Advertisement

ತಹಶೀಲ್ದಾರ್‌ಗೆ ರಾಜ್ಯ ರತ್ನ ಪ್ರಶಸ್ತಿ ಪ್ರದಾನ

01:51 PM Oct 09, 2019 | Team Udayavani |

ಅಕ್ಕಿಆಲೂರು: ಗಿರಿಸಿನಕೊಪ್ಪ ಗ್ರಾಮದ ಖ್ಯಾತ ರಂಗಭೂಮಿ ಕಲಾವಿದ 77ರ ಹರೆಯದ ಅನಂತಪ್ಪ ತಿಮ್ಮಪ್ಪ ತಹಶೀಲ್ದಾರ್‌ ಅವರಿಗೆ ಲಕ್ಷ್ಮೇಶ್ವರದ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ರಾಜ್ಯ ರತ್ನ ಪ್ರಶಸ್ತಿ ಲಭಿಸಿದೆ. ಹಲವಾರು ದಶಕಗಳಿಂದ ಅನಂತಪ್ಪ ತಹಶೀಲ್ದಾರ್‌ ರಂಗಭೂಮಿ ಕಲಾ ಸೇವೆಯ ಮೂಲಕ ಗುರುತಿಸಿಕೊಂಡು ಜಾನಪದ ಕಲೆಗಳ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರ ಪ್ರಯುಕ್ತ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Advertisement

ಅನಂತಪ್ಪನವರು ಕಳೆದ 6 ದಶಕಗಳಿಂದ ದೊಡ್ಡಾಟ, ಸಣ್ಣಾಟ, ಪಾರಿಜಾತ ಕಲೆ, ಪೌರಾಣಿಕ ಕಲೆ, ಹಲವಾರು ಸಾಮಾಜಿಕ ನಾಟಕಗಳ ನಿರ್ದೇಶನ ಸೇರಿದಂತೆ ಹಾರ್ಮೋನಿಯಂ ವಾದನದ ಮೂಲಕ ಕಲೆಯ ಆರಾಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಕಲೆಯ ನಂಟನ್ನು ಬೆಳೆಸಿಕೊಂಡಿದ್ದ ಅವರು, 300ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ರಮಜಾನ್‌ ದರ್ಗಾ, ಮಾಜಿ ಸಂಸದ ಐ.ಜಿ.ಸನದಿ, ಕರಿಯಪ್ಪ ಶಿರಹಟ್ಟಿ, ಸಾಹಿತಿ ಬಿ.ಶ್ರೀನಿವಾಸ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next