Advertisement

ಟೇಬಲ್‌ ಟೆನಿಸ್‌: ಭಾರತಕ್ಕೆ ಸೋಲು

11:01 PM Feb 21, 2024 | Team Udayavani |

ಬುಸಾನ್‌ (ದಕ್ಷಿಣ ಕೊರಿಯಾ): ಭಾರತದ ಪುರುಷರ ಹಾಗೂ ವನಿತಾ ಟೇಬಲ್‌ ಟೆನಿಸ್‌ ತಂಡಗಳೆರಡೂ “ವಿಶ್ವ ಟೀಮ್‌ ಚಾಂಪಿಯನ್‌ಶಿಪ್‌’ನ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿವೆ. ಇದರಿಂದ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ತಪ್ಪಿದೆ.

Advertisement

ಪುರುಷರ ತಂಡ ಕೊರಿಯಾ ಗಣರಾಜ್ಯ ವಿರುದ್ಧ 3-0 ಅಂತರದಿಂದ ಮುಗ್ಗರಿಸಿತು. ಹರ್ಮೀತ್‌ ದೇಸಾಯಿ, ಅಚಂತ ಶರತ್‌ ಕಮಲ್‌ ಮತ್ತು ಜಿ. ಸಥಿಯನ್‌ ಪರಾಭವಗೊಂಡರು.

ಇದಕ್ಕೂ ಮೊದಲು ವನಿತಾ ತಂಡ ಚೈನೀಸ್‌ ತೈಪೆ ವಿರುದ್ಧ 3-1 ಅಂತರ ದಿಂದ ಸೋಲನುಭವಿಸಿತ್ತು. ಏಕೈಕ ಜಯವನ್ನು ಮಣಿಕಾ ಬಾತ್ರಾ ಮೊದಲ ಸುತ್ತಿನಲ್ಲಿ ತಂದಿತ್ತಿದ್ದರು. ಬಳಿಕ ಶ್ರೀರಾಜ್‌ ಅಕುಲ, ಐಹಿಕಾ ಮುಖರ್ಜಿ ಮತ್ತು ದ್ವಿತೀಯ ಸುತ್ತಿನ ಸಿಂಗಲ್ಸ್‌ ಆಡಲಿಳಿದ ಮಣಿಕಾ ಗೆಲುವು ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next