Advertisement
“ಡಿ’ ವಿಭಾಗ “ಗ್ರೂಪ್ ಆಫ್ ಡೆತ್’ ಎಂಬುದು ಸಾಬೀತಾಗಿದೆ. ಸಾಮಾನ್ಯವಾಗಿ ಎಲ್ಲ ವಿಭಾಗಗಳಲ್ಲಿ ಮುನ್ನಡೆಯುವ 2 ತಂಡಗಳನ್ನು ಸುಲಭದಲ್ಲಿ ಅಂದಾಜಿಸಬಹುದು. ಆದರೆ “ಡಿ’ ವಿಭಾಗ ಹಾಗಲ್ಲ, ಇಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಜತೆಗೆ ಅಪಾಯಕಾರಿ ನೆದರ್ಲೆಂಡ್ಸ್ ಮತ್ತು ಬಾಂಗ್ಲಾದೇಶ ಕೂಡ ಇವೆ. ಹೀಗಾಗಿ ಸೂಪರ್-8 ಪ್ರವೇಶಕ್ಕೆ ಪೈಪೋಟಿ ತೀವ್ರ ಗೊಳ್ಳುವುದರಲ್ಲಿ ಅನುಮಾನವಿಲ್ಲ.
ಐಡನ್ ಮಾರ್ಕ್‌ರಮ್ ನೇತೃತ್ವದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ತಂಡ. ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್ ಅವರನ್ನು ಹೆಸರಿಸಬಹುದು. ಇವರಲ್ಲಿ ಕ್ಲಾಸೆನ್ ಮತ್ತು ಸ್ಟಬ್ಸ್ ಕಳೆದ ಐಪಿಎಲ್‌ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೈದರಾಬಾದ್ ಪರ ಆಡಿದ ಕ್ಲಾಸೆನ್ 16 ಪಂದ್ಯಗಳಿಂದ 471 ರನ್, ಡೆಲ್ಲಿಯನ್ನು ಪ್ರತಿನಿಧಿಸಿದ ಸ್ಟಬ್ಸ್ 14 ಪಂದ್ಯಗಳಿಂದ 378 ರನ್ ಬಾರಿಸಿದ್ದರು. ಕ್ಲಾಸೆನ್ ಮತ್ತು ಸ್ಟಬ್ಸ್ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿಯುವುದ ರಿಂದ, ಇದೇ ವೇಳೆ ಸ್ಪಿನ್ನರ್‌ಗಳು ದಾಳಿ ನಡೆಸುವುದರಿಂದ ಲಂಕಾ ಬೌಲರ್ ಗಳಿಗೆ ನಿಜಕ್ಕೂ ಇವರಿಬ್ಬರು ಸವಾ ಲಾಗಿ ಕಾಡಬಹುದು. ಐಪಿಎಲ್‌ನಲ್ಲಿ ಕ್ಲಾಸೆನ್ ಸ್ಪಿನ್ನರ್‌ಗಳ ಎದುರು 59ರಷ್ಟು ಸರಾಸರಿ ಹಾಗೂ 191 ಸ್ಟ್ರೈಕ್‌ರೇಟ್ ಹೊಂದಿದ್ದರು. ಹೀಗಾಗಿ ಗಾಯದ ವಿರುದ್ಧ ಹೋರಾಡುತ್ತಲೇ ಇರುವ ವನಿಂದು ಹಸರಂಗ ಮತ್ತು ಮಹೀಶ್ ತೀಕ್ಷಣ ಅವರಿಗೆ ಈ ಬಿಗ್ ಹಿಟ್ಟರ್ ಭಾರೀ ಸಮಸ್ಯೆ ತಂದೊಡ್ಡಬಹುದು ಎಂಬುದೊಂದು ಲೆಕ್ಕಾಚಾರ. ಆದರೆ ಮೊನ್ನೆಯಷ್ಟೇ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ವೈಟ್‌ವಾಶ್ ಅನುಭವಿಸಿದ ಸಂಕಟ ದಕ್ಷಿಣ ಆಫ್ರಿಕಾದ್ದಾಗಿದೆ.
Related Articles
Advertisement
ಶ್ರೀಲಂಕಾದ ಬ್ಯಾಟಿಂಗ್ ಅನುಭವಿ ಏಂಜೆಲೊ ಮ್ಯಾಥ್ಯೂಸ್, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವ, ಮಾಜಿ ನಾಯಕ ದಸುನ್ ಶಣಕ ಅವರನ್ನು ಅವಲಂಬಿಸಿದೆ. ಇವರಿಗೆ ಸವಾಲೊಡ್ಡಲು ವೇಗಿ ರಬಾಡ, ಜಾನ್ಸೆನ್, ಎಡಗೈ ರಿಸ್ಟ್ ಸ್ಪಿನ್ನರ್ ತಬ್ರೇಜ್ ಶಮಿÕ, ಕೇಶವ್ ಮಹಾರಾಜ್ ಇದ್ದಾರೆ. ವೇಗಿ ಆ್ಯನ್ರಿಚ್ ನೋರ್ಜೆ ಫಾರ್ಮ್ ಬಗ್ಗೆ ಅನುಮಾನವಿದೆ.