Advertisement

ಟಿ20 ವಿಶ್ವಕಪ್‌: ಪಾಕಿಸ್ಥಾನವನ್ನು ಹೊರದಬ್ಬಿದ ಆಸ್ಟ್ರೇಲಿಯ

11:37 PM Nov 11, 2021 | Team Udayavani |

ದುಬಾೖ: ಪಾಕಿಸ್ಥಾನದ ಓಟಕ್ಕೆ ಭರ್ಜರಿ ಬ್ರೇಕ್‌ ಹಾಕಿದ ಆಸ್ಟ್ರೇಲಿಯ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿರಿಸಿದೆ. ಗುರುವಾರದ ದ್ವಿತೀಯ ಸೆಮಿಫೈನಲ್‌ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದ ಫಿಂಚ್‌ ಬಳಗ ರವಿವಾರದ ಪ್ರಶಸ್ತಿ ಸಮರದಲ್ಲಿ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.

Advertisement

ಇಲ್ಲಿ ಯಾರೇ ಗೆದ್ದರೂ ಮೊದಲ ಸಲ ಚಾಂಪಿಯನ್‌ ಆಗಲಿದ್ದಾರೆ.

ಮೊದಲು ಬ್ಯಾಟಿಂಗಿಗೆ ಆಹ್ವಾನಿಸಲ್ಪಟ್ಟ ಪಾಕಿಸ್ಥಾನ 4 ವಿಕೆಟಿಗೆ 176 ರನ್‌ ಪೇರಿಸಿದರೆ, ಆಸ್ಟ್ರೇಲಿಯ 19 ಓವರ್‌ಗಳಲ್ಲಿ 5 ವಿಕೆಟಿಗೆ 177 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಅಫ್ರಿದಿ ಓವರ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಬಾರಿಸಿದ ಮ್ಯಾಥ್ಯೂ ವೇಡ್‌ (17 ಎಸೆತ, ಅಜೇಯ 41, 4 ಸಿಕ್ಸರ್‌, 3 ಫೋರ್‌) ಕಾಂಗರೂ ಗೆಲುವನ್ನು ಸಾರಿದರು.

3ನೇ ಎಸೆತದಲ್ಲೇ ನಾಯಕ ಫಿಂಚ್‌ (0) ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದ ಅಫ್ರಿದಿ ಪಾಕಿಸ್ಥಾನಕ್ಕೆ ಮೇಲುಗೈ ಒದಗಿಸಿದರು. ಅನಂತರದ 4 ವಿಕೆಟ್‌ಗಳನ್ನು ಸ್ಪಿನ್ನರ್‌ ಶದಾಬ್‌ ಖಾನ್‌ ಉರುಳಿಸಿದರು. ವಾರ್ನರ್‌ (49) ಉತ್ತಮ ಹೋರಾಟ ಸಂಘಟಿಸಿದರು. ಆದರೆ ಸ್ಮಿತ್‌, ಮ್ಯಾಕ್ಸ್‌ವೆಲ್‌ ಅಗ್ಗಕ್ಕೆ ಉರುಳಿದರು. ಕೊನೆಯಲ್ಲಿ ವೇಡ್‌ ಮತ್ತು ಸ್ಟೋಯಿನಿಸ್‌ 81 ರನ್‌ ಜತೆಯಾಟ ನಿಭಾಯಿಸಿ ಪಾಕಿಸ್ಥಾನದ ಹಾರಾಟವನ್ನು ಕೊನೆಗೊಳಿಸಿದರು.

