Advertisement

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

10:52 PM Oct 23, 2021 | Team Udayavani |

ದುಬಾೖ: ಹಾಲಿ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತನ್ನ ಮೊದಲ ಸೂಪರ್‌-12 ಮುಖಾಮುಖಿಯಲ್ಲಿ ಇಂಗ್ಲೆಂಡ್‌ ವಿರುದ್ಧ 14.2 ಓವರ್‌ಗಳಲ್ಲಿ 55 ರನ್ನಿಗೆ ಕುಸಿದು 6 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.

Advertisement

ಚಾಂಪಿಯನ್ನರ ಆಟವಾಡಲು ಸಂಪೂರ್ಣ ವಿಫ‌ಲವಾದ ವೆಸ್ಟ್‌ ಇಂಡೀಸ್‌ ವಿಶ್ವಕಪ್‌ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿದ ಅವಮಾನಕ್ಕೆ ಸಿಲುಕಿತು. ಇದು ಟಿ20 ವಿಶ್ವಕಪ್‌ನ 3ನೇ ಸಣ್ಣ ಸ್ಕೋರ್‌. ಮೊದಲೆರಡು ಸ್ಥಾನದಲ್ಲಿ ನೆದರ್ಲೆಂಡ್ಸ್‌ ಇದೆ (39 ಮತ್ತು 44 ರನ್‌).

ಆದಿಲ್‌ ರಶೀದ್‌ ಕೇವಲ 2 ರನ್ನಿತ್ತು 4 ವಿಕೆಟ್‌ ಉಡಾಯಿಸಿ ಪೊಲಾರ್ಡ್‌ ಪಡೆಗೆ ನೀರು ಕುಡಿಸಿದರು. ಇದು ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಬೌಲರ್‌ನ ಅತ್ಯುತ್ತಮ ಸಾಧನೆಯಾಗಿದೆ. 2016ರ ಹೊಸದಿಲ್ಲಿ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 28ಕ್ಕೆ 4 ವಿಕೆಟ್‌ ಕೆಡವಿದ್ದು ಜವಾಬಿತ್ತ ಇಂಗ್ಲೆಂಡ್‌ 8.2 ಓವರ್‌ಗಳಲ್ಲಿ 4 ವಿಕೆಟಿಗೆ 56 ರನ್‌ ಬಾರಿಸಿತು.

ಇದನ್ನೂ ಓದಿ:ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

ವೆಸ್ಟ್‌ ಇಂಡೀಸ್‌ ಆರಂಭದಿಂದಲೇ ರನ್ನಿಗಾಗಿ ಚಡಪಡಿಸಿತು. ಪವರ್‌ ಪ್ಲೇ ಅವಧಿಯಲ್ಲಿ 31 ರನ್ನಿಗೆ 4 ವಿಕೆಟ್‌ ಉದುರಿಸಿಕೊಂಡಿತು. ಗೇಲ್‌ 3 ಬೌಂಡರಿ ಹೊಡೆದು ಅಬ್ಬರಿಸಿದರೂ ಇನ್ನಿಂಗ್ಸ್‌ ಬೆಳೆಸಲು ವಿಫ‌ಲರಾದರು. ಕೊನೆಯಲ್ಲಿ ಗೇಲ್‌ ಗಳಿಕೆಯೇ ವಿಂಡೀಸ್‌ ಸರದಿಯ ಸರ್ವಾಧಿಕ ವೈಯಕ್ತಿಕ ಮೊತ್ತವೆನಿಸಿತು. ಉಳಿದವರ್ಯಾರೂ ಡಬಲ್‌ ಫಿಗರ್‌ ದಾಖಲಿಸಲಿಲ್ಲ. ಲೆವಿಸ್‌ ಅಬ್ಬರ ಒಂದೇ ಸಿಕ್ಸರ್‌ಗೆ ಸೀಮಿತಗೊಂಡಿತು.

Advertisement

ಅರ್ಧ ಹಾದಿ ಕ್ರಮಿಸುವಾಗ ಸ್ಕೋರ್‌ 6 ವಿಕೆಟಿಗೆ 44 ರನ್‌ ಆಗಿತ್ತು. 10 ಓವರ್‌ಗಳ ಬಳಿಕ ಆದಿಲ್‌ ರಶೀದ್‌ ಮಾರಕವಾಗಿ ಎರಗಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-14.2 ಓವರ್‌ಗಳಲ್ಲಿ 55 (ಗೇಲ್‌ 13, ಹೆಟ್‌ಮೈರ್‌ 9, ರಶೀದ್‌ 2ಕ್ಕೆ 4, ಅಲಿ 17ಕ್ಕೆ 2, ಮಿಲ್ಸ್‌ 17ಕ್ಕೆ 2). ಇಂಗ್ಲೆಂಡ್‌- 8.2 ಓವರ್‌ಗಳಲ್ಲಿ 4 ವಿಕೆಟಿಗೆ 56 (ಬಟ್ಲರ್‌ ಅಜೇಯ 24, ಅಖೀಲ್‌ 24ಕ್ಕೆ 2) ಪಂದ್ಯಶ್ರೇಷ್ಠ: ಮೊಯಿನ್‌ ಅಲಿ.

 

Advertisement

Udayavani is now on Telegram. Click here to join our channel and stay updated with the latest news.

Next