Advertisement
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 8 ವಿಕೆಟಿಗೆ 160 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿತು. ಜವಾಬಿತ್ತ ಆಸ್ಟ್ರೇಲಿಯ 8 ವಿಕೆಟಿಗೆ 154 ರನ್ ಮಾಡಿ ಸೋಲನ್ನು ಹೊತ್ತುಕೊಂಡಿತು. ಈ ಪಂದ್ಯದೊಂದಿಗೆ ಆಸ್ಟ್ರೇಲಿಯ ತಂಡದ ಸುದೀರ್ಘ ಭಾರತ ಪ್ರವಾಸ ಕೊನೆಗೊಂಡಿತು.
ಭಾರತಕ್ಕೆ ಯಶಸ್ವಿ ಜೈಸ್ವಾಲ್-ಋತುರಾಜ್ ಗಾಯಕ್ವಾಡ್ ಭದ್ರ ಬುನಾದಿ ನಿರ್ಮಿಸಲು ವಿಫಲರಾದರು. ಇವರಲ್ಲಿ ಜೈಸ್ವಾಲ್ ಇನ್ನೇನು ಸಿಡಿಯಲಾರಂಭಿಸಿದರು ಎನ್ನುವಾಗಲೇ 4ನೇ ಓವರ್‌ನಲ್ಲಿ ಜೇಸನ್ ಬೆಹ್ರೆಂಡಾರ್ಫ್ ಗೆ ವಿಕೆಟ್ ಒಪ್ಪಿಸಿದರು. ಹಿಂದಿನೆರಡು ಎಸೆತಗಳನ್ನು ಸಿಕ್ಸರ್ ಮತ್ತು ಬೌಂಡರಿಗೆ ಬಡಿದಟ್ಟಿದ ಜೈಸ್ವಾಲ್, ಕೊನೆಯ ಎಸೆತದಲ್ಲಿ ಎಡವಿದರು. ಚೆಂಡು, ಡೀಪ್ ಸ್ಕ್ವೇರ್‌ಲೆಗ್‌ನಿಂದ ಓಡಿ ಬಂದ ನಥನ್ ಎಲ್ಲಿಸ್ ಕೈಸೇರಿತು. ಜೈಸ್ವಾಲ್ 15 ಎಸೆತಗಳಿಂದ 21 ರನ್ ಬಾರಿಸಿದರು. ಇದರಲ್ಲಿ 2 ಸಿಕ್ಸರ್, ಒಂದು ಬೌಂಡರಿ ಸೇರಿತ್ತು. ಪೆವಿಲಿಯನ್ ಸೇರುವ ಅನಂತರದ ಸರದಿ ಗಾಯಕ್ವಾಡ್ ಅವರದ್ದಾಯಿತು. ಮುಂದಿನ ಓವರ್ ಎಸೆಯಲು ಬಂದ ಡ್ವಾರ್ಶಿಯಸ್ 3ನೇ ಎಸೆತದಲ್ಲೇ ಈ ವಿಕೆಟ್ ಬೇಟೆಯಾಡಿದರು. ಗಾಯಕ್ವಾಡ್ ಗಳಿಕೆ 12 ಎಸೆತಗಳಿಂದ 10 ರನ್ (2 ಬೌಂಡರಿ).
Related Articles
Advertisement
ಪವರ್ ಪ್ಲೇಯಲ್ಲಿ ಭಾರತದ ಸ್ಕೋರ್ 2ಕ್ಕೆ 42 ರನ್ ಆಗಿತ್ತು. ಸೂರ್ಯಕುಮಾರ್ ನಿರ್ಗಮನದ ಬಳಿಕ ಬಂದ ರಿಂಕು ಸಿಂಗ್ ಕ್ಲಿಕ್ ಆಗಲಿಲ್ಲ. ಇವರ ಗಳಿಕೆ ಕೇವಲ 6 ರನ್. ಮುನ್ನುಗ್ಗಿ ಬಾರಿಸಿದ ರಿಂಕು ಲಾಂಗ್‌ಆನ್‌ನಲ್ಲಿದ್ದ ಟಿಮ್ ಡೇವಿಡ್ ಕೈಗೆ ಕ್ಯಾಚ್ ನೀಡಿ ವಾಪಸಾದರು. 10 ಓವರ್ ಅಂತ್ಯಕ್ಕೆ ಭಾರತ 4 ವಿಕೆಟಿಗೆ 61 ರನ್ ಮಾಡಿ ಕುಂಟುತ್ತಿತ್ತು.
