Advertisement

ಟಾಡಾ ನ್ಯಾಯಾಲಯದಲ್ಲಿ ಉಗ್ರ ಮಲಿಕ್‌ಗೆ ಹಿನ್ನಡೆ

10:13 AM Mar 16, 2020 | sudhir |

ಜಮ್ಮು: ವಾಯುಪಡೆ ಅಧಿಕಾರಿಗಳ ಮೇಲೆ 1990ರಲ್ಲಿ ನಡೆದ ಉಗ್ರ ದಾಳಿಯ ಪ್ರಮುಖ ಆರೋಪಿ ಯಾಸಿನ್‌ ಮಲಿಕ್‌ಗೆ ಜಮ್ಮುವಿನ ಟಾಡಾ ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಈ ಪ್ರಕರಣದಲ್ಲಿ ಯಾಸಿನ್‌ ಆರೋಪಿ ಎಂದು ಸಾಬೀತುಪಡಿಸುವ ಸಾಕಷ್ಟು ಪ್ರಾಥಮಿಕ ಸಾಕ್ಷ್ಯಗಳಿವೆ ಎಂದು ನ್ಯಾಯಾಲಯ ತಿಳಿಸಿದೆ.

Advertisement

1990ರ ಜ. 25ರಂದು ಜಮ್ಮುವಿನಲ್ಲಿ ಭಾರತೀಯ ವಾಯುಪಡೆಯ ಶಸ್ತ್ರಾಸ್ತ್ರರಹಿತ 40 ಅಧಿಕಾರಿಗಳ ತಂಡದ ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದರು.

ಈ ವೇಳೆ ನಾಲ್ವರು ಅಧಿಕಾರಿಗಳು ಮೃತಪಟ್ಟು, ಉಳಿದವರು ಗಾಯ ಗೊಂಡಿದ್ದರು. ಈ ಪ್ರಕರಣ ದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ ಉಗ್ರ ಸಂಘಟನೆ ಮುಖಂಡ ಯಾಸಿನ್‌ ಮಲಿಕ್‌ನನ್ನು ಭದ್ರತಾ ಪಡೆ ಸಿಬಂದಿ ಬಂಧಿಸಿದ್ದರು. ಇದರೊಂದಿಗೆ 1989- 90ರಲ್ಲಿ ಆಗಿನ ಗೃಹ ಸಚಿವ ಮುಫ್ತಿ ಮೊಹಮ್ಮದ್‌ ಸಯೀದ್‌ರ ಪುತ್ರಿ ರುಬಯ್ನಾ ಸಯೀದ್‌ರನ್ನು ಅಪಹರಿಸಿದ ಪ್ರಕರಣದಲ್ಲೂ ಮಲಿಕ್‌ ಪ್ರಮುಖ ಆರೋಪಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next