ಪಾಕ್‌ ಜಬರ್ದಸ್ತ್ ಆರಂಭ
ಓಪನರ್‌ ಮೊಹಮ್ಮದ್‌ ರಿಜ್ವಾನ್‌ ಮತ್ತು ಫ‌ಕರ್‌ ಜಮಾನ್‌ ಅವರ ಆಕರ್ಷಕ ಅರ್ಧ ಶತಕ, 2 ಅತ್ಯುತ್ತಮ ಜತೆಯಾಟ ಪಾಕ್‌ ಸರದಿಯ ಆಕರ್ಷಣೆಯಾಗಿತ್ತು. ಬೌಲಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯದ ಯೋಜನೆ ಸಂಪೂರ್ಣವಾಗಿ ತಲೆ ಕೆಳಗಾಯಿತು.

Advertisement

ನಾಯಕ ಬಾಬರ್‌ ಆಜಂ ಮತ್ತು ಮೊಹಮ್ಮದ್‌ ರಿಜ್ವಾನ್‌ ಬಿರುಸಿನ ಆರಂಭವಿತ್ತರು. ಪವರ್‌ ಪ್ಲೇಯಲ್ಲಿ ಆಸ್ಟ್ರೇಲಿಯದ ನಾಲ್ವರ ಬೌಲಿಂಗ್‌ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿ 47 ರನ್‌ ಒಟ್ಟುಗೂಡಿಸಿದರು. ಈ ಅವಧಿಯಲ್ಲಿ ರಿಜ್ವಾನ್‌ಗೆ 2 ಜೀವದಾನ ಕೂಡ ಸಿಕ್ಕಿತು.

ಇದು ಈ ಕೂಟದ ಮೊದಲ 6 ಓವರ್‌ಗಳಲ್ಲಿ ಪಾಕಿಸ್ಥಾನ ಗಳಿಸಿದ ಅತ್ಯಧಿಕ ರನ್‌ ಆಗಿದೆ. ಭಾರತದೆದುರಿನ ಮೊದಲ ಪಂದ್ಯದಲ್ಲಿ 43 ರನ್‌ ಬಾರಿಸಿದ್ದು ಈವರೆಗಿನ ದೊಡ್ಡ ಮೊತ್ತವಾಗಿತ್ತು. 6.4 ಓವರ್‌ಗಳಲ್ಲಿ ಪಾಕಿಸ್ಥಾನದ 50 ರನ್‌ ಪೂರ್ತಿಗೊಂಡಿತು.

ಬಾಬರ್‌-ರಿಜ್ವಾನ್‌ ಜೋಡಿಯನ್ನು ಬೇರ್ಪಡಿಸಲು ಆಸ್ಟ್ರೇಲಿಯ ಭರ್ತಿ 10 ಓವರ್‌ ಕಾಯಬೇಕಾಯಿತು. ಕೊನೆಗೂ ಝಂಪ ಇದರಲ್ಲಿ ಯಶಸ್ಸು ಸಾಧಿಸಿದರು. 34 ಎಸೆತಗಳಿಂದ 39 ರನ್‌ ಮಾಡಿದ ಬಾಬರ್‌ ವಾರ್ನರ್‌ಗೆ ಕ್ಯಾಚ್‌ ನೀಡಿ ವಾಪಸಾದರು (5 ಬೌಂಡರಿ). ಬಾಬರ್‌ ಈ ಟೂರ್ನಿಯಲ್ಲಿ 300 ರನ್‌ ಪೇರಿಸಿದ ಮೊದಲ ಬ್ಯಾಟ್ಸ್‌ ಮನ್‌ ಎನಿಸಿದರು. ಇವರಿಬ್ಬರಿಂದ ಮೊದಲ ವಿಕೆಟಿಗೆ 71 ರನ್‌ ಒಟ್ಟುಗೂಡಿತು. ಇದರೊಂದಿಗೆ ಟಿ20 ವಿಶ್ವಕಪ್‌ ಇತಿಹಾಸದಲ್ಲಿ 400 ರನ್‌ ಪೇರಿಸಿದ ಮೊದಲ ಜೋಡಿ ಎಂಬ ದಾಖಲೆ ಬಾಬರ್‌-ರಿಜ್ವಾನ್‌ ಅವರದ್ದಾಯಿತು.

