Advertisement

ಶಾಸಕ ಟಿ.ರಾಜಾ ಸಿಂಗ್‌ ಮತ್ತೆ ಬಂಧನ

09:23 PM Aug 25, 2022 | Team Udayavani |

ಹೈದರಾಬಾದ್‌: ಬಿಜೆಪಿಯಿಂದ ಸಸ್ಪೆಂಡ್‌ ಆಗಿರುವ ಶಾಸಕ ಟಿ.ರಾಜಾ ಸಿಂಗ್‌ ಅವರನ್ನು ಗುರುವಾರ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಪ್ರವಾದಿ ಮೊಹಮ್ಮದ್‌ ಅವರನ್ನು ನಿಂದನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಅವರಿಗೆ ಸ್ಥಳೀಯ ಕೋರ್ಟ್‌ ಜಾಮೀನು ನೀಡಿತ್ತು. ಆದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇಬೇಕು ಎಂಬ ಬೇಡಿಕೆ ಹಚ್ಚಿದ್ದರಿಂದ ಮತ್ತು ಹೈದರಾಬಾದ್‌ನ ಹಲವೆಡೆ ಪ್ರತಿಭಟನೆ ಬುಧವಾರದಿಂದ ಬಿರುಸುಗೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೆ ಅವರನ್ನು ಬಂಧಿಸಲಾಗಿದೆ.

Advertisement

ಬಂಧನಕ್ಕೂ ಮೊದಲು ವಿಡಿಯೋ ಒಂದನ್ನು ಅಪ್‌ಲೋಡ್‌ ಮಾಡಿ, ತೆಲಂಗಾಣ ಪೊಲೀಸರು ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಕೈಗೊಂಬೆಗಳು. ಅವರ ಪಕ್ಷದ ಮುಖಂಡರಿಗೆ ಕಲ್ಲು ತೂರಾಟ ನಡೆಸಲು ಮುಕ್ತ ಪರವಾನಗಿ ನೀಡಲಾಗಿದೆ ಎಂದು ಟೀಕಿಸಿದ್ದಾರೆ. ಜತೆಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next