ದುಬಾೖ: ಮಳೆಪೀಡಿತ ಟಿ20 ಪಂದ್ಯದ ಸ್ಪಷ್ಟ ಫಲಿತಾಂಶಕ್ಕೆ ಕನಿಷ್ಠ 5 ಓವರ್‌ಗಳ ಪಂದ್ಯವನ್ನು ಆಡಿಸುವುದು ಐಸಿಸಿ ನಿಯಮ. ಆದರೆ ಮುಂದಿನ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಈ ನಿಯಮವನ್ನು ಬದಲಾಯಿಸಲು ನಿರ್ಧ ರಿಸಲಾಗಿದೆ. ಸ್ಪಷ್ಟ ಫಲಿತಾಂಶ ಪಡೆಯಲು ಐದರ ಬದಲು 10 ಓವರ್‌ಗಳನ್ನು ಆಡಲಾಗುವುದು.
ಆದರೆ ಈ ನಿಯಮ ಅನ್ವಯವಾಗು ವುದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ. ಉಳಿದಂತೆ ಲೀಗ್ ಹಾಗೂ ಸೂಪರ್-12 ಹಂತದ ಪಂದ್ಯ ಗಳಿಗೆ 5 ಓವರ್‌ಗಳ ಹಿಂದಿನ ನಿಯಮವೇ ಅನ್ವಯವಾಗಲಿದೆ.
ಆಸ್ಟ್ರೇಲಿಯ ಆತಿಥ್ಯದಲ್ಲಿ ನಡೆದ 2020ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲ ಸಲ ಈ ನಿಯಮವನ್ನು ಅಳವಡಿಸಲಾಗಿತ್ತು. ಆದರೆ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಸೆಮಿಫೈನಲ್ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಅಂಕಪಟ್ಟಿಯಲ್ಲಿ ಮುಂದಿದ್ದ ಭಾರತಕ್ಕೆ ಫೈನಲ್ ಟಿಕೆಟ್ ನೀಡಲಾಗಿತ್ತು. ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ ಇನ್ನೊಂದು ಉಪಾಂ ತ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. 13 ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯವನ್ನು ಆಸ್ಟ್ರೇಲಿಯ 5 ರನ್ನುಗಳಿಂದ ಜಯಿಸಿತ್ತು.
ಇದನ್ನೂ ಓದಿ:ಪ್ರತಿ ಜಿಲ್ಲೆಯಲ್ಲಿ ಮಾದರಿ ಕೋವಿಡ್‌ಫೀಲ್ಡ್ ಆಸ್ಪತ್ರೆ ತೆರೆಯಲು ಸರ್ಕಾರ ಸಿದ್ಧವಿದೆ
ಆದರೆ ಯುಎಇಯಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿರುವುದರಿಂದ ಈ ನಿಯಮವನ್ನು ಜಾರಿಗೊಳಿಸುವ ಅನಿ ವಾರ್ಯತೆ ಎದುರಾಗದು ಎಂಬುದೊಂದು ಲೆಕ್ಕಾಚಾರ.
ಡಿಆರ್‌ಎಸ್ ನಿಯಮ
ಹಾಗೆಯೇ ಮೊದಲ ಬಾರಿಗೆ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡಿಆರ್‌ಎಸ್ ನಿಯಮ ಜಾರಿಗೆ ಬರಲಿದೆ. ಪ್ರತಿಯೊಂದು ತಂಡಕ್ಕೂ ಎರಡು ರೀವ್ಯೂಗಳನ್ನು ನೀಡಲಾಗುವುದು.