Advertisement

ಟಿ20: ಅಜೇಯ ಕರ್ನಾಟಕಕ್ಕೆ  ಹರ್ಯಾಣ ಎದುರಾಳಿ

12:30 AM Mar 02, 2019 | |

ಕಟಕ್‌: “ಸಯ್ಯದ್‌ ಮುಷ್ತಾಕ್‌ ಅಲಿ ಟಿ20′ ಕ್ರಿಕೆಟ್‌ ಕೂಟದ “ಡಿ’ ಗುಂಪಿನಿಂದ ಈಗಾಗಲೇ ಸೂಪರ್‌ ಲೀಗ್‌ ಪ್ರವೇಶಿಸಿರುವ ಅಜೇಯ ಕರ್ನಾಟಕ ಶನಿವಾರದ ಪಂದ್ಯದಲ್ಲಿ ಹರ್ಯಾಣವನ್ನು ಎದುರಿಸಲಿದೆ.

Advertisement

ಬಂಗಾಲ್‌, ಅಸ್ಸಾಂ, ಒಡಿಶಾ, ಅರುಣಾಚಲ ಪ್ರದೇಶ, ಮಿಜೋರಾಂ, ಛತ್ತೀಸ್‌ಗಢ ತಂಡಗಳನ್ನು ಸೋಲಿಸಿರುವ ಕರ್ನಾಟಕ ತಂಡ 7ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಆರಂಭಿಕ ಬ್ಯಾಟ್ಸ್‌ಮನ್‌ ರೋಹನ್‌ ಕದಮ್‌ ಸಿಡಿಯುತ್ತಿರುವುದು ಕರ್ನಾಟಕಕ್ಕೊಂದು ಶುಭ ಸೂಚನೆಯಾಗಿದೆ. ಮಾಯಾಂಕ್‌ ಅಗರ್ವಾಲ್‌ ಹಾಗೂ ಕರುಣ್‌ ನಾಯರ್‌ ಅಗ್ರ ಕ್ರಮಾಂಕದ ಭರವಸೆಯ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ‌. ನಾಯಕ ಮನೀಷ್‌ ಪಾಂಡೆ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. 

ಬೌಲಿಂಗ್‌ನಲ್ಲಿ ಕೆ.ಸಿ. ಕಾರಿಯಪ್ಪ ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ತೋರಿಸಿದ್ದಾರೆ. ಜತೆಗೆ ಕೌಶಿಕ್‌, ಜೆ. ಸುಚಿತ್‌, ಅಭಿಮನ್ಯು ಮಿಥುನ್‌, ವಿನಯ್‌ ಕುಮಾರ್‌, ಶ್ರೇಯಸ್‌ ಗೋಪಾಲ್‌ ಆಲ್‌ರೌಂಡ್‌ ಸಾಧನೆಯೊಂದಿಗೆ ತಂಡದ ರಕ್ಷಣೆಗೆ ನಿಂತಿದ್ದಾರೆ. 

ಪ್ರತಿ ಗುಂಪಿನಿಂದಲೂ ಅಗ್ರ ಎರಡು ತಂಡಗಳು ಸೂಪರ್‌ ಲೀಗ್‌ ಹಂತಕ್ಕೆ ಪ್ರವೇಶ ಪಡೆಯಲಿವೆ. “ಡಿ’ ಗುಂಪಿನಲ್ಲಿ ಬಂಗಾಲ ಮತ್ತು ಹರ್ಯಾಣ ತಂಡಗಳು ಕ್ರಮವಾಗಿ 16 ಅಂಕ ಗಳಿಸಿವೆ. ಈ ಎರಡೂ ತಂಡಗಳ ನಡುವೆ ಮುಂದಿನ ಹಂತದ ಪ್ರವೇಶಕ್ಕೆ ಪೈಪೋಟಿಯಿದೆ. ಹೀಗಾಗಿ ಹರ್ಯಾಣಕ್ಕೆ ಕೊನೆಯ ಲೀಗ್‌ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next