Advertisement
ವಿದೇಶಕ್ಕೆ ತೆರಳಿ ಶಿಕ್ಷಣ ಪಡೆಯುವವರಿಗೆ ಹಣಕಾಸು ಒದಗಣೆಯನ್ನು ಆರಂಭಿಸಿದ್ದು ಟಿ.ಎ. ಪೈಯವರು. ಸುಮಾರು 5,400 ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಇಲ್ಲದೆ ವಿದೇಶದ ಶಿಕ್ಷಣ ಕೊಡಿಸಲು ಕಾರಣರಾದರು. ಆದರೆ ಇಷ್ಟೊಂದು ಸಾಲವೂ ಶೇ.100 ಮರುಪಾವತಿಯಾದ ದಾಖಲೆ ನಿರ್ಮಾಣವಾಯಿತು.
Related Articles
Advertisement
ಟಿ.ಎ. ಪೈಯವರು ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ 20 ದೊಡ್ಡಮತ್ತು ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದರು. ಆಗ ಉದ್ಭವಿಸಿದ ಅನೇಕ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಅವರ ಮುನ್ನೋಟ, ತಾಳ್ಮೆ ಗಮನೀಯವಾಗಿದೆ. ಸಿಂಡಿಕೇಟ್ ಬ್ಯಾಂಕ್‌ನ ಸಂಸ್ಕೃತಿಗೆ ಒಗ್ಗಿ ಜನ ಸೇವೆ ಮಾಡಲು ಅವರು ಸಿಬಂದಿಗೆ ವಿಶೇಷ ತರಬೇತಿ ಕೊಡುತ್ತಿದ್ದರು.
1969ರಲ್ಲಿ ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕ್‌ನ ಕಸ್ಟೋಡಿಯನ್ ಆಗಿ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಬ್ಯಾಂಕ್ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸುವಲ್ಲಿ ವಿಶೇಷವಾಗಿ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈಯವರ ದೂರದೃಷ್ಟಿ ಉಲ್ಲೇಖನೀಯ.ಜನಜೀವನವನ್ನು ಬಲಗೊಳಿಸುವ ಬ್ಯಾಂಕಿಂಗ್ ವ್ಯವಸ್ಥೆ ಬಗೆಗೆ ಅಭಿಪ್ರಾಯಹೊಂದಿದ್ದ ಸ್ವಾತಂತ್ರ್ಯ ಹೋರಾಟ
ಗಾರ ಸಿ. ರಾಜ ಗೋಪಾಲಾಚಾರಿ ಅವರ ಆಶಯವನ್ನು ಟಿ.ಎ. ಪೈ ಸುಪುಷ್ಟಿಗೊಳಿಸಿದ್ದರು. 1970ರ ಬಳಿಕ ಟಿ.ಎ. ಪೈಯವರು ಭಾರತೀಯ ಜೀವವಿಮಾ ನಿಗಮದಅಧ್ಯಕ್ಷತೆ ವಹಿಸಿಕೊಂಡು ಹಣಕಾಸು
ಸೇವೆಯನ್ನು ಮುಂದುವರಿಸಿದರು. 1980 ರಲ್ಲಿ ಅವರು ಇನ್ನಿಲ್ಲವಾಗುವ ಮುನ್ನ ಬಿಸಿನೆಸ್ ಸ್ಕೂಲ್ ಆರಂಭಿಸಿದ್ದು ಜೀವಿತದ ಕೊನೆಯ ಕೊಡುಗೆ ಯಾಗಿದೆ. ಸ್ಥಾಪಕರ ಸದಾಶಯದಂತೆ ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಮಣಿಪಾಲ ಹೊರವಲಯದ 80 ಬಡಗಬೆಟ್ಟು ಗ್ರಾಮದಲ್ಲಿ ನೆಲೆ ನಿಂತು ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವಿಸಸ್‌ನಲ್ಲಿ ಸ್ನಾತಕೋತ್ತರ ಪದವಿ (ಎಂಬಿಎ) ನೀಡುವ ಭಾರತದ ಶ್ರೇಷ್ಠ ಬಿ ಸ್ಕೂಲ್ ಆಗಿ ಹೊರಹೊಮ್ಮಿದೆ. -ಪ್ರೊ| ಮಧು ವೀರರಾಘವನ್
(ಟ್ಯಾಪ್ಮಿ ನಿರ್ದೇಶಕರು. ಹಣಕಾಸು, ನಿರ್ವಹಣ ವಿಷಯ ತಜ್ಞರು)