ಸ್ಕೋರ್‌ ಪಟ್ಟಿ
ಪಾಕಿಸ್ಥಾನ
ಮೊಹಮ್ಮದ್‌ ರಿಜ್ವಾನ್‌ ಸಿ ಸ್ಮಿತ್‌ ಬಿ ಸ್ಟಾರ್ಕ್‌ 67
ಬಾಬರ್‌ ಆಜಂ ಸಿ ವಾರ್ನರ್‌ ಬಿ ಝಂಪ 39
ಫ‌ಕರ್‌ ಜಮಾನ್‌ ಔಟಾಗದೆ 55
ಆಸಿಫ್ ಅಲಿ ಸಿ ಸ್ಮಿತ್‌ ಬಿ ಕಮಿನ್ಸ್‌ 0
ಶೋಯಿಬ್‌ ಮಲಿಕ್‌ ಬಿ ಸ್ಟಾರ್ಕ್‌ 1
ಮೊಹಮ್ಮದ್‌ ಹಫೀಜ್‌ ಔಟಾಗದೆ 1
ಇತರ 13
ಒಟ್ಟು (4 ವಿಕೆಟಿಗೆ) 176
ವಿಕೆಟ್‌ ಪತನ:1-71, 2-143, 3-158, 4-162.
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 4-0-38-2
ಜೋಶ್‌ ಹ್ಯಾಝಲ್‌ವುಡ್‌ 4-0-49-0
ಗ್ಲೆನ್‌ ಮ್ಯಾಕ್ಸ್‌ವೆಲ್‌ 3-0-20-0
ಪ್ಯಾಟ್‌ ಕಮಿನ್ಸ್‌ 4-0-30-1
ಆ್ಯಡಂ ಝಂಪ 4-0-22-1
ಮಿಚೆಲ್‌ ಮಾರ್ಷ್‌ 1-0-11-0

ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌ ಸಿ ರಿಜ್ವಾನ್‌ ಬಿ ಶಾಬಾದ್‌ 49
ಆರನ್‌ ಫಿಂಚ್‌ ಎಲ್‌ಬಿಡಬ್ಲ್ಯು ಬಿ ಅಫ್ರಿದಿ 0
ಮಿಚೆಲ್‌ ಮಾರ್ಷ್‌ ಸಿ ಅಲಿ ಬಿ ಶಾಬಾದ್‌ 28
ಸ್ಟೀವನ್‌ ಸ್ಮಿತ್‌ ಸಿ ಜಮಾನ್‌ ಬಿ ಶಾಬಾದ್‌ 5
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ರವೂಫ್ ಬಿ ಶಾಬಾದ್‌ 7
ಮಾರ್ಕಸ್‌ ಸ್ಟೋಯಿನಿಸ್‌ ಔಟಾಗದೆ 40
ಮ್ಯಾಥ್ಯೂ ವೇಡ್‌ ಔಟಾಗದೆ 41
ಇತರ 7
ಒಟ್ಟು (19 ಓವರ್‌ಗಳಲ್ಲಿ 5ವಿಕೆಟಿಗೆ) 177
ವಿಕೆಟ್‌ ಪತನ:1-1, 2-52, 3-77, 4-89, 5-96.
ಬೌಲಿಂಗ್‌; ಶಾಹೀನ್‌ ಅಫ್ರಿದಿ 4-0-35-1
ಇಮಾದ್‌ ವಾಸಿಂ 3-0-25-0
ಹ್ಯಾರಿಸ್‌ ರವೂಫ್ 3-0-32-0
ಹಸನ್‌ ಅಲಿ 4-0-44-0
ಶಾಬಾದ್‌ ಖಾನ್‌ 4-0-26-4
ಮೊಹಮ್ಮದ್‌ ಹಫೀಜ್‌ 1-0-13-0

Advertisement

Udayavani is now on Telegram. Click here to join our channel and stay updated with the latest news.

Next