Advertisement

ಅಂಗವಿಕಲರ ಟಿ20 ವಿಶ್ವಕಪ್‌:ಭಾರತ ಚಾಂಪಿಯನ್‌

11:37 PM Aug 14, 2019 | Sriram |

ಲಂಡನ್‌: ಅಂಗವಿಕಲರ ಮೊತ್ತ ಮೊದಲ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆತಿಥೇಯ ಇಂಗ್ಲೆಂಡನ್ನು 36 ರನ್ನುಗಳಿಂದ ಮಣಿಸಿದ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟ್‌ ಕಳೆದುಕೊಂಡು 180 ರನ್‌ ಪೇರಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ 9 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿ ಶರಣಾಯಿತು.

ವಿಜೇತ ಭಾರತ ಪರ ಮಧ್ಯಮ ಕ್ರಮಾಂಕದ ಆಟಗಾರ ಆರ್‌.ಜಿ. ಸಾಂಟೆ 34 ಎಸೆತಗಳಲ್ಲಿ 53 ರನ್‌ ಬಾರಿಸಿ ಮಿಂಚಿದರು (2 ಬೌಂಡರಿ, 4 ಸಿಕ್ಸರ್‌). ಆರಂಭಕಾರ ಕೆ.ಡಿ. ಫಾನ್ಸೆ 36, ವಿಕ್ರಾಂತ್‌ ಖೇಣಿ 29, ಎಸ್‌. ಮಹೇಂದ್ರನ್‌ 33 ರನ್‌ ಹೊಡೆದರು. ಇಂಗ್ಲೆಂಡ್‌ ಪರ 44 ರನ್‌ ಮಾಡಿದ ಎ.ಜಿ. ಬ್ರೌನ್‌ ಅವರದೇ ಹೆಚ್ಚಿನ ಗಳಿಕೆ. 2 ವಿಕೆಟ್‌ ಕೂಡ ಉರುಳಿಸಿದ ಫಾನ್ಸೆ ಆಲ್‌ರೌಂಡ್‌ ಪ್ರದರ್ಶನವಿತ್ತರು.

ಜಾಫ‌ರ್‌ ಅಭಿನಂದನೆ
“ತುಂಬು ಹೃದಯದ ಅಭಿನಂದನೆಗಳು. ನಿಮ್ಮ ಈ ಸಾಧನೆ ಭಾರತೀಯರಿಗೆ ಸಂತಸ ತಂದಿದೆ’ ಎಂಬುದಾಗಿ ಮಾಜಿ ಕ್ರಿಕೆಟಿಗ ವಾಸಿಮ್‌ ಜಾಫ‌ರ್‌ ಟ್ವೀಟ್‌ ಮಾಡಿದ್ದಾರೆ.
ಸಂಕ್ಷಿಪ್ತ ಸ್ಕೋರ್‌: ಭಾರತ-20 ಓವರ್‌ಗಳಲ್ಲಿ 7 ವಿಕೆಟಿಗೆ 180. ಇಂಗ್ಲೆಂಡ್‌- 20 ಓವರ್‌ಗಳಲ್ಲಿ 9 ವಿಕೆಟಿಗೆ 144.

Advertisement

Udayavani is now on Telegram. Click here to join our channel and stay updated with the latest news.

Next