Advertisement
ಇನ್ನೊಂದೆಡೆ ತವರಲ್ಲೇ ಮುಖಭಂಗ ಅನುಭವಿಸಿ ತೀವ್ರ ಒತ್ತಡದಲ್ಲಿರುವ ನ್ಯೂಜಿಲ್ಯಾಂಡ್ ಉಳಿದೆರಡು ಪಂದ್ಯಗಳಲ್ಲಿ ಪ್ರತಿಷ್ಠೆಯನ್ನು ಪಣ ಕ್ಕೊಡ್ಡಲೇಬೇಕಿದೆ. ಗೆದ್ದು ಸರಣಿ ಸೋಲಿನ ಅಂತರವನ್ನು ಕಡಿಮೆಗೊಳಿಸಲು ಕಾರ್ಯತಂತ್ರ ರೂಪಿಸಬೇಕಿದೆ. ಇದಕ್ಕೆ ಕೊಹ್ಲಿ ಪಡೆ ಆಸ್ಪದ ಕೊಟ್ಟಿàತೇ ಎಂಬುದೊಂದು ಪ್ರಶ್ನೆ ಹಾಗೂ ಕುತೂಹಲ.
ಭಾರತ ಈಗಾಗಲೇ ಸರಣಿ ಗೆದ್ದಿರುವುದರಿಂದ ಇಲ್ಲಿಯ ತನಕ ವೀಕ್ಷಕರಾಗಿಯೇ ಉಳಿದ ಕ್ರಿಕೆಟಿಗರನ್ನು ಆಡಿಸಲು ತಂಡದ ಆಡಳಿತ ಮಂಡಳಿ ಉತ್ಸುಕವಾಗಿದೆ. ಅಲ್ಲದೇ ಕಳೆದ ಮೂರೂ ಪಂದ್ಯಗಳಲ್ಲಿ ಭಾರತ ಬದಲಾಗದ ತಂಡದೊಂದಿಗೆ ಹೋರಾಟ ಸಂಘಟಿಸಿ ಭರಪೂರ ಯಶಸ್ಸು ಕಂಡಿತ್ತು. ಹೀಗಾಗಿ ಪ್ರಯೋಗಕ್ಕೆ ಇದು ಸೂಕ್ತ ಸಮಯವೂ ಹೌದು. ಈವರೆಗೆ ನವದೀಪ್ ಸೈನಿ, ಸಂಜು ಸ್ಯಾಮ್ಸನ್, ಪಂತ್, ಕುಲದೀಪ್, ವಾಷಿಂಗ್ಟನ್ ಸುಂದರ್ ವೀಕ್ಷಕರ ಸಾಲಿನಲ್ಲೇ ಉಳಿದಿದ್ದರು. ಇವರಲ್ಲಿ ಒಂದಿಬ್ಬರಾದರೂ ವೆಲ್ಲಿಂಗ್ಟನ್‌ನಲ್ಲಿ ಅವಕಾಶ ಪಡೆಯಬಹುದೇ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.
Related Articles
Advertisement
ಆದರೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸಿŒ ಅವರೀಗ 5-0 ಕ್ಲೀನ್‌ಸಿÌàಪ್ ಮೂಡ್‌ನಲ್ಲಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಇದೊಂದು ಬೂಸ್ಟ್ ಆಗಲಿದೆ ಎಂಬುದು ಇವರ ಲೆಕ್ಕಾಚಾರ. ಆಗ ಭಾರತ ಭಾರೀ ಪ್ರಯೋಗಕ್ಕೆ ಮುಂದಾಗುವುದು ಅನುಮಾನ ಎಂದೂ ಭಾವಿಸಬೇಕಾಗುತ್ತದೆ.
