Advertisement

ಟಿ20 ವಿಶ್ವಕಪ್ 2021: ಪಾಕಿಸ್ಥಾನ ಅಜೇಯ ಓಟ

11:05 PM Nov 07, 2021 | Team Udayavani |

ಶಾರ್ಜಾ: ಸ್ಕಾಟ್ಲೆಂಡ್‌ ವಿರುದ್ಧದ ತನ್ನ ಅಂತಿಮ ಸೂಪರ್‌-12 ಪಂದ್ಯವನ್ನು 72 ರನ್ನುಗಳಿಂದ ಗೆದ್ದ ಪಾಕಿಸ್ಥಾನ ಅಜೇಯವಾಗಿ ಸೆಮಿಫೈನಲ್‌ ತಲುಪಿದೆ.

Advertisement

ಪಾಕ್‌ 4 ವಿಕೆಟಿಗೆ 189 ರನ್‌ ಬಾರಿಸಿ ಸವಾಲೊಡ್ಡಿದರೆ, ಸ್ಕಾಟ್ಲೆಂಡ್‌ 6 ವಿಕೆಟಿಗೆ 117 ರನ್‌ ಮಾಡಿ ಎಲ್ಲ 5 ಪಂದ್ಯಗಳಲ್ಲಿ ಸೋಲುಂಡಿತು.

ಗ್ರೂಪ್‌ ಎರಡರ ಅಗ್ರಸ್ಥಾನಿಯಾದ ಪಾಕಿಸ್ಥಾನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಮೊದಲ ಸೆಮಿಫೈನಲ್‌ ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ನಡುವೆ ನಡೆಯಲಿದೆ.

ನಾಯಕ ಬಾಬರ್‌ ಆಜಂ ಮತ್ತು ಶೋಯಿಬ್‌ ಮಲಿಕ್‌ ಅವರ ಅರ್ಧ ಶತಕ ಪಾಕಿಸ್ಥಾನ ಸರದಿಯ ಆಕರ್ಷಣೆಯಾಗಿತ್ತು. 18ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಬಾಬರ್‌ 47 ಎಸೆತ ಎದುರಿಸಿ 66 ರನ್‌ ಬಾರಿಸಿದರು. ಸ್ಕಾಟ್ಲೆಂಡ್‌ ಬೌಲರ್‌ಗಳನ್ನು ದಂಡಿಸುತ್ತ ಸಾಗಿ 5 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು.

ಇದನ್ನೂ ಓದಿ:ಮುಸ್ಲಿಮೇತರರಿಗೆ ಕೌಟುಂಬಿಕ ಕಾನೂನು ಸವಲತ್ತು : ಅಬುಧಾಬಿ ಸರ್ಕಾರದಿಂದ ಮಹತ್ವದ ನಿರ್ಧಾರ

Advertisement

ಕಪ್ತಾನನಿಗೆ ಅನುಭವಿ ಮೊಹಮ್ಮದ್‌ ಹಫೀಜ್‌ (31) ಉತ್ತಮ ಬೆಂಬಲವಿತ್ತರು. 3ನೇ ವಿಕೆಟಿಗೆ 53 ರನ್‌ ಒಟ್ಟುಗೂಡಿತು. ಕೊನೆಯಲ್ಲಿ ಶೋಯಿಬ್‌ ಮಲಿಕ್‌ ಬಿರುಸಿನ ಆಟಕ್ಕಿಳಿದರು. ಕೇವಲ 18 ಎಸೆತಗಳಿಂದ 54 ರನ್‌ ಬಾರಿಸಿದರು. ಈ ಸಿಡಿಲಬ್ಬರ ಆಟದಲ್ಲಿ 6 ಪ್ರಚಂಡ ಸಿಕ್ಸರ್‌, ಒಂದು ಬೌಂಡರಿ ಸೇರಿತ್ತು. ಇನ್ನಿಂಗ್ಸಿನ ಕೊನೆಯ 4 ಎಸೆತಗಳಲ್ಲಿ ಒಂದು ಫೋರ್‌ ಹಾಗೂ 3 ಸಿಕ್ಸರ್‌ ಎತ್ತಿ ಅಬ್ಬರಿಸಿದರು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಅರ್ಧ ಶತಕ ಹೊಡೆದ ಪಾಕ್‌ ದಾಖಲೆ ಸ್ಥಾಪಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-4 ವಿಕೆಟಿಗೆ 189 (ಮಲಿಕ್‌ ಔಟಾಗದೆ 54, ಬಾಬರ್‌ 66, ಹಫೀಜ್‌ 31, ಗ್ರೀವ್ಸ್‌ 43ಕ್ಕೆ 2). ಸ್ಕಾಟ್ಲೆಂಡ್‌-6 ವಿಕೆಟಿಗೆ 117 (ಬೆರಿಂಗ್ಟನ್‌ ಅಜೇಯ 54, ಮುನ್ಸಿ 17, ಶದಾಬ್‌ 14ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next