Advertisement
ಸದ್ಯ ಬಣ ಎರಡರಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನದಲ್ಲಿದೆ. ಒಂದು ವೇಳೆ ಭಾರತ ಮತ್ತು ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದರೆ ಈ ಎರಡು ತಂಡಗಳು ಸೆಮಿಫೈನಲಿಗೇರಲಿದೆ. ಒಂದು ವೇಳೆ ಭಾರತ ಸೋತರೆ ಪಾಕಿಸ್ಥಾನವು ಬಾಂಗ್ಲಾದೇಶದ ವಿರುದ್ಧ ಜಯ ಸಾಧಿಸಿದರೆ ಆದು ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಸೆಮಿಫೈನಲಿಗೆ ಏರಲಿದೆ.
ಗೆಲ್ಲಲೇಬೇಕಾದ ಈ ಮಹತ್ವದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಹರಿಸಲಿದೆ. ನಾಯಕ ರೋಹಿತ್ ಶರ್ಮ ಜಿಂಬಾಬ್ವೆ ವಿರುದ್ಧ ಭರ್ಜರಿ ಆಟದ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಅವರ ಜತೆ ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಉತ್ತಮ ನಿರ್ವಹಣೆ ನೀಡಲು ಹಾತೊರೆಯುತ್ತಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ 74 ರನ್ ಗಳಿಸಿರುವ ನಾಯಕ ರೋಹಿತ್‌ಗೆ ಮೆಲ್ಬರ್ನ್ನ ಈ ಪಿಚ್ ನೆಚ್ಚಿನ ತಾಣವಾಗಿದೆ. ಇಲ್ಲಿ ಅವರು ಬಿಳಿ ಚೆಂಡಿನಲ್ಲಿ ಕೆಲವು ಶತಕ ಸಿಡಿಸಿದ್ದಾರೆ.
Related Articles
Advertisement
ಈ ಕೂಟದಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದ್ದ ಜಿಂಬಾಬ್ವೆ ಆಬಳಿಕ ನೀರಸವಾಗಿ ಆಡಿದೆ. ಜಿಂಬಾಬ್ವೆಯ ಬ್ಯಾಟಿಂಗ್ ಸಾಧಾರಣ ಮಟ್ಟದಲ್ಲಿದೆ. ಭುವನೇಶ್ವರ್ ಕುಮಾರ್, ಅರ್ಷದೀಪ್ ಮತ್ತು ಮೊಹಮ್ಮದ್ ಶಮಿ ಅವರ ದಾಳಿಯೆದುರು ಭರ್ಜರಿ ಬ್ಯಾಟಿಂಗ್ ನಿರ್ವಹಣೆ ನೀಡಲು ಜಿಂಬೆಬ್ವೆಗೆ ಕಷ್ಟವೆಂದು ಹೇಳಬಹುದು. ಕ್ರೆಗ್ ಇರ್ವಿನ್, ಸೀನ್ ಇರ್ವಿನ್, ರಿಯಾನ್ ಬರ್ಲ್ ಮತ್ತು ಸೀನ್ ವಿಲಿಯಮ್ಸ್ ಅವರು ಭಾರತೀಯ ದಾಳಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.
ಪಾಕಿಸ್ಥಾನದಲ್ಲಿ ಹುಟ್ಟಿದ ಸಿಕಂದರ್ ರಾಜ ಸ್ವಲ್ಪಮಟ್ಟಿಗೆ ಭಾರತಕ್ಕೆ ಹೊಡೆತ ನೀಡುವ ನಿರೀಕ್ಷೆಯಿದೆ. ಉತ್ತಮ ನಿರ್ವಹಣೆ ನೀಡುತ್ತಿರುವ ಅವರು ಭಾರತ ವಿರುದ್ಧ ಮಿಂಚುವ ಉತ್ಸಾಹದಲ್ಲಿದ್ದಾರೆ.
ಇಂದಿನ ಪಂದ್ಯದ. ಆಫ್ರಿಕಾ-ನೆದರ್ಲೆಂಡ್ಸ್
ಆರಂಭ: ಬೆಳಗ್ಗೆ 5.30
ಸ್ಥಳ: ಅಡಿಲೇಡ್ ಪಾಕಿಸ್ಥಾನ-ಬಾಂಗ್ಲಾದೇಶ
ಆರಂಭ: ಬೆಳಗ್ಗೆ 9.30
ಸ್ಥಳ: ಅಡಿಲೇಡ್ ಭಾರತ-ಜಿಂಬಾಬ್ವೆ
ಆರಂಭ: ಮ. 1.30
ಸ್ಥಳ: ಮೆಲ್ಬರ್ನ್
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್