Advertisement
ಇತ್ತೀಚಿನ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದಿದ್ದ ಕಮಿನ್ಸ್, ವಾರ್ನರ್, ಸ್ಟೋಯಿನಿಸ್, ಮ್ಯಾಕ್ಸ್‌ವೆಲ್ ಅವರೆಲ್ಲ ತಂಡಕ್ಕೆ ಮರಳಿದ್ದಾರೆ. ಮಣಿಗಂಟಿನ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಸ್ಟೀವನ್ ಸ್ಮಿತ್ ಕೂಡ ಅವಕಾಶ ಪಡೆದಿದ್ದಾರೆ. ನಾಯಕ ಫಿಂಚ್ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಶ್ವಕಪ್ ವೇಳೆ ಸಂಪೂರ್ಣ ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಕ್ರಿಕೆಟ್ ಆಸ್ಟ್ರೇಲಿಯದ್ದು.
Related Articles
Advertisement
ಬಾಂಗ್ಲಾದೇಶ ವಿರುದ್ಧ ಪದಾರ್ಪಣ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧಿಸಿದ ನಥನ್ ಎಲ್ಲಿಸ್ ಮೂವರು ಮೀಸಲು ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.
ಆಸ್ಟ್ರೇಲಿಯ ತನ್ನ ಮೊದಲ ಪಂದ್ಯವನ್ನು ಅ. 23ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ಆಸ್ಟ್ರೇಲಿಯ ತಂಡ :
ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಮ್ಯಾಥ್ಯೂ ವೇಡ್, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಆ್ಯಶrನ್ ಅಗರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ಕೇನ್ ರಿಚರ್ಡ್‌ಸನ್, ಆ್ಯಡಂ ಝಂಪ, ಮಿಚೆಲ್ ಸ್ವೆಪ್ಸನ್.
ಮೀಸಲು ಆಟಗಾರರು: ಡೇನಿಯಲ್ ಕ್ರಿಸ್ಟಿಯನ್, ಡೇನಿಯಲ್ ಸ್ಯಾಮ್ಸ್, ನಥನ್ ಎಲ್ಲಿಸ್.