Advertisement

ಟಗರು ವಿಜಯೋತ್ಸವ

11:22 AM Mar 22, 2018 | Team Udayavani |

ಶಿವರಾಜಕುಮಾರ್‌ ಅಭಿನಯದ “ಟಗರು’ ಚಿತ್ರವು ಬಿಡುಗಡೆಯಾಗಿ 25 ದಿನಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈ ಸಂತೋಷದಲ್ಲಿ ಚಿತ್ರತಂಡವು ವಿಜಯೋತ್ಸವವನ್ನು ಆಚರಿಸುತ್ತಿದೆ. ಯುಗಾದಿ ಹಬ್ಬದಿಂದ ಈ ವಿಜಯೋತ್ಸವ ಯಾತ್ರೆಯು ಶುರುವಾಗಿದ್ದು, ಅಲ್ಲಿಂದ ಪ್ರತಿದಿನ ಚಿತ್ರತಂಡದವರು ಬೇರೆಬೇರೆ ಊರುಳಿಗೆ ಹೋಗಿ, ಈ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರುತ್ತಿದ್ದಾರೆ. ಮೊನ್ನೆ ಸೋಮವಾರ ಶಿವರಾಜಕುಮಾರ್‌ ಮತ್ತು ಧನಂಜಯ್‌ ಅವರು ಶಿವಮೊಗ್ಗದಲ್ಲಿ ನಡೆದ ಚಿತ್ರದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಂದಿದ್ದಾರೆ.

Advertisement

“ಟಗರು’ ಚಿತ್ರದ ಇನ್ನೊಂದು ವಿಶೇಷವೆಂದರೆ, “ಟಗರು ಬಂತು ಟಗರು …’ ಲಿರಿಕಲ್‌ ಹಾಡು ಯೂಟ್ಯೂಬ್‌ನಲ್ಲಿ ದೊಡ್ಡ ದಾಖಲೆ ಮಾಡಿದೆ. ಡಿಸೆಂಬರ್‌ 22ರಂದು ಈ ಹಾಡನ್ನು ಅಪ್‌ಲೋಡ್‌ ಮಾಡಲಾಗಿತ್ತು. ಈ ಹಾಡು ಇದೀಗ 1 ಕೋಟಿ 20 ಲಕ್ಷ ಹಿಟ್ಸ್‌ಗಳನ್ನು ಕಂಡಿದೆ. ಕನ್ನಡದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟಿ ಹಿಟ್ಸ್‌ ಕಂಡಿದ್ದು ಹೊಸದೇನಲ್ಲ. ಆದರೆ, ಮೂರು ತಿಂಗಳ ಅಂತರದಲ್ಲಿ 1.20 ಕೋಟಿ ಹಿಟ್ಸ್‌ ಪಡೆದಿದ್ದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ.

ಅಂಥದ್ದೊಂದು ದಾಖಲೆಯನ್ನು “ಟಗರು ಬಂತು ಟಗರು’ ಹಾಡು ಸದ್ದಿಲ್ಲದೆ ಮಾಡಿ ಮುಗಿಸಿದೆ. “ಟಗರು’ ಚಿತ್ರದಲ್ಲಿ ಶಿವರಾಜಕುಮಾರ್‌ ಎದುರು ಭಾವನಾ ಮೆನನ್‌ ಮತ್ತು ಮಾನ್ವಿತಾ ಹರೀಶ್‌ ನಾಯಕಿಯರಾಗಿ ನಟಿಸಿದ್ದು, ಧನಂಜಯ್‌, ಸುಧಿ ಮತ್ತು ವಸಿಷ್ಠ ನೆಗೆಟಿವ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿರುವುದು “ದುನಿಯಾ’ ಸೂರಿ. ಇನ್ನು ಕನಕಪುರ ಶ್ರೀನಿವಾಸ್‌ ಈ ಚಿತ್ರದ ನಿರ್ಮಾಪಕರು. ಚರಣ್‌ರಾಜ್‌ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next