Advertisement

ಟಿ20: ಲಂಕಾವನ್ನು ಕ್ಲೀನ್‌ಸ್ವೀಪ್‌ ಮಾಡಿದ ದ.ಆಫ್ರಿಕಾ

09:57 PM Mar 25, 2019 | Team Udayavani |

ಜೊಹಾನ್ಸ್‌ಬರ್ಗ್‌: ಪ್ರವಾಸಿ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯವನ್ನೂ ಗೆದ್ದ ದಕ್ಷಿಣ ಆಫ್ರಿಕಾ, ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

Advertisement

ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಅಂತಿಮ ಪಂದ್ಯವನ್ನು ಆಫ್ರಿಕಾ ಡಿಎಲ್‌ ನಿಯಮದಂತೆ 45 ರನ್ನುಗಳಿಂದ ಗೆದ್ದಿತು. ಮೊದಲು ಬ್ಯಾಟಿಂಗ್‌ ನಡೆಸಿದ ಹರಿಣಗಳ ಪಡೆ 2 ವಿಕೆಟಿಗೆ 198 ರನ್‌ ಪೇರಿಸಿತು. ಲಂಕಾ ಸರದಿಯ 12ನೇ ಓವರ್‌ ವೇಳೆ ಮಳೆ ಸುರಿದುದರಿಂದ ಗುರಿ ಬದಲಾಯಿತು. 17 ಓವರ್‌ಗಳಲ್ಲಿ 183 ರನ್‌ ಗಳಿಸುವ ಗುರಿ ಲಭಿಸಿತು. ಆದರೆ 15.4 ಓವರ್‌ಗಳಲ್ಲಿ 137ಕ್ಕೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ 2 ವಿಕೆಟಿಗೆ 198 (ಪ್ರಿಟೋರಿಯಸ್‌ ಔಟಾಗದೆ 77, ಹೆಂಡ್ರಿಕ್ಸ್‌ 66). ಶ್ರೀಲಂಕಾ 15.4 ಓವರ್‌ಗಳಲ್ಲಿ 137 (ಡಿಕ್ವೆಲ್ಲ 38, ಉದಾನ 36, ಫೆಲುಕ್ವಾಯೊ 24ಕ್ಕೆ 4).

Advertisement

Udayavani is now on Telegram. Click here to join our channel and stay updated with the latest news.

Next