ನವದೆಹಲಿ: ಸಾರ್ವಜನಿಕ ಸಂಸ್ಥೆಗಳಲ್ಲಿ ಆಗುತ್ತಿರುವ ನೇಮಕಾತಿಗಳನ್ನು ಮತ್ತಷ್ಟು ಶಿಸ್ತುಬದ್ಧವಾಗಿ ನಡೆಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯ ಅಧಿಕಾರಿಯನ್ನು ಸಾರ್ವಜನಿಕ ಉದ್ಯಮಗಳ ನೇಮಕಾತಿ ಮಂಡಳಿ (ಪಿಇಎಸ್‌ಬಿ) ಮುಖ್ಯಸ್ಥರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಟ್ರ್ಯಾಕ್ಟರ್ ತಯಾರಿಕಾ ರಂಗದಲ್ಲಿ ಹೆಸರು ಮಾಡಿರುವ ಟಾಫೆ ಕಂಪನಿಯ ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್ ಅವರು ಬಿಇಎಸ್‌ಬಿ ಮುಖ್ಯಸ್ಥರ ಹುದ್ದೆಗೆ ನೇಮಕಗೊಂಡಿದ್ದಾರೆ. ಅವರ ಸೇವಾವಧಿ ಮುಂದಿನ 3 ವರ್ಷ ಅಥವಾ ಮಲ್ಲಿಕಾ ಅವರಿಗೆ 65 ವರ್ಷ ಪೂರೈಸುವವರೆಗೆ ಜಾರಿಯಲ್ಲಿರಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಲ್ಲಿಕಾ, “ರಾಷ್ಟ್ರ ಸೇವೆಗೆ ಅವಕಾಶ ಸಿಕ್ಕಿರುವುದು ಗೌರವದ ವಿಚಾರ. ಸರ್ಕಾರದ ಆಯ್ಕೆಗೆ ಸಮರ್ಥನೆ ನೀಡುವಂತೆ ಕೆಲಸ ಮಾಡುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ಕಾರು ಮನೆಯಲ್ಲೇ ಇದ್ದರೂ 5 ಟೋಲ್‌ಗಳಲ್ಲಿ ಶುಲ್ಕ ಸಂಗ್ರಹ!