿ ಗೌಡಗೆರೆ ಗ್ರಾಪಂ ವ್ಯಾಪ್ತಿಯ ಜನ ಸಾಮಾನ್ಯರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವ ಬಗ್ಗೆ ಮಾಹಿತಿಪಡೆದ ತಹಶೀಲ್ದಾರ್ ಎಚ್.ಶ್ರೀನಿವಾಸ್ ಸ್ಥಳಕ್ಕೆ ಧಾವಿಸಿ ಗ್ರಾಮದ ಜನರ ಮನವೊಲಿಕೆ ಮಾಡಿದರು.
ಈ ವೇಳೆ ಮಾತನಾಡಿದ ಅವರು,ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಇರು ವುದಿಲ್ಲ, ಇದರಿಂದ ಮನುಷ್ಯನಶರೀ ರದಲ್ಲಿ ರೋಗ ನಿರೋಧಕ ಶಕ್ತಿಹೆಚ್ಚುತ್ತದೆ. ಇದರಿಂದ ಸೋಂಕು ಬಂದರೂ ನಿಮಗೆ ಪ್ರಾಣಾಪಾಯವಿರುವುದಿಲ್ಲ. ಆದ್ದರಿಂದ ಯಾವುದೇ ಊಹಾಪೋಹಕ್ಕೆ ಕಿವಿಕೊಟ್ಟು ಲಸಿಕೆಹಾಕಿಸಿಕೊಳ್ಳಲು ಹಿಂಜರಿಯಬೇಡಿಎಂದು ಕಿವಿಮಾತು ಹೇಳಿದರು.
ದೇಶದ ಗಣ್ಯರಿಂದ ಲಸಿಕೆ ಅಭಿಯಾನ: ಕೋವಿಡ್ ಲಸಿಕೆ ಬಗ್ಗೆ ಜನಸಾಮಾನ್ಯರಲ್ಲಿ ಅತ್ಮಸ್ಥೈರ್ಯ ತುಂಬಲುದೇಶದ ಗಣ್ಯರು ಸ್ವತಃ ಲಸಿಕೆ ಹಾಕಿಸಿಕೊಂಡಿದ್ದಾರೆ. ದೇಶದ ಪ್ರಧಾನಿ ಮೋದಿಮೊದಲ್ಗೊಂಡು ಮುಖ್ಯಮಂತ್ರಿಗಳು,ಸಚಿವರು, ಶಾಸಕರು ಲಸಿಕೆ ಹಾಕಿಸಿಕೊಂಡು ಜನಸಾಮಾನ್ಯರಿಗೆ ಮಾದರಿಯಾಗಿ ದ್ದಾರೆ.
ಲಸಿಕೆ ಹಾಕಿಸಿಕೊಂಡರೂಸೋಂಕು ಬರುತ್ತದೆ ಎಂಬ ಸಂಶಯಬೇಡ, ಲಸಿಕೆ ಹಾಕಿಸಿಕೊಂಡರೆ ಸೋಂಕುಬಂದರೂ ಪ್ರಾಣಕ್ಕೆ ಅಪಾಯವಿರುವುದಿಲ್ಲ ಎಂದು ತಿಳಿಸಿದರು.ಲಸಿಕೆ ಹಾಕಿಸಿಕೊಂಡರೆ ಮಾತ್ರಪಡಿತರ ಸಿಗುತ್ತದೆ ಎಂಬುವುದುಕೇವಲ ಲಸಿಕೆ ಹಾಕಿಸಿಕೊಳ್ಳಲಿ ಎಂಬುವುದು ಮೂಲ ಉದ್ದೇಶವಾಗಿದೆ.
ಈನಿಟ್ಟಿನಲ್ಲಿ 45 ವರ್ಷ ಮೇಲ್ಪಟ್ಟವರುತಪ್ಪದೇ ಲಸಿಕೆ ಹಾಕಿಸಿಕೊಳ್ಳಿ, ಆರೋಗ್ಯಇಲಾಖೆ ಸಿಬ್ಬಂದಿ ಮನೆ ಮನೆಗೂಬಂದು ಲಸಿಕೆ ಹಾಕುತ್ತಾರೆ. ಇದನ್ನುಸದ್ವಿನಿಯೋಗಿಸಿಕೊಳ್ಳಿ ಎಂದುತಿಳಿಸಿದರು. ಅರಿವು ಕಾರ್ಯಕ್ರಮದಲ್ಲಿಮಂಚೇನಹಳ್ಳಿ PSI ಲಕ್ಷ್ಮೀನಾರಾಯಣ್, ಎಸ್.ಬಿ.ಆನಂದ್,ಆರೋಗ್ಯ ಇಲಾಖೆ ಸಿಬ್ಬಂದಿಪಂಚಾಯ್ತಿ ಸಿಬ್ಬಂದಿ ಹಾಜರಿದ್ದರು.