ಮಹಾನಗರ: ಮಂಗಳೂರು ತಾ. ಪಂ.ನ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ಮುಂದಿನ ತಿಂಗಳು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ತಾ. ಪಂ. ಹಳೆ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದು, ವಾಸಯೋಗ್ಯವಾಗಿಲ್ಲ ಎಂದು ತಜ್ಞರ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾ ಣಕ್ಕೆ ನಿರ್ಧರಿಸಲಾಗಿತ್ತು. ಹೊಸ ಕಟ್ಟ ಡ ವನ್ನು 63 ಸೆಂಟ್ಸ್ ನಿವೇಶನದಲ್ಲಿ ನಿರ್ಮಾ ಣಮಾಡಲಾಗಿದ್ದು, ಹೊಸ ಕಟ್ಟಡ ನಿರ್ಮಾ ಣಕ್ಕೆ ಜಿ.ಪಂ.ನಿಂದ 1.50 ಕೋ.ರೂ. ಮತ್ತು ರಾಜ್ಯ ಸರಕಾರದ 2 ಕೋ.ರೂ.ಅನುದಾನ ಸೇರಿ, ಒಟ್ಟು 3.50 .ರೂ.ಅನುದಾನದಲ್ಲಿ ಕಾಮಗಾರಿ ನಡೆದಿದೆ. 2017 ಮೇ 21ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದ್ದರು. ಹಳೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಇದ್ದ ಕಾರಣ ನೂತನ ಕಟ್ಟಡವನ್ನು ವಿಶಾಲವಾಗಿ ಕಟ್ಟಲಾಗುತ್ತಿದೆ.
ತಾ. ಪಂ.ನ ನೂತನ ಕಟ್ಟಡ ತಳ ಅಂತಸ್ತು, ನೆಲ ಅಂತಸ್ತು ಮತ್ತು ಎರಡು ಮಹಡಿಗಳನ್ನು ಒಳ ಗೊಂಡಿದೆ. ತಳ ಅಂತಸ್ತಿನಲ್ಲಿದೆ ಪಾರ್ಕಿಂಗ್, ನೆಲ ಅಂತಸ್ತಿನಲ್ಲಿ ಆಡಳಿತ ಕಚೇರಿ, ಕಾರ್ಯ ನಿರ್ವಾಹಕ ಅಧಿಕಾರಿ ಕಚೇರಿ ಮತ್ತು ಉಪನಿರ್ದೇಶಕ ಕಚೇರಿ ಬರ ಲಿದೆ. ಮೊದಲ ಮಹಡಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಕಚೇರಿ, ಬಿಸಿಎಂ ಮತ್ತು ಅಕ್ಷರ ದಾಸೋಹ ಅಧಿಕಾರಿಗಳ ಕಚೇರಿ, ತಾ. ಪಂ. ಸಭೆ ನಡೆಸಲು ಎರಡನೇ ಮಹಡಿಯಲ್ಲಿ 3500 ಚ.ಅಡಿಯ ಸಭಾಂಗಣವಿದೆ.
ಕಾಮಗಾರಿ ಪೂರ್ಣ
2018 ಸಪ್ಟೆಂಬರ್ ತಿಂಗಳಿನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಮರಳು, ಇತರ ತೊಂದರೆಗಳಿಂದ ವಿಳಂಬವಾಗಿದೆ. ಈಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
– ಮೊಹಮ್ಮದ್ ಮೋನು, ಅಧ್ಯಕ್ಷ, ತಾ.ಪಂ.