ಈ ಹಂತದಲ್ಲಿ ಶ್ರೇಯಸ್ ಅಯ್ಯರ್- ಜಿತೇಶ್ ಶರ್ಮ ದೊಡ್ಡ ಜತೆಯಾಟವೊಂದನ್ನು ನಡೆಸುವ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಕೊನೆಯ ಬ್ಯಾಟಿಂಗ್ ಸ್ಪೆಷಲಿಸ್ಟ್ ಜೋಡಿ ಇದಾಗಿತ್ತು. ಇವರಿಂದ 5ನೇ ವಿಕೆಟಿಗೆ 24 ಎಸೆತಗಳಿಂದ 42 ರನ್ ಒಟ್ಟುಗೂಡಿತು. ಜಿತೇಶ್ ವಿಕೆಟ್ ಹಾರಿಸುವ ಮೂಲಕ ಹಾರ್ಡಿ ಈ ಜೋಡಿಯನ್ನು ಮುರಿದರು. ಜಿತೇಶ್ ಗಳಿಕೆ 16 ಎಸೆತಗಳಿಂದ 24 ರನ್ (3 ಬೌಂಡರಿ, 1 ಸಿಕ್ಸರ್).ಡೆತ್ ಓವರ್ ಆರಂಭದ ವೇಳೆ ಭಾರತ 5ಕ್ಕೆ 108 ರನ್ ಮಾಡಿತ್ತು. ಅಯ್ಯರ್-ಅಕ್ಷರ್ ಕ್ರೀಸ್‌ನಲ್ಲಿದ್ದರು. ಇವರಿಂದ 6ನೇ ವಿಕೆಟಿಗೆ 33 ಎಸೆತಗಳಲ್ಲಿ 46 ರನ್ ಸಂಗ್ರಹಗೊಂಡಿತು. ಇದೇ ಭಾರತದ ಸರದಿಯ ದೊಡ್ಡ ಜತೆಯಾಟವೆನಿಸಿತು. ಆಕ್ಷರ್ 21 ಎಸೆತಗಳಿಂದ 31 ರನ್ ಮಾಡಿದರು (2 ಬೌಂಡರಿ, 1 ಸಿಕ್ಸರ್). ಶ್ರೇಯಸ್ ಅಯ್ಯರ್ ಭಾರತದ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಶ್ರೇಯಸ್ ಕೊಡುಗೆ 37 ಎಸೆತಗಳಿಂದ 53 ರನ್. ಸಿಡಿಸಿದ್ದು 5 ಬೌಂಡರಿ ಹಾಗೂ 2 ಸಿಕ್ಸರ್. ಇವರ ನೆರವಿನಿಂದ ಭಾರತ ಕೊನೆಯ 10 ಓವರ್‌ಗಳಲ್ಲಿ 99 ರನ್ ಪೇರಿಸಿತು.ಆಸ್ಟ್ರೇಲಿಯ ಸಾಂ ಕ ಬೌಲಿಂಗ್ ಮೂಲಕ ಯಶಸ್ಸು ಸಾಧಿಸಿತು. ಎಲ್ಲ 5 ಮಂದಿ ವಿಕೆಟ್ ಉರುಳಿಸಿದರು. ಮೆಕ್‌ಡರ್ಮಟ್ ಫಿಫ್ಟಿ
ಚೇಸಿಂಗ್ ವೇಳೆ ಜೋಶ್ ಫಿಲಿಪ್ ಅವರ ವಿಕೆಟನ್ನು ಆಸ್ಟ್ರೇಲಿಯ ಬೇಗ ಕಳೆದುಕೊಂಡಿತು (4). ಟ್ರ್ಯಾವಿಸ್ ಹೆಡ್ ಮತ್ತು ಬೆನ್ ಮೆಕ್‌ಡರ್ಮಟ್ ಮುನ್ನುಗ್ಗಿ ಬೀಸಲಾರಂಭಿಸಿದರು. ಆದರೆ ಬಿಷ್ಣೋಯಿ ಅವರ ಗೂಗ್ಲಿ ಎಸೆತವೊಂದು ಆಸೀಸ್ ಆರಂಭಿಕನನ್ನು ವಂಚಿಸಿತು. 