Advertisement

ಟಿ20 ಸರಣಿ: ಭಾರತಕ್ಕೆ 4 ವಿಕೆಟ್‌ಗಳ ಜಯ

09:07 AM Aug 04, 2019 | Sriram |

ಲಾಡರ್‌ ಹಿಲ್‌ (ಅಮೆರಿಕ):ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ 20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಜಯಗಳಿಸಿದೆ.

Advertisement

ಗೆಲ್ಲಲು 96 ರನ್‌ ಗಳಿಸುವ ಗುರಿ ಪಡೆದ ಭಾರತ ತಂಡವು ಕೆಲವು ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಒಳಗಾಯಿತು. ಆದರೆ ಗುರಿ ಅಲ್ಪಮೊತ್ತ ಇದ್ದ ಕಾರಣ ಭಾರತ 17.2 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 98 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಭಾರತೀಯ ತಂಡವು ಉತ್ತಮ ಮಟ್ಟದ ಬೌಲಿಂಗ್‌ ದಾಳಿ ಮಾಡಿದರು. ಭಾರತದ ಪರ ಸೈನಿ 17 ರನ್ನಿಗೆ 3 ವಿಕೆಟ್‌ ಕಿತ್ತು ಮಿಂಚಿದರು.

ಕೈರನ್‌ ಪೊಲಾರ್ಡ್‌ ಅವರನ್ನು ಹೊರತುಪಡಿಸಿ ತಂಡದ ಇತರ ಯಾವುದೇ ಆಟಗಾರ ಭಾರತೀಯ ದಾಳಿಯನ್ನು ಉತ್ತರಿಸಲು ಅಸಮರ್ಥರಾದರು. ಪೊಲಾರ್ಡ್‌ ಅವರು 2 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 49 ರನ್‌ ಹೊಡೆದಿದ್ದರು.

ರೋಹಿತ್‌, ನಾಯಕ ಕೊಹ್ಲಿ , ಮನೀಷ್‌ ಪಾಂಡೆ ಸ್ವಲ್ಪಮಟ್ಟಿಗೆ ಹೋರಾಟದ ಬ್ಯಾಟಿಂಗ್‌ ಪ್ರದರ್ಶಿಸಿದರು. ಕೊನೆಯಲ್ಲಿ ವಾಷಿಂಗ್ಟನ್‌ ಸುಂದರ್‌ ಸಿಕ್ಸರ್‌ ಬಾರಿಸಿ ತಂಡದ ಗೆಲುವು ಸಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next