Advertisement

ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಕನ್ನಡಿಗ ರಾಬಿನ್‌ ಉತ್ತಪ್ಪ

08:00 PM Sep 14, 2022 | Team Udayavani |

ಮುಂಬಯಿ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

Advertisement

2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46  ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ. 86 ಅವರ ಸರ್ವಾಧಿಕ ರನ್.‌

2007 ರ ಟಿ-20 ವಿಶ್ವಕಪ್‌  ತಂಡಕ್ಕೆ ಆಯ್ಕೆಯಾಗಿದ್ದ ಉತ್ತಪ್ಪ ಪಾಕಿಸ್ತಾನ ವಿರುದ್ಧದ ಸಮಬಲಗೊಂಡ ಪಂದ್ಯದಲ್ಲಿ ಬಾಲ್‌ ಶೂಟೌಟ್‌ ನಲ್ಲಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ್ದರು. 13 ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನಾಡಿರುವ ಅವರು, 118.01 ಸ್ಟ್ರೈಕ್‌ ರೇಟ್‌ ನೊಂದಿಗೆ 249 ರನ್‌ ಗಳಿಸಿದ್ದಾರೆ.

2015 ರಲ್ಲಿ ಕೊನೆಯ ಬಾರಿ ಜಿಂಬಾಬ್ಬೆ ವಿರುದ್ಧದ ಏಕದಿನ ಹಾಗೂ ಟಿ-20 ಯನ್ನು ಆಡಿದ್ದರು. ಐಪಿಎಲ್‌ ನಲ್ಲಿ  ಮಂಬಯಿ, ಆರ್‌ ಸಿಬಿ, ಕೆಕೆಆರ್‌, ರಾಜಸ್ಥಾನ್‌ ರಾಯಲ್ಸ್‌, ಸಿಎಸ್‌ ಕೆ ಪರವಾಗಿ ಆಡಿದ್ದರು. ಐಪಿಎಲ್‌ ನಲ್ಲಿ 205 ಪಂದ್ಯವನ್ನಾಡಿ ಒಟ್ಟು 4952 ರನ್‌ ಗಳನ್ನು ಮಾಡಿದ್ದಾರೆ.

ಟ್ವೀಟ್‌ ನಲ್ಲಿ ನಿವೃತ್ತಿ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ನಾನು ಕ್ರಿಕೆಟ್‌ ಆಡಲು ಶುರು ಮಾಡಿ 20 ವರ್ಷವಾಯಿತು. ನನ್ನ ದೇಶ, ರಾಜ್ಯಕ್ಕಾಗಿ ಆಡಿರುವುದು ನನ್ನ ಪಾಲಿಗೆ ದೊಡ್ಡ ಹೆಮ್ಮೆಯ ಸಂಗತಿ. ಈ ಜರ್ನಿಯಲ್ಲಿ ಹಲವಾರು ಬಾರಿ ಏರು – ತಗ್ಗನ್ನು ಕಂಡಿದ್ದೇನೆ. ವ್ಯಕ್ತಿಯಾಗಿ ಕ್ರಿಕೆಟ್‌ ಬೆಳೆಯಲು ಅವಕಾಶ ನೀಡಿದೆ. ಎಲ್ಲಾ ಒಳ್ಳೆಯ ವಿಷಯಕ್ಕೆ ಅಂತ್ಯವೆನ್ನುವುದು ಬರುತ್ತದೆ.  ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ. ಜೀವನದ ಮುಂದಿನ ಹಂತವನ್ನು ಆರಂಭಿಸಲಿದ್ದೇನೆ ಎಂದಿದ್ದಾರೆ.

Advertisement

ಇಷ್ಟು ವರ್ಷ ಕ್ರಿಕೆಟ್‌ ವೃತ್ತಿ ಬೆಳೆಯಲು ಅವಕಾಶ ಕೊಟ್ಟ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ, ಸೌರಾಷ್ಟ್ರ ಕ್ರಿಕೆಟ್ ಮಂಡಳಿ ,ಕೇರಳಕ್ರಿಕೆಟ್ ಮಂಡಳಿಗೆ ಧನ್ಯವಾದಗಳು. ಇದರೊಂದಿಗ ಐಪಿಎಲ್‌ ನಲ್ಲಿ ಆಡಿದ ತಂಡಗಳಿಗೂ, ಕುಟುಂಬ ವರ್ಗಕ್ಕೂ ಧನ್ಯವಾದವನ್ನು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next