18 ಎಸೆತಗಳಿಂದ 28 ರನ್ ಬಾರಿಸಿದ ಹೆಡ್ ಕ್ಲೀನ್‌ಬೌಲ್ಡ್ ಆದರು (5 ಫೋರ್, 1 ಸಿಕ್ಸರ್). ಮೊದಲ ಓವರ್‌ನಲ್ಲೇ ಬಿಷ್ಣೋಯಿ ಬಿಗ್ ವಿಕೆಟ್ ಉರುಳಿಸಿದರು. ಪವರ್ ಪ್ಲೇ ಒಳಗಾಗಿ ಆರಂಭಿಕರಿಬ್ಬರ ಆಟ ಮುಗಿದಿತ್ತು. ಬಿಷ್ಣೋಯಿ ತಮ್ಮ ದ್ವಿತೀಯ ಓವರ್‌ನಲ್ಲಿ ಮತ್ತೂಂದು ಬೇಟೆಯಾಡಿದರು. ಹಾರ್ಡಿ ಆಟಕ್ಕೆ ತೆರೆ ಎಳೆದರು. ಆಸೀಸ್ ಸರದಿಯನ್ನು ಬೆಳೆಸಿದ ಹೀರೋ ಬೆನ್ ಮೆಕ್‌ಡರ್ಮಟ್. ಇವರು ಅರ್ಧ ಶತಕ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಮೆಕ್‌ಡರ್ಮಟ್ 36 ಎಸೆತಗಳಿಂದ 54 ರನ್ ಬಾರಿಸಿದರು. ಇದರಲ್ಲಿ 5 ಸಿಕ್ಸರ್ ಒಳಗೊಂಡಿತ್ತು. ಮುಕೇಶ್ ಕುಮಾರ್ ಸತತ ಎಸೆತಗಳಲ್ಲಿ ಮ್ಯಾಥ್ಯೂ ಶಾರ್ಟ್ ಮತ್ತು ಬೆನ್ ಡ್ವಾರ್ಶಿಯಸ್ ವಿಕೆಟ್ ಕಿತ್ತು ಭಾರತದ ಪಾಳೆಯದಲ್ಲಿ ಹರ್ಷ ಉಕ್ಕಿಸಿದರು. ಆದರೆ ಆಸೀಸ್ ನಾಯಕ ಮ್ಯಾಥ್ಯೂ ವೇಡ್ ಆಕ್ರಮಣಕಾರಿಯಾಗಿ ಗೋಚರಿಸಿದರು. ಆವೇಶ್ ಖಾನ್‌ಗೆ ಹ್ಯಾಟ್ರಿಕ್ ಬೌಂಡರಿಗಳ ರುಚಿ ತೋರಿಸಿದರು. ಅಂತಿಮ ಓವರ್‌ನಲ್ಲಿ 10 ರನ್ ತೆಗೆಯುವ ಸವಾಲು ಎದುರಾಯಿತು. ಇಲ್ಲಿ ಅರ್ಷದೀಪ್ ಭರ್ಜರಿ ಹಿಡಿತ ಸಾಧಿಸಿದರು. ವೇಡ್ ವಿಕೆಟ್ ಉರುಳಿಸಿ ಹರ್ಷ ಉಕ್ಕಿಸಿದರು. ಈ ಓವರ್‌ನಲ್ಲಿ ಆಸೀಸ್‌ಗೆ ತೆಗೆಯಲು ಸಾಧ್ಯವಾದದ್ದು 3 ಸಿಂಗಲ್ಸ್ ಮಾತ್ರ. ಒಂದೊಂದು ಬದಲಾವಣೆ
ಅಂತಿಮ ಪಂದ್ಯಕ್ಕಾಗಿ ಎರಡೂ ತಂಡಗಳು ಒಂದೊಂದು ಬದಲಾವಣೆ ಮಾಡಿಕೊಂಡವು. ಭಾರತ ತಂಡದಲ್ಲಿ ಅರ್ಷದೀಪ್ ಸಿಂಗ್ ಮತ್ತೆ ಕಾಣಿಸಿಕೊಂಡರು. ಇವರಿಗಾಗಿ ಜಾಗ ಬಿಟ್ಟವರು ದೀಪಕ್ ಚಹರ್. ವೈದ್ಯಕೀಯ ಚಿಕಿತ್ಸೆಗಾಗಿ ಚಹರ್ ಮನೆಗೆ ಮರಳಿದ್ದಾರೆ ಎಂಬುದಾಗಿ ನಾಯಕ ಸೂರ್ಯಕುಮಾರ್ ಯಾದವ್ ತಿಳಿಸಿದರು.ಆಸ್ಟ್ರೇಲಿಯ ತಂಡ ಪೇಸ್ ಬೌಲರ್ ನಥನ್ ಎಲ್ಲಿಸ್ ಅವರನ್ನು ಮರಳಿ ಆಡಿಸಿತು. 4ನೇ ಪಂದ್ಯದಲ್ಲಷ್ಟೇ ಟಿ20 ಪದಾರ್ಪಣೆ ಮಾಡಿದ ಆಲ್‌ರೌಂಡರ್ ಕ್ರಿಸ್ ಗ್ರೀನ್ ಹೊರಗುಳಿದರು. ಸ್ಕೋರ್ ಪಟ್ಟಿ
ಭಾರತ
ಯಶಸ್ವಿ ಜೈಸ್ವಾಲ್ ಸಿ ಎಲ್ಲಿಸ್ ಬಿ ಬೆಹ್ರೆಂಡಾರ್ಫ್ 21
