Advertisement

ಆಸ್ಟ್ರೇಲಿಯಕ್ಕೆ ಟಿ20 ಸರಣಿ

11:17 PM Nov 08, 2019 | Team Udayavani |

ಪರ್ತ್‌: ಪ್ರವಾಸಿ ಪಾಕಿಸ್ಥಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ಆಸ್ಟ್ರೇಲಿಯ 2-0 ಅಂತರದಿಂದ ಗೆದ್ದುಕೊಂಡಿದೆ. ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯ 10 ವಿಕೆಟ್‌ಗಳ ಗೆಲುವು ದಾಖಲಿಸಿದೆ.

Advertisement

ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 8 ವಿಕೆಟಿಗೆ 106 ರನ್‌ ಪೇರಿಸಿತು. ಇದಕ್ಕುತ್ತರವಾಗಿ ಕಾಂಗರೂ ಪಡೆ 11.5 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೆ 109 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಪಾಕ್‌ ಪರ ಇಫ್ತಿಕರ್‌ ಅಹ್ಮದ್‌ 45, ಇಮಾಮ್‌ ಉಲ್‌-ಹಕ್‌ 14 ರನ್‌ ಹೊರತು ಪಡಿಸಿದರೆ ಉಳಿದವರ್ಯಾರೂ ಎರಡಂಕಿಯ ಗಡಿ ದಾಟಲಿಲ್ಲ.

ಆಸೀಸ್‌ ಪರ ನಾಯಕ ಆರನ್‌ ಫಿಂಚ್‌ ಅಜೇಯ (55) ಅರ್ಧಶತಕ ಸಿಡಿಸಿದರೆ ವಾರ್ನರ್‌ ಅಜೇಯ 48 ರನ್‌ ಗಳಿಸಿದರು. ಬೌಲರ್‌ಗಳಾದ ಕೇನ್‌ ರಿಚಡ್ಸìನ್‌ 3 ವಿಕೆಟ್‌ ಉರುಳಿ ಸಿದರೆ ಸ್ಟಾರ್ಕ್‌ ಮತ್ತು ಎಬೋಟ್‌ ತಲಾ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ 20 ಓವರ್‌ಗಳಲ್ಲಿ 8 ವಿಕೆಟಿಗೆ 106 (ಇಫ್ತಿಕರ್‌ 45, ಇಮಾಮ್‌ 14, ರಿಚಡ್ಸìನ್‌ 18ಕ್ಕೆ 3, ಎಬೋಟ್‌ 14ಕ್ಕೆ 2, ಸ್ಟಾರ್ಕ್‌ 29ಕ್ಕೆ 2); ಆಸ್ಟ್ರೇಲಿಯ 11.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 109 (ಆರನ್‌ ಫಿಂಚ್‌ ಔಟಾಗದೆ 55, ವಾರ್ನರ್‌ ಔಟಾಗದೆ 48). ಪಂದ್ಯಶ್ರೇಷ್ಠ: ಸೀನ್‌ ಅಬೋಟ್‌. ಸರಣಿ ಶ್ರೇಷ್ಠ:
ಸ್ಟೀವನ್‌ ಸ್ಮಿತ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next