ಕಾರ್ಡಿಫ್: ಆಸ್ಟ್ರೇಲಿಯಾ ಆಟಗಾರ ಮಾರ್ನಸ್ ಲಬುಶೇನ್ ಅವರು ಇಂಗ್ಲೆಂಡ್ ನ ಟಿ20 ಬ್ಲಾಸ್ಟ್ ನಲ್ಲಿ ಮಿಂಚುತ್ತಿದ್ದಾರೆ. ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಕಾರಣದಿಂದ ಮಾರ್ನಸ್ ಅವರು ಟಿ20 ಬ್ಲಾಸ್ಟ್ ಕೂಟದಲ್ಲಿ ಗ್ಲಾಮೊರ್ಗಾನ್ ತಂಡದ ಪರವಾಗಿ ಆಡುತ್ತಿದ್ದಾರೆ.
ಸೌತ್ ಗ್ರೂಪ್ ಪಂದ್ಯದಲ್ಲಿ ಗ್ಲೌಸೆಸ್ಟರ್‌ಶೈರ್ ಬ್ಯಾಟರ್ ಬೆನ್ ಚಾರ್ಲ್ಸ್‌ವರ್ತ್ ಅವರನ್ನು ಔಟ್ ಮಾಡಲು ಮಾರ್ನಸ್ ಲಬುಶೇನ್ ಅವರು ಕ್ಯಾಚ್ ಇದೀಗ ಭಾರಿ ಸುದ್ದಿಯಾಗುತ್ತಿದೆ.
ಕಾರ್ಡಿಫ್ ನಲ್ಲಿ ನಡೆದ ಪಂದ್ಯದಲ್ಲಿ ಮಾರ್ನಸ್ ಲಬುಶೇನ್ ಅವರ ಕ್ಯಾಚನ್ನು ‘ಕ್ಯಾಚ್ ಆಫ್ ದಿ ಸೆಂಚುರಿ’ ಎಂದು ಬಣ್ಣಿಸಲಾಗುತ್ತಿದೆ. ಗ್ಲೌಕ್ಸ್‌ನ 141 ರನ್ ಚೇಸ್‌ನ 10 ನೇ ಓವರ್ ನಲ್ಲಿ ಈ ಘಟನೆ ನಡೆದಿದೆ.
ಲಬುಶೇನ್ ಅವರು ಒಂದು ಕೈಯಿಂದ ಚೆಂಡನ್ನು ಹಿಡಿಯಲು ಫುಲ್ ಸ್ಟ್ರೆಚ್ ಡೈವ್ ಮಾಡಿದರು. ಆಸ್ಟ್ರೇಲಿಯ ಬ್ಯಾಟರ್ ನ ಈ ಕ್ಯಾಚ್ ವಿಡಿಯೋ ಇದೀಗ ವೈರಲ್ ಆಗಿದೆ.
ಆದರೆ ಈ ಪಂದ್ಯದಲ್ಲಿ ಗ್ಲಾಮೊರ್ಗಾನ್ ತಂಡವು ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಗ್ಲಾಮೊರ್ಗಾನ್ ತಂಡವು 6 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಗುರಿ ಬೆನತ್ತಿದ ಗ್ಲೌಸೆಸ್ಟರ್‌ಶೈರ್ ತಂಡವು 8 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.