Advertisement

T20 World Cup; ಡೆಡ್‌ಬಾಲ್‌ ನಿಯಮದಿಂದ ಬಾಂಗ್ಲಾಕ್ಕೆ ತಪ್ಪಿತು 4 ರನ್‌!

08:37 PM Jun 11, 2024 | Team Udayavani |

ನ್ಯೂಯಾರ್ಕ್‌: ಸೋಮವಾರ ದ.ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶ ವಿವಾದಾತ್ಮಕವಾಗಿ ಸೋತುಹೋಯಿತು.

Advertisement

ರನ್‌ ಬೆನ್ನತ್ತುತ್ತಿದ್ದ ಬಾಂಗ್ಲಾ ಇನಿಂಗ್ಸ್‌ನ 17ನೇ ಓವರ್‌, 2ನೇ ಎಸೆತದಲ್ಲಿ ಮಹ್ಮದುಲ್ಲ ಎಲ್ಬಿಡಬ್ಲ್ಯೂ ಔಟ್‌ ಎಂದು ಅಂಪೈರ್‌ ತೀರ್ಪಿತ್ತರು. ಅದೇ ವೇಳೆ ಚೆಂಡು ಬೌಂಡರಿ ಗೆರೆ ದಾಟಿತ್ತು. ಡಿಆರ್‌ಎಸ್‌ನಲ್ಲಿ ನಾಟೌಟ್‌ ತೀರ್ಪು ಬಂತು. ಆದರೆ ಅಂಪೈರ್‌ ಬೌಂಡರಿಯನ್ನು ಪರಿಗಣಿಸಿ 4 ರನ್‌ ನೀಡಲಿಲ್ಲ. ಇದಕ್ಕೆ ಕಾರಣ ಡೆಡ್‌ಬಾಲ್‌ ನಿಯಮ. ಇದು ಭಾರೀ ಚರ್ಚೆ-ವಿವಾದಕ್ಕೆ ಕಾರಣವಾಗಿದೆ.

ಏನಿದು ಗೊಂದಲ?: ಒಟ್ಟು 114 ರನ್‌ ಗಳಿಸುವ ಗುರಿ ಪಡೆದಿದ್ದ ಬಾಂಗ್ಲಾ ಕೊನೆಯ 4 ಓವರ್‌ಗಳಿದ್ದಾಗ 27 ರನ್‌ ಗಳಿಸಬೇಕಿತ್ತು. ಆಟ್ನೀಲ್‌ ಬಾರ್ಟ್‌ಮನ್‌ ಎಸೆದ 17ನೇ ಓವರ್‌ 2ನೇ ಎಸೆತ ಕ್ರೀಸ್‌ನಲ್ಲಿದ್ದ ಮಹ್ಮದುಲ್ಲ ಪ್ಯಾಡ್‌ಗೆ ಬಡಿಯಿತು. ಅಂಪೈರ್‌ ಎಲ್ಬಿಡಬ್ಲೂ ತೀರ್ಪು ನೀಡಿದರು. ಡಿಆರ್‌ಎಸ್‌ನಲ್ಲಿ ನಾಟೌಟ್‌ ತೀರ್ಪು ಬಂತು. ಅನಂತರ ಚೆಂಡನ್ನು ಲೆಕ್ಕಕ್ಕೇ ಸೇರಿಸಿದ್ದರೂ, ರನ್‌ ಯಾಕೆ ಸೇರಿಕೊಳ್ಳಲಿಲ್ಲ ಎಂಬ ಪ್ರಶ್ನೆ ಹುಟ್ಟಿತು.

ನಿಯಮಗಳ ಪ್ರಕಾರ, ಅಂಪೈರ್‌ ಔಟ್‌ ತೀರ್ಪು ಕೊಟ್ಟ ನಂತರ ಚೆಂಡನ್ನು ಡೆಡ್‌ಬಾಲ್‌ ಎಂದು ಪರಿಗಣಿಸಲಾಗುತ್ತದೆ. ಅಂದರೆ ತೀರ್ಪು ಕೊಟ್ಟ ನಂತರ ಏನೇ ನಡೆದರೂ ಅದು ಗಣನೆಗೆ ಬರುವುದಿಲ್ಲ. ತೀರ್ಪು ಕೊಟ್ಟ ಮೇಲೆ ಚೆಂಡು ಬೌಂಡರಿ ಗೆರೆ ದಾಟಿದ್ದರಿಂದ, ನಂತರದ ಬೆಳವಣಿಗೆಗಳು “ಡೆಡ್‌’ ಆದವು. ರನ್ನು ಬಾಂಗ್ಲಾ ತಂಡದ ಖಾತೆಗೆ ಹೋಗಲಿಲ್ಲ. ಡಿಆರ್‌ಎಸ್‌ ವೇಳೆ ನಾಟೌಟ್‌ ತೀರ್ಪು ಬಂದರೂ, ಬಾಂಗ್ಲಾಕ್ಕೆ ರನ್‌ ಮಾತ್ರ ಸಿಗಲಿಲ್ಲ. ವಿಚಿತ್ರವೆಂದರೆ ಬಾಂಗ್ಲಾ ತಂಡದ ಸೋಲಿನ ಅಂತರ ಕೇವಲ 4 ರನ್‌ಗಳು. ಈ ರನ್‌ ಸಿಕ್ಕಿದ್ದರೆ ಅದು ಗೆಲ್ಲುತ್ತಿತ್ತು ಅಭಿಮಾನಿಗಳು ವಾದಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next