ಕಿವೀಸ್‌ಗೆ ಕೈಹಿಡಿಯದ ಅದೃಷ್ಟವಿಲಿಯಮ್ಸನ್ ಪಡೆ ಎಲ್ಲ ದಿಕ್ಕುಗಳಿಂದಲೂ ಹೊಡೆತ ಅನುಭವಿಸುತ್ತಿದೆ. ದೊಡ್ಡ ಹಿನ್ನಡೆ ಎದುರಾಗಿರುವುದು ಬೌಲಿಂಗ್ ವಿಭಾಗದಲ್ಲಿ. ಬ್ಯಾಟಿಂಗ್ ವಿಭಾಗ ಸದೃಢವಾಗಿದ್ದರೂ ಪಂದ್ಯವನ್ನು ಫಿನಿಶಿಂಗ್ ಮಾಡುವಲ್ಲಿ ಘೋರ ವೈಫಲ್ಯ ಕಾಣುತ್ತಿದೆ. ಜತೆಗೆ ವಿಶ್ವಕಪ್ ಫೈನಲ್‌ನಲ್ಲಿ ಕೈಕೊಟ್ಟ ಅದೃಷ್ಟ ಇನ್ನೂ ಮರಳಿ ಬಂದಿಲ್ಲ. ಇದಕ್ಕೆ ಹ್ಯಾಮಿಲ್ಟನ್ ಪಂದ್ಯಕ್ಕಿಂತ ಮಿಗಿಲಾದ ನಿದರ್ಶನ ಬೇಕಿಲ್ಲ. ಅಬ್ಬರಿಸುತ್ತ ಸಾಗಿದ್ದ ವಿಲಿಯಮ್ಸನ್ ಮತ್ತು ಟೇಲರ್ ಅವರಿಗೆ ಅಂತಿಮ ಓವರಿನಲ್ಲಿ 9 ರನ್ ತೆಗೆಯುವುದು ಸವಾಲೇ ಆಗಿರಲಿಲ್ಲ. ಕಿವೀಸ್ ನಿಗದಿತ ಅವಧಿಯಲ್ಲೇ ಗೆದ್ದು ಸಂಭ್ರಮಿಸಬಹುದಿತ್ತು. ಆದರೆ ಮೊಹಮ್ಮದ್ ಶಮಿ ಅದ್ಭುತವನ್ನೇ ಸಾಧಿಸಿದರು. ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮ ಸಿಡಿದು ನಿಂತರು. ಅಲ್ಲಿಗೆ ಕಿವೀಸ್ ಕತೆ ಮುಗಿದಿತ್ತು. ಅದು ಎದ್ದು ನಿಂತೀತೇ? ವೆಲ್ಲಿಂಗ್ಟನ್: ಎರಡನ್ನೂ ಸೋತಿರುವ ಭಾರತ
ಆಕ್ಲೆಂಡ್ ಹೊರತುಪಡಿಸಿ ನ್ಯೂಜಿಲ್ಯಾಂಡಿನ ಬೇರೆ ಯಾವುದೇ ಕ್ರಿಕೆಟ್ ತಾಣಗಳಲ್ಲಿ ಟಿ20 ಗೆಲುವು ಸಾಧಿಸದ ಭಾರತ ಬುಧವಾರ ಹ್ಯಾಮಿಲ್ಟನ್ ಕಂಟಕವನ್ನು ನಿವಾರಿಸಿಕೊಂಡಿತು. ಶುಕ್ರವಾರ ವೆಲ್ಲಿಂಗ್ಟನ್‌ನಲ್ಲೂ ಗೆಲುವಿನ ಖಾತೆ ತೆರೆದೀತೇ ಎಂಬುದು ಸದ್ಯದ ಕುತೂಹಲ. ಇಲ್ಲಿನ “ವೆಸ್ಟ್‌ಪಾಕ್ ಸ್ಟೇಡಿಯಂ’ನಲ್ಲಿ ಆಡಿದ ಎರಡೂ ಟಿ20 ಪಂದ್ಯಗಳಲ್ಲಿ ಭಾರತ ನ್ಯೂಜಿಲ್ಯಾಂಡಿಗೆ ಶರಣಾಗಿತ್ತು. 2009ರ ಮೊದಲ ಮುಖಾಮುಖೀಯನ್ನು 5 ವಿಕೆಟ್‌ಗಳಿಂದ ಕಳೆದುಕೊಂಡರೆ, ಕಳೆದ ವರ್ಷ 80 ರನ್ನುಗಳ ಆಘಾತಕಾರಿ ಸೋಲನುಭವಿಸಿತ್ತು. 11 ವರ್ಷಗಳ ಹಿಂದೆ ಇಲ್ಲಿ ಧೋನಿ ಪಡೆ 6ಕ್ಕೆ 149 ರನ್ ಮಾಡಿದರೆ, ಕಿವೀಸ್ 5ಕ್ಕೆ 150 ರನ್ ಮಾಡಿ ಅಂತಿಮ ಎಸೆತದಲ್ಲಿ ಗೆದ್ದು ಬಂದಿತ್ತು. ಸರಣಿ 2-0 ಅಂತರದಿಂದ ಆತಿಥೇಯರ ಪಾಲಾಗಿತ್ತು. ಕಳೆದ ವರ್ಷದ ಮುಖಾಮುಖೀಯಲ್ಲಿ ಕಿವೀಸ್ 6ಕ್ಕೆ 219 ರನ್ ಪೇರಿಸಿ ಸವಾಲೊಡ್ಡಿತ್ತು. ರೋಹಿತ್ ಬಳಗ 19.2 ಓವರ್‌ಗಳಲ್ಲಿ 139ಕ್ಕೆ ಆಲೌಟ್ ಆಗಿತ್ತು. ಇನ್ನೊಂದೆಡೆ, 2014ರ ಬಳಿಕ ಇಲ್ಲಿ ಆಡಲಾದ ಎಲ್ಲ 6 ಪಂದ್ಯಗಳಲ್ಲಿ ಗೆದ್ದ ಸಾಧನೆ ನ್ಯೂಜಿಲ್ಯಾಂಡಿನದ್ದಾಗಿದೆ.