Advertisement

ರೈತರ ಸಮಸ್ಯೆ ಪರಿಹರಿಸಲು ತಹಶೀಲ್ದಾರ್‌ಗೆ ಮನವಿ

12:35 PM Jan 11, 2020 | Suhan S |

ರಾಮದುರ್ಗ: ಬರ ಪರಿಹಾರ, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯ ವಿಮಾ ಹಣ ಹಾಗೂ ಮಹಿಳಾ ಸಂಘಗಳ ಸಮಸ್ಯೆಗಳು ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಹಿಳಾ ಘಟಕದ ಸದಸ್ಯರು ತಹಶೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಬರ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತೋರುತ್ತಿದ್ದು, ಕೂಡಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು.ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ ಹಣ ನೀಡುವಲ್ಲಿ ತಾರತಮ್ಯವೆಸಗಿದ್ದು, ಅದನ್ನು ಸರಿಪಡಿಸಿ ರೈತರಿಗೆ ಪರಿಹಾರ ಒದಗಿಸಬೇಕು. ಪ್ರವಾಹದಿಂದಾಗಿ ಭೂಮಿಯಲ್ಲಿನ ಮಣ್ಣು ಕೊಚ್ಚಿ ಹೋಗಿದ್ದು, ಕೂಡಲೇ ಭೂಮಿಯನ್ನು ಸರಿಪಡಿಸಿಕೊಡಬೇಕು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಪಂಪಸೆಟ್‌ಗಳಿಗೆ ಕೂಡಲೇ ವಿದ್ಯುತ್‌ ಪೂರೈಸಬೇಕು. ನೆರೆ ಸಂತ್ರಸ್ತರ ಸರ್ವೇ ಕಾರ್ಯ ಮಾಡುವಲ್ಲಿ ವಿಳಂಬವಾಗುತ್ತಿದ್ದು, ತ್ವರಿತಗತಿಯಲ್ಲಿ ಮುಗಿಸಿ ಪರಿಹಾರ ನೀಡಬೇಕು. ಕಳಸಾ-ಬಂಡೂರಿ ಯೋಜನೆಗೆ ಕೂಡಲೇ ಅಧಿಸೂಚನೆ ಹೊರಡಿಸಿ ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ಮಹಿಳಾ ಸಂಘಗಳಿಗೆ ಮೈಕ್ರೋ ಫೈನಾನ್ಸ್‌ ಮೂಲಕ ಸಾಲ ನೀಡಿದ್ದು, ಅವರು ಸಾಲ ವಸೂಲಿಗೆ ಮುಂದಾಗುತ್ತಿದ್ದಾರೆ.

ಸಾಲಕ್ಕೆ ಹೆದರಿ ಸಾಕಷ್ಟು ಕುಟುಂಬಗಳು ಊರು ಬಿಟ್ಟು ಹೋಗುತ್ತಿದ್ದು, ಸರಕಾರ ಮಧ್ಯಪ್ರವೇಶಿಸಿ ಮಹಿಳಾ ಸಂಘದ ಸದಸ್ಯರನ್ನು ಬೆಂಬಲಿಸಿ ಮೈಕ್ರೋ  ಫೈನಾನ್ಸ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕುಎಂಬಿತ್ಯಾದಿ ರೈತಪರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮದುರ್ಗ, ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ದೊಡಮನಿ, ಜಿಲ್ಲಾ ಕಾರ್ಯದರ್ಶಿ ಮಲ್ಲು ದೇಸಾಯಿ, ಜಗದೀಶ ದೇವರಡ್ಡಿ, ರೈತ ಮುಖಂಡರಾದ ಶಿವಾನಂದ ದೊಡವಾಡ, ಕೃಷ್ಣಗೌಡ ಪಾಟೀಲ, ನೂರಸಾಬ ಕಡಕೋಳ, ಸಿದ್ದವ್ವ ವಾಲಿಕಾರ, ಯಲ್ಲವ್ವ ಮೋಟೆ ಸೇರಿದಂತೆ  ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next