Advertisement
ಟಿ20 ವಿಶ್ವಕಪ್ ಕೂಟದ 2ನೇ ವಿಭಾಗದ ಪಂದ್ಯದಲ್ಲಿ ರವಿವಾರ ರಾತ್ರಿ ಭಾರತ-ಪಾಕಿಸ್ಥಾನ ಮುಖಾಮುಖಿಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂದ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಜೋಶ್ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ.
Related Articles
Advertisement
ಇದನ್ನೂ ಓದಿ:ಟಿ20 ವಿಶ್ವಕಪ್: ವಿಂಡೀಸ್ ವಿರುದ್ಧ ಇಂಗ್ಲೆಂಡ್ಗೆ ಜಯ
ಬಲಾಬಲದ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಸಶಕ್ತ. ಆದರೆ ಯುಎಇಯಲ್ಲೇ ಆಡಿದ ಐಪಿಎಲ್ ಅನುಭವ ಕೊಹ್ಲಿ ಪಡೆಗೊಂದು ವರದಾನ. ಪಾಕ್ ಸವಾಲನ್ನು ಎಂದೂ ಒತ್ತಡವಾಗಿ ತೆಗೆದುಕೊಳ್ಳದೆ, ಬಿಂದಾಸ್ ಹಾಗೂ ಜಾಲಿಯಾಗಿ ಆಡುವುದೇ ಭಾರತದ ರಣತಂತ್ರ.
ಪಾಕಿಸ್ಥಾನದ ಸ್ಥಿತಿ ಇದಕ್ಕೆ ತದ್ದಿರುದ್ಧ. ಅದು ಸದಾ ಒತ್ತಡದಲ್ಲೇ ಮುಳುಗಿರುತ್ತದೆ. ಮತ್ತು ಈ ಒತ್ತಡ ಎಲ್ಲ ದಿಕ್ಕುಗಳಿಂದಲೂ ಮುನ್ನುಗ್ಗಿ ಬರುತ್ತದೆ. ಆದರೆ ಎರಡನೇ ತವರಾಗಿರುವ ಯುಎಇಯಲ್ಲಿ ಟಿ20 ದಾಖಲೆ ಉತ್ತಮ ಮಟ್ಟದಲ್ಲಿರುವುದು ಪಾಕ್ ಪಾಲಿಗೊಂದು ಸಮಾಧಾನ.
ಇತ್ತಂಡಗಳ ಬಲಾಬಲರೋಹಿತ್, ರಾಹುಲ್, ಕೊಹ್ಲಿ, ಇಶಾನ್ ಕಿಶನ್, ಸೂರ್ಯಕುಮಾರ್, ಪಂತ್, ಜಡೇಜ ಅವರನ್ನೊಳಗೊಂಡ ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದೆ. ಅಫ್ರಿದಿ, ಅಲಿ, ರವೂಫ್, ಇಮಾದ್, ಶದಾಬ್ ಅವರೆಲ್ಲ ಪಾಕಿಸ್ಥಾನದ ಬೌಲಿಂಗ್ ಶಕ್ತಿಯಾಗಿದ್ದಾರೆ. ಬುಮ್ರಾ, ಶಮಿ, ಅಶ್ವಿನ್, ಚಕ್ರವರ್ತಿ, ಜಡೇಜ, ಭುವನೇಶ್ವರ್, ಠಾಕೂರ್ ಭಾರತದ ಬೌಲಿಂಗ್ ಅಸ್ತ್ರಗಳು. ಬಾಬರ್, ರಿಜ್ವಾನ್, ಫಕರ್ ಜಮಾನ್, ಭಾರತದ ವಿರುದ್ಧ ಸದಾ ಕ್ಲಿಕ್ ಆಗುವ “ಟು ಓಲ್ಡ್ ಮೆನ್’ ಹಫೀಜ್ ಮತ್ತು ಮಲಿಕ್ ಅವರನ್ನು ನಮ್ಮ ಬೌಲಿಂಗ್ ಪಡೆ ನಿಯಂತ್ರಿಸಬೇಕಿದೆ. ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ಬೌಲರ್‌ಗಳು ಮಿಂಚುವುದರಲ್ಲಿ ಅನುಮಾನವಿಲ್ಲ. ಆದರೆ ಇವರ ಎಸೆತಗಳನ್ನು ಪುಡಿಗಟ್ಟಿದವರಿಗೆ ಗೆಲುವಿನ ಅವಕಾಶ ಹೆಚ್ಚು. ಭಾರತವಿಲ್ಲಿ ಗೆದ್ದು ಬರಲಿ. ಪಾಕ್ ವಿರುದ್ಧ ಡಜನ್ ಗೆಲುವು!
