Advertisement

ರೋಗ ನಿರೋಧಕ ಶಕ್ತಿ ವೃದ್ಧಿಗೆ ಟಿ ಸೆಲ್ಸ್‌

02:24 PM Jul 26, 2020 | sudhir |

ಲಂಡನ್‌: ಕೋವಿಡ್ ಸೋಂಕು ಹರಡುವಿಕೆ ಪ್ರಾರಂಭವಾದ ದಿನದಿಂದ ಪ್ರತಿಕಾಯ (ಆ್ಯಂಟಿಬಾಡಿ) ಎನ್ನುವ ಪದ ಬಳಕೆ ಹೆಚ್ಚಾಗಿದ್ದು, ದೇಹವನ್ನು ಸೋಂಕಿನಿಂದ ರಕ್ಷಿಸುವಲ್ಲಿ ಇದು ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನ ವರದಿಗಳು ತಿಳಿಸಿವೆ.

Advertisement

ಆದರೆ ಇದೀಗ ಟಿ ಸೆಲ್ಸ್‌ ಎನ್ನುವ ಪದ ಆ್ಯಂಟಿಬಾಡಿ ಪದಕ್ಕಿಂತ ಹೆಚ್ಚು ಚಾಲ್ತಿಯಲ್ಲಿದ್ದು, ಸೋಂಕಿತ ಕೋಶಗಳನ್ನು ನೇರವಾಗಿ ಈ ಟಿ ಸೆಲ್ಸ್‌ ನಾಶ ಮಾಡಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಏನಿದು ಟಿ ಸೆಲ್ಸ್‌ ?
ದೇಹಕ್ಕೆ ಸೋಂಕು ತಗಲಿದಾಗ ರಚನೆಯಾಗುವ ಪ್ರತಿರೋಧಕ ಶಕ್ತಿಯ ಭಾಗವಾಗಿ ಟಿ ಸೆಲ್ಸ್‌ ಮತ್ತು ಆ್ಯಂಟಿಬಾಡಿ ವೃದ್ಧಿ ಆಗಲಿದೆ. ಟಿ ಸೆಲ್ಸ್‌ ಎಂಬುದು ಬಿಳಿ ರಕ್ತ ಕಣವಾಗಿದ್ದು ವೈರಾಣುವಿನಿಂದ ಸೋಂಕಿತವಾದ ಕೋಶಗಳನ್ನು ಇದು ನೇರವಾಗಿ ನಾಶ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇನ್ನು ಕೋವಿಡ್ ಲಸಿಕೆ ಕುರಿತಾದ ವರದಿಯಲ್ಲಿ ಈ ಟಿ ಸೆಲ್ಸ್‌ಗಳ ಕುರಿತು ಮಾಹಿತಿ ನೀಡಲಾಗಿದ್ದು, ಆಸ್ಟ್ರಾಜೆನೆಕಾ, ಪಿಫೈಜರ್‌, ಬಯೋ ಎನ್‌ ಟೆಕ್‌ ಹಾಗೆಯೇ ಚೀನದ ಕ್ಯಾನ್ಸಿನೋ ಬಯೋಲಾಜಿಕಲ್ಸ್ ಇಂಕ್‌ ಈ ಎಲ್ಲ ಲಸಿಕೆಗಳಲ್ಲಿ ಬಿಳಿ ರಕ್ತಕಣಗಳಿವೆ.

ಇವುಗಳು ಕೋವಿಡ್ ಗುಣಪಡಿಸುವ ಭರವಸೆಯನ್ನು ನೀಡುತ್ತಿವೆ. ಅಲ್ಲದೇ ಸೋಂಕಿತರ ದೇಹದಲ್ಲಿ ಈ ಟಿ ಸೆಲ್ಸ್‌ಗಳು ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

Advertisement

ಲಸಿಕೆಯು ಪ್ರಯೋಗವಾದ ವ್ಯಕ್ತಿಗಳ ದೇಹದಲ್ಲಿ ಪ್ರಬಲ ಪ್ರತಿಕಾಯ (Antibody) ಮತ್ತು ಟಿ ಸೆಲ್ಸ್ ಗಳ ಸೃಷ್ಟಿಯಾಗಿದ್ದು, ಲಸಿಕೆಯನ್ನು ಹಾಕಿದ 14 ದಿನದೊಳಗೆ ಟಿ ಸೆಲ್ಸ್ ಗಳು ಸ್ಪಂದಿಸತೊಡಗಿವೆ. ಹಾಗೆಯೇ, 28 ದಿನದೊಳಗೆ ಪ್ರತಿಕಾಯ ಸ್ಪಂದನೆಯಾಗಿದೆ ಎಂದು ದಿ ಲ್ಯಾನ್ಸೆಟ್‌ ಜರ್ನಲ್ ಟಿ ಸೆಲ್ಸ್‌ ಕುರಿತು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next