Advertisement

ಟಿ20: ಅಮೆರಿಕ ವಿರುದ್ಧ ಯುಎಇ ಸರಣಿ ಗೆಲುವು

12:30 AM Mar 17, 2019 | |

ದುಬಾೖ: ಶನಿವಾರ ನಡೆದ ದ್ವಿತೀಯ ಟಿ20 ಮುಖಾಮುಖಿಯಲ್ಲಿ ಯುಎಇ ತಂಡ ಅಮೆರಿಕ ವಿರುದ್ಧ 24 ರನ್ನುಗಳ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಯುಎಇ 7 ವಿಕೆಟಿಗೆ 182 ರನ್‌ ಪೇರಿಸಿದರೆ, ಯುಎಸ್‌ಎ 6 ವಿಕೆಟಿಗೆ 158 ರನ್‌ ಗಳಿಸಿ ಶರಣಾಯಿತು. ಯುಎಇ ಪರ ಶೈಮನ್‌ ಅನ್ವರ್‌ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ 30 ಎಸೆತಗಳಿಂದ 62 ರನ್‌ ಸಿಡಿಸಿದರು (6 ಸಿಕ್ಸರ್‌, 3 ಬೌಂಡರಿ). ರೋಹನ್‌ ಮುಸ್ತಾಫಾ 45 ರನ್‌ ಹೊಡೆದರು (38 ಎಸೆತ, 7 ಬೌಂಡರಿ). ಅಮೆರಿಕ ಸರದಿಯಲ್ಲಿ 49 ರನ್‌ ಮಾಡಿದ ಸ್ಟೀವನ್‌ ಟಯ್ಲರ್‌ ಅವರದು ಹೆಚ್ಚಿನ ಗಳಿಕೆಯಾಗಿತ್ತು. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next