ಒಂದಲ್ಲ, ಎರಡಲ್ಲ… ಪಾಕಿಸ್ಥಾನ ವಿರುದ್ಧ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಭಾರತದ ಸಾಧಿಸಿದ್ದು ಬರೋಬ್ಬರಿ 12 ಗೆಲುವು. ಇನ್ನೂ ಗತ್ತಿನಿಂದ ಹೇಳಬೇಕೆಂದರೆ, ಆಡಿದ ಹನ್ನೆರಡೂ ಪಂದ್ಯಗಳಲ್ಲಿ ಜಯಭೇರಿ! 7 ಗೆಲುವು ಏಕದಿನ ವಿಶ್ವಕಪ್‌ನಲ್ಲಿ ಒಲಿದರೆ, 5 ಜಯ ಟಿ20 ವಿಶ್ವಕಪ್‌ನಲ್ಲಿ ಬಂದಿದೆ. ಪಾಕಿಸ್ಥಾನವಿನ್ನೂ ವಿಶ್ವಕಪ್‌ನಲ್ಲಿ ಭಾರತದೆದುರು ಗೆಲುವಿನ ಹುಡುಕಾಟದಲ್ಲೇ ಇದೆ. ಭಾರತ ಗೆಲುವಿನ ತೋರಣ ಕಟ್ಟಲಾರಂಭಿಸಿದ್ದು 1992ರ ಏಕದಿನ ವಿಶ್ವಕಪ್‌ನಲ್ಲಿ. ಅಂದು ಇಮ್ರಾನ್ ಖಾನ್ ನೇತೃತ್ವದ ಪಾಕ್ ಚಾಂಪಿಯನ್ ಆಗಿ ಹೊರಹೊಮ್ಮಿತಾದರೂ ಲೀಗ್ ಹಂತದಲ್ಲಿ ಪಾಕ್ ಭಾರತಕ್ಕೆ ಶರಣಾಗಿತ್ತು. ಅಲ್ಲಿಂದ ಮೊದಲ್ಗೊಂಡು 2019ರ ವಿಶ್ವಕಪ್ ತನಕ ಪಾಕ್ ಪಡೆ ಭಾರತದೆದುರು ಹಿಮ್ಮೆಟ್ಟುತ್ತಲೇ ಇದೆ. ಪಾಕಿಸ್ಥಾನಕ್ಕೆ ಗೆಲುವಿನ ಅವಕಾಶವಿದ್ದದ್ದು ಒಮ್ಮೆ ಮಾತ್ರ. ಅದು 2007ರ ಟಿ20 ವಿಶ್ವಕಪ್ ಕೂಟದ ಲೀಗ್ ಹಣಾಹಣಿ. ಡರ್ಬನ್‌ನ ಕಿಂಗ್ಸ್ ಮೀಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಎರಡೂ ತಂಡಗಳು 141 ರನ್ ಬಾರಿಸಿದ್ದರಿಂದ ಪಂದ್ಯ ಟೈ ಆಗಿತ್ತು. ಆಗ ಸೂಪರ್ ಓವರ್ ಇರಲಿಲ್ಲ. ಸ್ಟಂಪ್‌ಗೆ ಚೆಂಡನ್ನೆಸೆಯುವ ಕ್ರಮವನ್ನು ಅಳವಡಿಸಲಾಗಿತ್ತು. ಇಲ್ಲಿಯೂ ಲಕ್ ಭಾರತಕ್ಕೆ ಒಲಿದಿತ್ತು! ಆದರೆ… 2016ರಿಂದ ದುಬಾೖಯಲ್ಲಿ ಆಡಿದ ಸತತ 6 ಟಿ20 ಪಂದ್ಯಗಳಲ್ಲಿ ಪಾಕಿಸ್ಥಾನ ಜಯ ಗಳಿಸಿದೆ. ಪಾಕ್ 12ರ ಬಳಗ ಪ್ರಕಟ
ಒಂದು ದಿನ ಮೊದಲೇ ಪಾಕಿಸ್ಥಾನ 12ರ ಬಳಗವನ್ನು ಪ್ರಕಟಿಸಿದೆ. ಸಫìರಾಜ್ ಅಹ್ಮದ್, ಮೊಹಮ್ಮದ್ ವಾಸಿಮ್ ಮತ್ತು ಮೊಹಮ್ಮದ್ ನವಾಜ್ ಅವರನ್ನು ಹೊರಗಿರಿಸಿದೆ. ಹಿರಿಯ ಆಟಗಾರರಾದ ಹಫೀಜ್ ಮತ್ತು ಮಲಿಕ್ ಈ ತಂಡದಲ್ಲಿದ್ದಾರೆ. ಪಾಕಿಸ್ಥಾನ ತಂಡ: ಬಾಬರ್ ಆಜಮ್ (ನಾಯಕ), ಆಸಿಫ್ ಅಲಿ, ಫಕರ್ ಜಮಾನ್, ಹೈದರ್ ಅಲಿ, ಮೊಹಮ್ಮದ್ ರಿಜ್ವಾನ್, ಇಮಾದ್ ವಾಸಿಮ್, ಮೊಹಮ್ಮದ್ ಹಫೀಜ್, ಶದಾಬ್ ಖಾನ್, ಶೋಯಿಬ್ ಮಲಿಕ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಹೀನ್ ಶಾ ಅಫ್ರಿದಿ. ಭಾರತ ಸಂಭಾವ್ಯ ತಂಡ: ಕೆ.ಎಲ್. ರಾಹುಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ (ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಇಶಾನ್ ಕಿಶನ್, ರವೀಂದ್ರ ಜಡೇಜ, ಆರ್. ಅಶ್ವಿನ್, ಹಾರ್ದಿಕ್ ಪಾಂಡ್ಯ/ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ. ಭಾರತ-ಪಾಕಿಸ್ಥಾನ
ಸ್ಥಳ: ದುಬಾೖ, ಆರಂಭ: 7.30,
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್