Advertisement
ಐರ್ಲೆಂಡ್ 16 ಓವರ್‌ಗಳಲ್ಲಿ 96 ರನ್ನಿಗೆ ಕುಸಿದರೆ, ಭಾರತ 12.2 ಓವರ್‌ಗಳಲ್ಲಿ 2 ವಿಕೆಟಿಗೆ 97 ರನ್ ಬಾರಿಸಿತು. ಭಾರತವಿನ್ನು ರವಿವಾರ ಪಾಕಿಸ್ಥಾನವನ್ನು ಎದುರಿಸಲಿದೆ.
ಅರ್ಷದೀಪ್ ತಮ್ಮ ಮೊದಲ ಓವರ್‌ನಲ್ಲೇ ಆರಂಭಿಕರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿ ಐರ್ಲೆಂಡ್‌ಗೆ ಬಲವಾದ ಆಘಾತವಿಕ್ಕಿದರು. ಮೊದಲ ಎಸೆತದಲ್ಲಿ ನಾಯಕ ಪಾಲ್ ಸ್ಟರ್ಲಿಂಗ್ ವಿಕೆಟ್ (2) ವಿಕೆಟ್ ಹಾರಿಸಿದರೆ, ಅಂತಿಮ ಎಸೆತದಲ್ಲಿ ಆ್ಯಂಡ್ರೂé ಬಾಲ್ಬಿರ್ನಿ (5) ಅವರನ್ನು ಬೌಲ್ಡ್ ಮಾಡಿದರು. 9 ರನ್ನಿಗೆ 2 ವಿಕೆಟ್ ಕಳೆದುಕೊಂಡ ಸಂಕಟ ಐರ್ಲೆಂಡ್‌ನದ್ದಾಯಿತು. ಪವರ್ ಪ್ಲೇಯಲ್ಲಿ ಐರ್ಲೆಂಡ್ 2 ವಿಕೆಟಿಗೆ 26 ರನ್ ಮಾಡಿತು. ಇದು ಟಿ20 ವಿಶ್ವಕಪ್‌ನ ಮೊದಲ 6 ಓವರ್‌ಗಳಲ್ಲಿ ಐರ್ಲೆಂಡ್ ದಾಖಲಿಸಿದ ಕನಿಷ್ಠ ಗಳಿಕೆ. 2012ರ ಆಸ್ಟ್ರೇಲಿಯ ಎದುರಿನ ಕೊಲಂಬೊ ಪಂದ್ಯದಲ್ಲಿ 3 ವಿಕೆಟಿಗೆ 29 ರನ್ ಗಳಿಸಿದ್ದು ಈವರೆಗಿನ ಕಡಿಮೆ ಸ್ಕೋರ್ ಆಗಿತ್ತು.
Related Articles
Advertisement
ವೇಗಿಗಳೇ ವಿಕೆಟ್ ಉದುರಿಸುತ್ತಿದ್ದುದ ರಿಂದ ಭಾರತದ ಸ್ಪಿನ್ ದಾಳಿ ವಿಳಂಬ ಗೊಂಡಿತು. 12ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಅಕ್ಷರ್ ಪಟೇಲ್ ಕೂಡ ವಿಕೆಟ್ ಬೇಟೆಯಾಡಿದರು. ಪಾಂಡ್ಯ 3, ಅರ್ಷದೀಪ್ ಮತ್ತು ಬುಮ್ರಾ ತಲಾ 2, ಸಿರಾಜ್ ಒಂದು ವಿಕೆಟ್ ಕೆಡವಿದರು. 26 ರನ್ ಮಾಡಿದ ಗ್ಯಾರೆತ್ ಡೆಲಾನಿ ಅವರದು ಐರ್ಲೆಂಡ್ ಸರದಿಯ ಅತ್ಯಧಿಕ ಗಳಿಕೆ.
ಯಶಸ್ವಿ ಜೈಸ್ವಾಲ್ ಇಲ್ಲಈ ಪಂದ್ಯಕ್ಕಾಗಿ ಎಡಗೈ ಆರಂಭಕಾರ ಯಶಸ್ವಿ ಜೈಸ್ವಾಲ್ ಅವರನ್ನು ಹೊರಗಿರಿಸ ಲಾಯಿತು. ರೋಹಿತ್ ಶರ್ಮ ಜತೆಗೆ ವಿರಾಟ್ ಕೊಹ್ಲಿ ಓಪನರ್ ಆಗಿ ಕಾಣಿಸಿ ಕೊಂಡರು. ಇದರಿಂದ ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅವಕಾಶ ಪಡೆದರು. ಪಂದ್ಯಕ್ಕೂ ಮುನ್ನ 2007ರ ಹೀರೋ ಯುವರಾಜ್ ಸಿಂಗ್ ವಿಶ್ವಕಪ್ ಟ್ರೋಫಿಯನ್ನು ಅಂಗಳಕ್ಕೆ ತಂದರು. ಸಂಕ್ಷಿಪ್ತ ಸ್ಕೋರ್: ಐರ್ಲೆಂಡ್-16 ಓವರ್‌ಗಳಲ್ಲಿ 96 (ಡೆಲಾನಿ 26, ಲಿಟ್ಲ 14, ಕ್ಯಾಂಫರ್ 12, ಪಾಂಡ್ಯ 27ಕ್ಕೆ 3, ಬುಮ್ರಾ 6ಕ್ಕೆ 2, ಅರ್ಷದೀಪ್ 35ಕ್ಕೆ 2). ಭಾರತ- 12.2 ಓವರ್‌ಗಳಲ್ಲಿ 2 ವಿಕೆಟಿಗೆ 97 (ರೋಹಿತ್ 52, ಪಂತ್ ಔಟಾಗದೆ 36).