Advertisement

ಟಿ20: ಜೂ. 10ರ ಬಳಿಕ ನಿರ್ಧಾರ

03:39 AM May 29, 2020 | Sriram |

ಹೊಸದಿಲ್ಲಿ: ಐಸಿಸಿ ಟೆಲಿ ಕಾನ್ಫರೆನ್ಸ್‌ನಲ್ಲಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಆಯೋಜನೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದನ್ನು ಜೂ. 10ರ ತನಕ ಕಾಯ್ದಿರಿಸಲಾಗಿದೆ.

Advertisement

ಇದರಿಂದ ಈ ಪಂದ್ಯಾವಳಿ 2022ಕ್ಕೆ ಮುಂದೂಡಲ್ಪಡ ಲಿದೆ ಎಂಬ ಅನೇಕರ ಲೆಕ್ಕಾಚಾರಕ್ಕೂ ಬ್ರೇಕ್‌ ಬಿದ್ದಿದೆ. ಅಕಸ್ಮಾತ್‌ ವಿಶ್ವಕಪ್‌ ಮುಂದೂಡಲ್ಪಟ್ಟದ್ದೇ ಆದಲ್ಲಿ ಈ ಅವಕಾಶವನ್ನು ಐಪಿಎಲ್‌ ಆಯೋಜನೆಗೆ ಬಳಸಬಹುದು ಎಂಬ ಬಿಸಿಸಿಐಗೂ ಸದ್ಯ ನಿರಾಸೆಯೇ ಗತಿಯಾಗಿದೆ.

ಅ. 18ರಿಂದ ನ. 15ರ ತನಕ ಆಸ್ಟ್ರೇಲಿಯದ ಆತಿಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಬೇಕಿದೆ. ಆದರೆ ಕೋವಿಡ್‌-19 ಕಾರಣದಿಂದ ಇದು ಅನಿಶ್ಚಿತತೆಗೆ ಸಿಲುಕಿದೆ. ಐಸಿಸಿ ಸಭೆಯಲ್ಲಿ ಈ ಬಗ್ಗೆ ಖಚಿತ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ದಟ್ಟವಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next