Advertisement

ಟಿ20 ವಿಶ್ವಕಪ್‌: ಉಮ್ರಾನ್‌ ಮಲಿಕ್‌ ನೆಟ್‌ ಬೌಲರ್‌

10:57 PM Oct 10, 2021 | Team Udayavani |

ದುಬಾೖ: ಐಪಿಎಲ್‌ನಲ್ಲಿ ಅತ್ಯಂತ ವೇಗದ ಎಸೆತಗಳಿಂದ ಸುದ್ದಿಯಾಗಿದ್ದ ಉಮ್ರಾನ್‌ ಮಲಿಕ್‌ ಅವರಿಗೆ ಹೊಸ ಜವಾಬ್ದಾರಿ ಲಭಿಸಿದೆ. ಅವರನ್ನು ಟಿ20 ವಿಶ್ವಕಪ್‌ಗಾಗಿ ಟೀಮ್‌ ಇಂಡಿಯಾದ ನೆಟ್‌ ಬೌಲರ್‌ ಆಗಿ ಆರಿಸಲಾಗಿದ್ದು, ಯುಎಇಯಲ್ಲೇ ಉಳಿಯಲು ಸೂಚಿಸಲಾಗಿದೆ.

Advertisement

ಜಮ್ಮು ಮತ್ತು ಕಾಶ್ಮೀರದ ಬೌಲರ್‌ ಆಗಿರುವ ಉಮ್ರಾನ್‌ ಮಲಿಕ್‌ ಈ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು ಪ್ರತಿನಿಧಿಸಿ 3 ಪಂದ್ಯಗಳನ್ನಾಡಿದ್ದರು. ಗಂಟೆಗೆ 150 ಕಿ.ಮೀ. ಪ್ಲಸ್‌ ವೇಗದಲ್ಲಿ ಎಸೆತಗಳನ್ನಿಕ್ಕಿ ಗಮನ ಸೆಳೆದಿದ್ದರು.

ಉಮ್ರಾನ್‌ ಮಲಿಕ್‌ ಎಸ್‌ಆರ್‌ಎಚ್‌ ತಂಡದ ನೆಟ್‌ ಬೌಲರ್‌ ಆಗಿ ಯುಎಇಗೆ ಬಂದಿದ್ದರು. ಆದರೆ ತಂಡದ ಪ್ರಧಾನ ವೇಗಿ ಟಿ. ನಟರಾಜನ್‌ ಕೋವಿಡ್‌ ಪಾಸಿಟಿವ್‌ಗೆ ಸಿಲುಕಿದ ಕಾರಣ ಮಲಿಕ್‌ಗೆ ತಂಡವನ್ನು ಸೇರಿಕೊಳ್ಳುವ ಅವಕಾಶ ಲಭಿಸಿತ್ತು.

ಇದನ್ನೂ ಓದಿ:ನಾರ್ವೆ ಮೂಲದ ರೆಕ್‌ ಕಂಪನಿ ಖರೀದಿಸಿದ ರಿಲಯನ್ಸ್‌

Advertisement

Udayavani is now on Telegram. Click here to join our channel and stay updated with the latest news.

Next