Advertisement

T20; ನ್ಯೂಜಿಲ್ಯಾಂಡ್‌ 92 ರನ್ನಿಗೆ ಕುಸಿತ: ಪಾಕಿಸ್ಥಾನಕ್ಕೆ 42 ರನ್‌ ಜಯ

11:54 PM Jan 21, 2024 | Team Udayavani |

ಕ್ರೈಸ್ಟ್‌ಚರ್ಚ್: ಬೌಲರ್‌ಗಳ ಪರಾಕ್ರಮದಿಂದಾಗಿ ಪ್ರವಾಸಿ ಪಾಕಿಸ್ಥಾನ ತಂಡವು ನ್ಯೂಜಿಲ್ಯಾಂಡ್‌ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ 42 ರನ್ನುಗಳ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಪಾಕಿಸ್ಥಾನ ವೈಟ್‌ವಾಶ್‌ ಭೀತಿಯಲ್ಲಿ ಪಾರಾಗಿದೆ. ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಜಯಿಸಿದ್ದ ನ್ಯೂಜಿಲ್ಯಾಂಡ್‌ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.

Advertisement

ಬೌಲರ್‌ಗಳಿಗೆ ಬಹಳಷ್ಟು ನೆರವು ನೀಡುತ್ತಿದ್ದ ಈ ಪಿಚ್‌ನಲ್ಲಿ ರನ್‌ ಗಳಿಸಲು ಒದ್ದಾಡಿದ ಪಾಕಿಸ್ಥಾನ ತಂಡವು 8 ವಿಕೆಟಿಗೆ 134 ರನ್‌ ಗಳಿಸಲಷ್ಟೇ ಶಕ್ತವಾಯಿತು. 38 ರನ್‌ ಗಳಿಸಿದ ಮೊಹಮ್ಮದ್‌ ರಿಜ್ವಾನ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರೆ ಫ‌ಖಾರ್‌ ಜಮಾನ್‌ 33 ರನ್‌ ಹೊಡೆದರು. ನ್ಯೂಜಿಲ್ಯಾಂಡಿನ ನಾಲ್ವರು ಬೌಲರ್‌ಗಳು ತಲಾ ಎರಡು ವಿಕೆಟ್‌ ಹಾರಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದರೂ ನ್ಯೂಜಿಲ್ಯಾಂಡ್‌ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಗಿ 17.2 ಓವರ್‌ಗಳಲ್ಲಿ ಕೇವಲ 92 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. 53 ರನ್ನಿಗೆ ಎರಡು ವಿಕೆಟ್‌ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ನ್ಯೂಜಿಲ್ಯಾಂಡ್‌ ಆಬಳಿಕ ನಾಟಕೀಯ ಕುಸಿತಕ್ಕೆ ಒಳಗಾಗಿ 92 ರನ್ನಿಗೆ ಆಲೌಟಾಯಿತು. 39 ರನ್‌ ಅಂತರದಲ್ಲಿ ತಂಡ ಕೊನೆಯ ಎಂಟು ವಿಕೆಟ್‌ ಕಳೆದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next