Advertisement

ಟಿ20 ರ್‍ಯಾಂಕಿಂಗ್‌: ಭಾರತಕ್ಕೆ 5ನೇ ಸ್ಥಾನ

03:01 AM May 04, 2019 | Sriram |

ದುಬಾೖ: ಐಸಿಸಿ ಪ್ರಕಟಿಸಿರುವ ನೂತನ ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ ಮೂರು ಸ್ಥಾನಗಳ ಕುಸಿತ ಕಂಡು 5ನೇ ಸ್ಥಾನಕ್ಕೆ ಇಳಿದಿದೆ. ಪಾಕಿಸ್ಥಾನ ಅಗ್ರಸ್ಥಾನದಲ್ಲಿ ಭದ್ರವಾಗಿ ಕುಳಿತಿದೆ.

Advertisement

ಶುಕ್ರವಾರ ಐಸಿಸಿ 80 ತಂಡಗಳನ್ನು ಒಳಗೊಂಡ ವಿಸ್ತೃತ ಟಿ20 ತಂಡ ರ್‍ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 2009ರ ಐಸಿಸಿ ಟಿ20 ವಿಶ್ವಕಪ್‌ ಚಾಂಪಿಯನ್‌ ಪಾಕಿಸ್ಥಾನ ಒಟ್ಟು 286 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಉಳಿದ 4 ತಂಡಗಳು ಸರಿಯಾಗಿ 2 ಅಂಕಗಳ ಅಂತರದಲ್ಲಿವೆ. ದಕ್ಷಿಣ ಆಫ್ರಿಕಾ (262), ಇಂಗ್ಲೆಂಡ್‌ (261), ಆಸ್ಟ್ರೇಲಿಯ (261) ಮತ್ತು ಭಾರತ (260).

ದಕ್ಷಿಣ ಆಫ್ರಿಕಾ ಮತ್ತು ಭಾರತ 2ನೇ ಸ್ಥಾನ ಮತ್ತು 5ನೇ ಸ್ಥಾನವನ್ನು ಬದಲಾಯಿಸಿಕೊಂಡಿದೆ. ಇನ್ನೊಂದು ಗಮನಾರ್ಹ ಬದಲಾವಣೆಯೆಂದರೆ ಅಫ್ಘಾನಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ಒಂದು ಸ್ಥಾನ ಮೇಲಕ್ಕೇರಿದ್ದು 7 ಮತ್ತು 8ನೇ ಸ್ಥಾನದಲ್ಲಿರುವುದು. ವೆಸ್ಟ್‌ಇಂಡೀಸ್‌ ತಂಡ 9ನೇ ಸ್ಥಾನಕ್ಕೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next