Advertisement
2021ರ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ಈ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅನಿರೀಕ್ಷಿತವಾಗಿ ಸೋತು ಟೂರ್ನಿಯಿಂದಲೇ ಹೊರಬೀಳುವ ಸಂಕಟಕ್ಕೀಡಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಘ್ಘನ್, 148 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಬ್ಯಾಟರ್‌ಗಳ ಬೆಂಬಲವೇ ಸಿಗಲಿಲ್ಲ. ಇದರೊಂದಿಗೆ ಗುಲ್ಬದಿನ್ ನೈಬ್ 4, ನವೀನ್ ಉಕ್ ಹಕ್ 3 ವಿಕೆಟ್ ಉರುಳಿಸಿ ಆಸೀಸ್ ಸೋಲಿಗೆ ಕಾರಣರಾಗಿದ್ದರು.
Related Articles
Advertisement
ಜೂ.9ರ ಈ ಪಂದ್ಯಕ್ಕಾಗಿ ವಿಶ್ವ ಕ್ರಿಕೆಟ್ ಜಗತ್ತೇ ಕಾತರದಿಂದ ಕಾಯುತ್ತಿತ್ತು. ಏಕೆಂದರೆ ಈ ಪಂದ್ಯದಲ್ಲಿ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖೀಯಾ ಗಿದ್ದವು. ತೀವ್ರ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಭಾರತ ಕೇವಲ 119 ರನ್ ಬಾರಿಸಿ ಸೋಲಿನ ಭೀತಿ ಅನುಭವಿಸಿತ್ತು. ಆದರೆ ಪಾಕ್ ಬ್ಯಾಟರ್‌ಗಳನ್ನು ಭಾರ ತೀಯ ಬೌಲರ್‌ಗಳು ನಿಯಂತ್ರಿಸಿದ್ದರಿಂದ 113 ರನ್ ಮಾತ್ರ ಗಳಿಸಿದ ಪಾಕಿಸ್ತಾನ, 6 ರನ್ ಸೋಲನುಭವಿಸಿತು.
ನೇಪಾಳ ವಿರುದ್ಧ 1 ರನ್ನಿಂದ ಗೆದ್ದ ದ.ಆಫ್ರಿಕಾ
ಈ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲಿ ಸೋಲಿಲ್ಲದ ತಂಡವಾಗಿ ಮುಂದುವರೆದಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ದುರ್ಬಲ ನೇಪಾಳ ಚಮಕ್ ಕೊಟ್ಟಿತ್ತು. ಕಿಂಗ್ಸ್‌ಟೌನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 115 ರನ್ ಬಾರಿಸಿದ್ದರೆ, ನೇಪಾಳ ಕೂಡ ಗೆಲುವಿಗೆ ತೀರಾ ಸನಿಹಕ್ಕೆ ಬಂದು ಹರಿಣಗಳ ಎದೆಬಡಿತ ಹೆಚ್ಚಿಸಿತ್ತು. ಆದರೆ ನೇಪಾಳಕ್ಕೆ ಮೊದಲ ಗೆಲುವು ಸಿಗಲಿಲ್ಲ. ಅಂತಿಮವಾಗಿ ರೋಚಕ 1 ರನ್‌ನಿಂದ ನೇಪಾಳ ಸೋಲೊಪ್ಪಿಕೊಂಡಿತು.
ಇಂಗ್ಲೆಂಡ್‌ಗೆ 7 ರನ್ ರೋಚಕ ಸೋಲು
ಸೇಂಟ್ ಲೂಸಿಯಾದಲ್ಲಿ ನಡೆದಿದ್ದ ಈ ಸೂಪರ್ 8 ಗ್ರೂಪ್-2ರ ಪಂದ್ಯದಲ್ಲ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಮಧ್ಯೆ ಜಿದ್ದಾಜಿದ್ದಿ ಕದನ ಏರ್ಪಟ್ಟಿತು. ದಕ್ಷಿಣ ಆಫ್ರಿಕಾ 163 ರನ್ ಬಾರಿಸಿದ್ದರೆ, ಇಂಗ್ಲೆಂಡ್ ಕೂಡ ಗೆಲುವಿಗೆ ಹತ್ತಿರವಾಗಿತ್ತು. ಆದರೆ ಅಂತಿಮ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಔಟಾಗಿದ್ದರಿಂದ 156 ರನ್ ಬಾರಿಸಿದ್ದ ಜೋಸ್ ಬಟ್ಲರ್ ಪಡೆ ಕೇವಲ 7 ರನ್‌ನಿಂದ ಪಂದ್ಯ ಕೈಚೆಲ್ಲಿತ್ತು.