Advertisement

‌T20 World Cup 2024; ಟ್ರಿನಿಡಾಡ್, ನ್ಯೂಯಾರ್ಕ್‌ ಪಿಚ್‌ ಗೆ ಕಳಪೆ ರೇಟಿಂಗ್‌ ನೀಡಿದ ಐಸಿಸಿ

08:08 PM Aug 20, 2024 | Team Udayavani |

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ICC) ಮಂಗಳವಾರ ಐಸಿಸಿ ಟಿ20 ವಿಶ್ವಕಪ್‌ ನ (ICC T20 World Cup) ಪಿಚ್‌ ಗಳ ವರದಿ ಬಿಡುಗಡೆ ಮಾಡಿದೆ. ಐಸಿಸಿ ಟಿ20 ವಿಶ್ವಕಪ್‌ 2024 ವೆಸ್ಟ್‌ ಇಂಡೀಸ್‌ ಮತ್ತು ಯುಎಸ್‌ ಎ ನಲ್ಲಿ ನಡೆದಿತ್ತು.

Advertisement

ಎಲ್ಲಾ 52 ಪೂರ್ಣಗೊಂಡ ಪಂದ್ಯಗಳನ್ನು ಒಳಗೊಂಡಿರುವ ವರದಿಯಲ್ಲಿ, ಮೂರು ಪಿಚ್‌ ಗಳು- ಯುಎಸ್‌ಎಯಲ್ಲಿ ಎರಡು ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಒಂದನ್ನು ‘ಅತೃಪ್ತಿಕರ’ ಎಂದು ಪರಿಗಣಿಸಲಾಗಿದೆ ಎಂದು ಬಹಿರಂಗಪಡಿದೆ. ಉಳಿದ ಹೆಚ್ಚಿನವು ‘ತೃಪ್ತಿದಾಯಕ’ ಅಥವಾ ಹೆಚ್ಚಿನ ರೇಟಿಂಗ್‌ಗಳನ್ನು ಪಡೆದಿವೆ.

ಎಂಟು ಗುಂಪು-ಹಂತದ ಪಂದ್ಯಗಳನ್ನು ಆಯೋಜಿಸಿದ್ದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ನಿರ್ದಿಷ್ಟ ಪರಿಶೀಲನೆಗೆ ಒಳಪಟ್ಟಿದೆ. ಶ್ರೀಲಂಕಾ – ದಕ್ಷಿಣ ಆಫ್ರಿಕಾ ಮತ್ತು ಭಾರತ – ಐರ್ಲೆಂಡ್ ನಡುವಿನ ಪಂದ್ಯಗಳ ಪಿಚ್‌ ಗಳನ್ನು ‘ಅತೃಪ್ತಿಕರ’ ಎಂದು ರೇಟ್ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ 77 ರನ್‌ಗಳಿಗೆ ಆಲೌಟ್ ಆಗಿದ್ದರೆ, ಭಾರತದ ವಿರುದ್ಧ ಐರ್ಲೆಂಡ್ ಕೇವಲ 96 ರನ್ ಗಳಿಸಿತು. ಪಂದ್ಯಾವಳಿಯಲ್ಲಿ ಈ ಗ್ರೌಂಡ್‌ ನಲ್ಲಿ ಬಂದ ಅತಿ ಹೆಚ್ಚು ಸ್ಕೋರ್ 137-. ಇದು ಐರ್ಲೆಂಡ್ ವಿರುದ್ಧ ಕೆನಡಾ ಗಳಿಸಿತ್ತು.

ಭಾರತ ಮತ್ತು ಪಾಕಿಸ್ಥಾನ ನಡುವಿನ ಪಂದ್ಯದ ಪಿಚ್‌ ತೃಪ್ತಿಕರ ಎಂದು ವರದಿ ಹೇಳಿದೆ. ಈ ಪಂದ್ಯವೂ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next