Advertisement

ಟಿ20: ತವರಲ್ಲಿ ನ್ಯೂಜಿಲ್ಯಾಂಡ್‌ ಸೋಲಿನ ಆರಂಭ

12:49 AM Nov 02, 2019 | Sriram |

ಕ್ರೈಸ್ಟ್‌ಚರ್ಚ್‌: ವನ್‌ಡೌನ್‌ ಬ್ಯಾಟ್ಸ್‌ ಮನ್‌ ಜೇಮ್ಸ… ವಿನ್ಸ್‌ ಬಾರಿಸಿದ ಚೊಚ್ಚಲ ಅರ್ಧ ಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್‌ ತಂಡ ಆತಿಥೇಯ ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

Advertisement

ಜುಲೈ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ ಬಳಿಕ ಇತ್ತಂಡಗಳ ನಡುವಿನ ಮೊದಲ ಮುಖಾಮುಖೀ ಇದಾಗಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ 20 ಓವರ್‌ಗಳಲ್ಲಿ 5 ನಷ್ಟಕ್ಕೆ 153 ರನ್‌ ಗಳಿಸಿತು. ಇಂಗ್ಲೆಂಡ್‌ 18.3 ಓವರ್‌ಗಳಲ್ಲಿ 3 ವಿಕೆಟಿಗೆ 154 ರನ್‌ ಬಾರಿಸಿ ಗೆದ್ದು ಬಂತು.

ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ (2)- ಕಾಲಿನ್‌ ಮನ್ರೊ (21) ಬೇಗನೆ ಔಟಾದದ್ದು ಕಿವೀಸ್‌ಗೆ ಆಘಾತವಿಕ್ಕಿತು. 3ನೇ ವಿಕೆಟಿಗೆ ಜತೆಯಾದ ವಿಕೆಟ್‌ ಕೀಪರ್‌ ಟಿಮ್‌ ಸೀಫ‌ರ್ಟ್‌ (32) ಮತ್ತು ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌(19) ಸ್ಫೋಟಕ ಬ್ಯಾಟಿಂಗ್‌ ನಡೆಸುವ ಸೂಚನೆ ನೀಡಿದರು. 33 ರನ್‌ ಒಟ್ಟುಗೂಡುವಷ್ಟರಲ್ಲಿ ಆದಿಲ್‌ ರಶೀದ್‌ ಈ ಜೋಡಿಯನ್ನು ಬೇರ್ಪಡಿಸಿದರು. ಕೊನೆಯ ಹಂತದಲ್ಲಿ ರಾಸ್‌ ಟೇಲರ್‌ (44) ಮತ್ತು ಡ್ಯಾರಿಲ್‌ ಮಿಚೆಲ್‌ (ಅಜೇಯ 30) ಬಿರುಸಿನ ಆಟವಾಡಿದ್ದ ರಿಂದ ತಂಡದ ಮೊತ್ತ 150ರ ಗಡಿ ದಾಟಿತು.

35 ಎಸೆತಗಳನ್ನು ಎದುರಿಸಿದ ಟೇಲರ್‌ 3 ಬೌಂಡರಿ, ಒಂದು ಸಿಕ್ಸರ್‌ ನೆರವಿನಿಂದ ಸರ್ವಾಧಿಕ 44 ರನ್‌ ಹೊಡೆದರು. ಮಿಚೆಲ್‌ ಕೇವಲ 17 ಎಸೆತ ಗಳಲ್ಲಿ 30 ರನ್‌ ಬಾರಿಸಿ ಮಿಂಚಿದರು. ಇಂಗ್ಲೆಂಡ್‌ ಪರ ಕ್ರಿಸ್‌ ಜೋರ್ಡನ್‌ 2 ವಿಕೆಟ್‌ ಕಿತ್ತರು.

ವಿನ್ಸ್‌ ಮಿಂಚಿನ ಬ್ಯಾಟಿಂಗ್‌
ಚೇಸಿಂಗ್‌ ವೇಳೆ ಇಂಗ್ಲೆಂಡ್‌ ಮಾಲನ್‌ (11) ಅವರನ್ನು ಅಗ್ಗಕ್ಕೆ ಕಳೆದು ಕೊಂಡಿತು. ಆದರೆ ಮತ್ತೂಬ್ಬ ಆರಂಭ ಕಾರ ಜಾನಿ ಬೇರ್‌ಸ್ಟೊ (35) ಮತ್ತು ಡೇವಿಡ್‌ ವಿನ್ಸ್‌ ಕಿವೀಸ್‌ ದಾಳಿಗೆ ತಕ್ಕ ಉತ್ತರ ನೀಡಿದರು. ಬೇರ್‌ಸ್ಟೊ 28 ಎಸೆತಗಳಿಂದ 35 ರನ್‌ ಹೊಡೆದರೆ (5 ಬೌಂಡರಿ, 1 ಸಿಕ್ಸರ್‌), ವಿನ್ಸ್‌ ಚೊಚ್ಚಲ ಅರ್ಧಶತಕ ಸಿಡಿಸಿ ಮೆರೆದರು. ವಿನ್ಸ್‌ ಗಳಿಕೆ 38 ಎಸೆತಗಳಿಂದ 59 ರನ್‌. ಸಿಡಿಸಿದ್ದು 7 ಬೌಂಡರಿ ಮತ್ತು 2 ಸಿಕ್ಸರ್‌.

Advertisement

ಇಯಾನ್‌ಮಾರ್ಗನ್‌ ಅಜೇಯ 34 ರನ್‌ ಬಾರಿಸಿ ನಾಯಕನ ಆಟವಾಡಿ ದರು. 21 ಎಸೆತಗಳ ಈ ಇನ್ನಿಂಗ್ಸ್‌ ನಲ್ಲಿ 4 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಉರುಳಿದ ಮೂರೂ ವಿಕೆಟ್‌ ಮಿಚೆಲ್‌ ಸ್ಯಾಂಟ್ನರ್‌ ಪಾಲಾಯಿತು. ಆದರೆ ಟಿಮ್‌ ಸೌಥಿ, ಐಶ್‌ ಸೋಧಿ ದುಬಾರಿಯಾದರು.2ನೇ ಪಂದ್ಯ ರವಿವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌
ಕಿವೀಸ್‌-20 ಓವರ್‌ಗಳಲ್ಲಿ 5 ವಿಕೆಟಿಗೆ 153 (ಟೇಲರ್‌ 44, ಮಿಚೆಲ್‌ ಔಟಾಗದೆ 30, ಡಿ ಗ್ರ್ಯಾಂಡ್‌ಹೋಮ್‌ 32, ಜೋರ್ಡನ್‌ 28ಕ್ಕೆ 2). ಇಂಗ್ಲೆಂಡ್‌- 18.3 ಓವರ್‌ಗಳಲ್ಲಿ 3 ವಿಕೆಟಿಗೆ 154 (ವಿನ್ಸ್‌ 59, ಬೇರ್‌ಸ್ಟೊ 35, ಮಾರ್ಗನ್‌ ಔಟಾಗದೆ 34, ಸ್ಯಾಂಟ್ನರ್‌ 23ಕ್ಕೆ 3). ಪಂದ್ಯಶ್ರೇಷ್ಠ: ಜೇಮ್ಸ್‌ ವಿನ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next