Advertisement

“ಟಿ20 ವಿಶ್ವಕಪ್‌ ಮುಂದೂಡಿಕೆಯನ್ನು ಐಪಿಎಲ್‌ ಲಾಭಕ್ಕೆ ಬಳಸುವುದಿಲ್ಲ’

02:16 AM May 23, 2020 | Sriram |

ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಮುಂದೂಡಲ್ಪಟ್ಟರೂ ತಾನು ಈ ಅವಕಾಶವನ್ನು ಐಪಿಎಲ್‌ ನಡೆಸಲು ಬಳಸಿಕೊಳ್ಳುವುದಿಲ್ಲ ಎಂದು ಬಿಸಿಸಿಐ ಆಸ್ಟ್ರೇಲಿಯ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದೆ. ಅಕ್ಟೋಬರ್‌-ನವಂಬರ್‌ ತಿಂಗಳಲ್ಲಿ ಅವಕಾಶ ಸಿಕ್ಕಿದರಷ್ಟೇ ಇದನ್ನು ಐಪಿಎಲ್‌ಗೆ ಪರಿಗಣಿಸಲಾಗುವುದು ಎಂದಿದೆ.

Advertisement

ಅ. 18ರಿಂದ ಆಸೀಸ್‌ನ‌ಲ್ಲಿ ಟಿ20 ವಿಶ್ವಕಪ್‌ ಆರಂಭವಾಗಬೇಕಿದೆ. ಆದರೆ ಬಿಸಿಸಿಐ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಮೇಲೆ ಒತ್ತಡ ಹೇರಿ ಐಪಿಎಲ್‌ಗೋಸ್ಕರ ಇದನ್ನು
ಮುಂದೂಡಲು ಪ್ರಯತ್ನಿಸುತ್ತಿದೆ ಎಂದು ಆಸೀಸ್‌ ಮಾಧ್ಯಮಗಳು ವರದಿ ಮಾಡಿವೆ.

ಐಸಿಸಿ ನಿರ್ಧಾರವೇ ಅಂತಿಮ
“ನಾವೇಕೆ ಟಿ20 ವಿಶ್ವಕಪ್‌ ಪಂದ್ಯಾವಳಿಯನ್ನು ಮುಂದೂಡಲು ಹೇಳುತ್ತೇವೆ? ಬಿಸಿಸಿಐ ಏಕೆ ಇದರಲ್ಲಿ ಮಧ್ಯ ಪ್ರವೇಶಿಸುತ್ತದೆ? ಇದು ಐಸಿಸಿ ನಡೆಸುವ ಕೂಟವೇ ಹೊರತು ನಮ್ಮ ನಡುವಿನ ದ್ವಿಪಕ್ಷೀಯ ಸರಣಿ ಅಲ್ಲ. ಐಸಿಸಿ ಹಾಗೂ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯ ತೀರ್ಮಾನವೇ ಇಲ್ಲಿ ಅಂತಿಮ’ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಸಿಂಗ್‌ ಧುಮಾಲ್‌ ಹೇಳಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆವಿನ್‌ ರಾಬರ್ಟ್ಸ್ ಕೂಡ ಇದೇ ಧಾಟಿಯಲ್ಲಿ ಮಾತಾಡಿದ್ದಾರೆ. “ಈ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ಪರಿಸ್ಥಿತಿ ಸುಧಾರಿಸಿದರೆ ಪಂದ್ಯಾವಳಿ ವೇಳಾಪಟ್ಟಿಯಂತೆ ನಡೆಯಲೂಬಹುದು. ಆದರೆ ಅಂತಿಮ ನಿರ್ಧಾರವೇನಿದ್ದರೂ ಐಸಿಸಿಯದೇ ಆಗಿರುತ್ತದೆ’ ಎಂದು ಹೇಳಿದ್ದಾರೆ.

ಸುಮಾರು 530 ಮಿ. ಡಾಲರ್‌ ಲಾಭವನ್ನು ತಂದುಕೊಡುವ 2020ರ ಐಪಿಎಲ್‌ ಪಂದ್ಯಾವಳಿ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟರೂ ಇದು ಯಾವಾಗ ನಡೆದೀತು ಎಂಬ ಬಗ್ಗೆ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಸೂಕ್ತ ದಿನಾಂಕಕ್ಕಾಗಿ ಬಿಸಿಸಿಐ ಹೊಂಚು ಹಾಕುತ್ತಲೇ ಇದೆ. ಟಿ20 ವಿಶ್ವಕಪ್‌ ಪಂದ್ಯಾವಳಿ ಮುಂದೂಡಲ್ಪಟ್ಟರೆ ಐಪಿಎಲ್‌ ಹಾದಿ ಸುಗಮ ಎಂಬುದೊಂದು ಲೆಕ್ಕಾಚಾರ.

Advertisement
Advertisement

Udayavani is now on Telegram. Click here to join our channel and stay updated with the latest news.

Next