ಗಾಯಕ್ವಾಡ್ ಸಿ ಬೆಹ್ರೆಂಡಾರ್ಫ್ ಬಿ ಡ್ವಾರ್ಶಿಯಸ್ 10
ಶ್ರೇಯಸ್ ಅಯ್ಯರ್ ಬಿ ಎಲ್ಲಿಸ್ 53
ಸೂರ್ಯಕುಮಾರ್ ಸಿ ಮೆಕ್‌ಡರ್ಮಟ್ ಬಿ ಡ್ವಾರ್ಶಿಯಸ್ 5
ರಿಂಕು ಸಿಂಗ್ ಸಿ ಡೇವಿಡ್ ಬಿ ಸಂಘಾ 6
ಜಿತೇಶ್ ಶರ್ಮ ಸಿ ಶಾರ್ಟ್ ಬಿ ಹಾರ್ಡಿ 24
ಅಕ್ಷರ್ ಪಟೇಲ್ ಸಿ ಹಾರ್ಡಿ ಬಿ ಬೆಹ್ರೆಂಡಾರ್ಫ್ 31
ರವಿ ಬಿಷ್ಣೋಯಿ ರನೌಟ್ 2
ಅರ್ಷದೀಪ್ ಸಿಂಗ್ ಔಟಾಗದೆ 2
ಇತರ 6
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 160
ವಿಕೆಟ್ ಪತನ: 1-33, 2-33, 3-46, 4-55, 5-97, 6-143, 7-156, 8-160.
ಬೌಲಿಂಗ್: ಆರನ್ ಹಾರ್ಡಿ 4-0-21-1
ಜೇಸನ್ ಬೆಹ್ರೆಂಡಾರ್ಫ್ 4-0-38-2
ಬೆನ್ ಡ್ವಾರ್ಶಿಯಸ್ 4-0-30-2
ನಥನ್ ಎಲ್ಲಿಸ್ 4-0-42-1
ತನ್ವೀರ್ ಸಂಘಾ 4-0-26-1 ಆಸ್ಟ್ರೇಲಿಯ
ಟ್ರ್ಯಾವಿಸ್ ಹೆಡ್ ಬಿ ಬಿಷ್ಣೋಯಿ 28
ಜೋಶ್ ಫಿಲಿಪ್ ಬಿ ಮುಕೇಶ್ 4
ಬೆನ್ ಮೆಕ್‌ಡರ್ಮಟ್ ಸಿ ರಿಂಕು ಬಿ ಅರ್ಷದೀಪ್ 54
ಆರನ್ ಹಾರ್ಡಿ ಸಿ ಅಯ್ಯರ್ ಬಿ ಬಿಷ್ಣೋಯಿ 6
ಟಿಮ್ ಡೇವಿಡ್ ಸಿ ಆವೇಶ್ ಬಿ ಅಕ್ಷರ್ 17
ಮ್ಯಾಥ್ಯೂ ಶಾರ್ಟ್ ಸಿ ಗಾಯಕ್ವಾಡ್ ಬಿ ಮುಕೇಶ್ 16
ಮ್ಯಾಥ್ಯೂ ವೇಡ್ ಸಿ ಅಯ್ಯರ್ ಬಿ ಅರ್ಷದೀಪ್ 22
ಬೆನ್ ಡ್ವಾರ್ಶಿಯಸ್ ಬಿ ಮುಕೇಶ್ 0
ನಥನ್ ಎಲ್ಲಿಸ್ ಔಟಾಗದೆ 4
ಜೇಸನ್ ಬೆಹ್ರೆಂಡಾರ್ಫ್ ಔಟಾಗದೆ 2
ಇತರ 1
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 154 ವಿಕೆಟ್ ಪತನ: 1-22, 2-45, 3-55, 4-102, 5-116, 6-129, 7-129, 8-151.
ಬೌಲಿಂಗ್: ಅರ್ಷದೀಪ್ ಸಿಂಗ್ 4-0-40-2
ಆವೇಶ್ ಖಾನ್ 4-0-39-0
ಮುಕೇಶ್ ಕುಮಾರ್ 4-0-32-3
ರವಿ ಬಿಷ್ಣೋಯಿ 4-0-29-2
ಅಕ್ಷರ್ ಪಟೇಲ್ 4-0-14-1 ಪಂದ್ಯಶ್ರೇಷ್ಠ: ಅಕ್ಷರ್ ಪಟೇಲ್
ಸರಣಿಶ್ರೇಷ್ಠ: ರವಿ ಬಿಷ್ಣೋಯಿ