Advertisement

ಕೋವಿಡ್ 19 ವೈರಸ್ : 14 ರಾಜ್ಯಗಳಲ್ಲಿ ತಬ್ಲೀಘಿ ಸೋಂಕಿತರು

02:20 AM Apr 04, 2020 | Hari Prasad |

ತಬ್ಲೀಘಿ ಸಂಘಟನೆಯ ಸಮಾವೇಶದಿಂದ ಕೋವಿಡ್ 19 ವೈರಸ್ ಸೋಂಕಿಗೆ ಒಳಗಾಗಿರುವವರು ದೇಶದ 14 ರಾಜ್ಯಗಳಲ್ಲಿ ಹರಡಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಕರ್ನಾಟಕ, ದೆಹಲಿ, ಅಂಡಮಾನ್‌ ಮತ್ತು ನಿಕೋಬಾರ್‌, ಅಸ್ಸಾಂ, ಹಿಮಾಚಲ ಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಾಂಡ ಮತ್ತು ಉತ್ತರ ಪ್ರದೇಶದಲ್ಲಿ ಸೋಂಕಿತರು ಹರಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, ಸಮಾವೇಶದಿಂದಾಗಿ ಸೋಂಕು ಮತ್ತಷ್ಟು ಹರಡಿದೆ. ಭಾರತದಲ್ಲಿ ಶುಕ್ರವಾರದ ಹೊತ್ತಿಗೆ 2,301 ಪ್ರಕರಣಗಳು ಕಂಡುಬಂದಿದ್ದು ಇವರಲ್ಲಿ 56 ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ಒಟ್ಟು ಸೋಂಕಿತರ ಪೈಕಿ 157 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಪರೀಕ್ಷೆಗೆಂದು ದೇಶದಲ್ಲಿ ಒಟ್ಟು 182 ಪ್ರಯೋಗಾಲಯಗಳನ್ನು ನಿಗದಿಪಡಿಸಲಾಗಿದೆ. ಆ ಪೈಕಿ 130 ಸರ್ಕಾರಿ ಲ್ಯಾಬ್‌ ಗಳು. ಗುರುವಾರ ಒಟ್ಟು 8 ಸಾವಿರ ಸ್ಯಾಂಪಲ್‌ ಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಸೇತು ಮೊಬೈಲ್‌ ಆಪ್‌ ಅನ್ನು ಸುಮಾರು 30 ಲಕ್ಷ ಮಂದಿ ಡೌನ್‌ ಲೋಡ್‌ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

102 ಮಂದಿಗೆ ಸೋಂಕು
ಮಹಾರಾಷ್ಟ್ರದಲ್ಲಿ ಶುಕ್ರವಾರ ಹೊಸ ಪ್ರಕರಣ ಪತ್ತೆಯಾಗಿಲ್ಲವಾದರೂ, 423 ಪ್ರಕರಣಗಳ ಮೂಲಕ ದೇಶದಲ್ಲೇ ಅತೀ ಹೆಚ್ಚು ಸೋಂಕಿತರಿರುವ ರಾಜ್ಯ ಎನಿಸಿಕೊಂಡಿದೆ. ತಮಿಳುನಾಡಿನಲ್ಲಿ ಶುಕ್ರವಾರ ಹೊಸದಾಗಿ 102 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 411ಕ್ಕೇರಿದೆ.

Advertisement

ದೆಹಲಿಯಲ್ಲಿ 91 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ 384 ಪ್ರಕರಣಗಳು ವರದಿಯಾಗಿವೆ. ಅದೇ ರೀತಿ, ಒಂದೇ ದಿನದಲ್ಲಿ ಕೇರಳ 9 (ಒಟ್ಟು 295), ಉತ್ತರಪ್ರದೇಶ 44 (172), ರಾಜಸ್ಥಾನ 33 (166), ಆಂಧ್ರಪ್ರದೇಶ 12 (161), ಮಧ್ಯಪ್ರದೇಶ 22 (129), ಕರ್ನಾಟಕ 4 (128), ಗುಜರಾತ್‌ 7 (95), ಹರ್ಯಾಣ 8 (57) ಕೋವಿಡ್ 19 ವೈರಸ್ ಪ್ರಕರಣಗಳನ್ನು ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next