Advertisement

ಟಿ20 ವಿಶ್ವಕಪ್‌: ಆವೇಶ್‌ ಖಾನ್‌ ನೆಟ್‌ ಬೌಲರ್‌

10:57 PM Oct 12, 2021 | Team Udayavani |

ಹೊಸದಿಲ್ಲಿ: ಐಪಿಎಲ್‌ 14ರ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಈ ಟೂರ್ನಿಗಾಗಿ ಈಗಾಗಲೇ ಎಲ್ಲ ತಂಡಗಳು ಭರ್ಜರಿ ತಯಾರಿಯಲ್ಲಿವೆ. ಇತ್ತ ಟೀಮ್‌ ಇಂಡಿಯಾ ಆಯ್ಕೆ ಸಮಿತಿ ಕೂಡ ತಂಡಕ್ಕೆ ಹೊಸ ಆಟಗಾರರನ್ನು ಸೇರ್ಪಡೆಗೊಳಿಸುತ್ತಿದೆ.

Advertisement

ಇತ್ತೀಚೆಗಷ್ಟೇ ಸನ್‌ರೈಸರ್ ತಂಡದ ಯುವ ವೇಗಿ ಉಮ್ರಾನ್‌ ಮಲಿಕ್‌ ಅವರನ್ನು ನೆಟ್‌ ಬೌಲರ್‌ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ಅವೇಶ್‌ ಖಾನ್‌ ಅವರಿಗೂ ಇಂಥ ದೊಂದು ಅವಕಾಶ ಲಭಿಸಿದೆ. ಅವರು ನೆಟ್‌ ಬೌಲರ್‌ ಆಗಿ ಆಯ್ಕೆಯಾಗಿದ್ದು, ಐಪಿಎಲ್‌ ಮುಕ್ತಾಯದ ಬೆನ್ನಲ್ಲೇ ಟೀಮ್‌ ಇಂಡಿಯಾವನ್ನು ಸೇರಲಿದ್ದಾರೆ.

ಸದ್ಯ ಆವೇಶ್‌ ಖಾನ್‌ ಅವರನ್ನು ಕೇವಲ ನೆಟ್‌ ಬೌಲರ್‌ ಆಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ತಂಡದ ನಿರ್ವಹಣೆಗೆ ಅಗತ್ಯವಿದ್ದಲ್ಲಿ ಅವರನ್ನು ಮೀಸಲು ಆಟಗಾರರ ಪಟ್ಟಿಗೆ ಸೇರ್ಪಡೆಗೊಳಿಸ ಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ:ಮಿಥಾಲಿ ರಾಜ್‌ ಶತಕದ ದಾಖಲೆ ಮುರಿದ ಆ್ಯಮಿ ಹಂಟರ್‌

Advertisement

Udayavani is now on Telegram. Click here to join our channel and stay updated with the latest news.

Next