Advertisement

T-20 World Champion: ತವರಿಗೆ ಬರುವ ಟೀಂ ಇಂಡಿಯಾದ ನಾಳೆಯ ಕಾರ್ಯಕ್ರಮವೇನು?

08:22 PM Jul 03, 2024 | Team Udayavani |

ನವದೆಹಲಿ: ಟಿ-೨೦ ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಜಯಗಳಿಸಿ ೧೭ ವರ್ಷ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ೨ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಭಾರತ ಕ್ರಿಕೆಟ್‌ ತಂಡ ಗುರುವಾರ ಬೆಳಗ್ಗೆ ತವರಿಗೆ ಮರಳಲಿದೆ.

Advertisement

ಟಿ20 ವಿಶ್ವ ಚಾಂಪಿಯನ್​ ಭಾರತ ತಂಡ ಬಾರ್ಬಡೋಸ್​ನಿಂದ ತವರಿಗೆ ಪ್ರಯಾಣ ಬೆಳೆಸಿದ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿದ್ದು, ಟಿ20 ವಿಶ್ವಕಪ್​ ಟ್ರೋಫಿಯ ವಿಡಿಯೊ ಹಾಕಿ ನಾವು ಮರಳುತ್ತಿದ್ದೇವೆ ಎಂದು ಬರೆದುಕೊಂಡಿದೆ. ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಭಾರತಕ್ಕೆ ಮರಳಲಿದ್ದಾರೆ.

ಪ್ರಧಾನಿ ಮೋದಿ ಭೇಟಿಯಾಗುವ ಟೀಂ ಇಂಡಿಯಾ

ಗುರುವಾರ (ಜು. 4) ಬೆಳಗ್ಗೆ ಟೀಂ ಇಂಡಿಯಾ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಮಾಡಲಿದೆ. ಗುರುವಾರ ಬೆಳಗ್ಗೆ 11 ಗಂಟೆಗೆ ಭಾರತ ತಂಡ, ನರೇಂದ್ರ ಮೋದಿ ನಿವಾಸಕ್ಕೆ ಭೇಟಿ ನೀಡಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.


ಮುಂಬೈಯಲ್ಲಿ ವಿಶೇಷ ಕಾರ್ಯಕ್ರಮ

Advertisement

ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಮುಂಬೈಗೆ ಆಗಮಿಸುವ ಭಾರತ ತಂಡ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ ಗೆದ್ದಿರುವ ವಿಶ್ವಕಪ್‌ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾಗೆ ಹಸ್ತಾಂತರಿಸಲಿದ್ದಾರೆ.

ತೆರೆದ ವಾಹನದಲ್ಲಿ ರೋಡ್‌ ಶೋ

ವಿಶ್ವ ಚಾಂಪಿಯನ್‌ ಭಾರತ ತಂಡದ ಕ್ರಿಕೆಟಿಗರನ್ನು ತೆರೆದ ವಾಹನದಲ್ಲಿ ಸಂಜೆ ೫ ಗಂಟೆಗೆ ವೈಭವಯುತ ಮೆರವಣಿಗೆಯು ಜರುಗಲಿದೆ ಎಂದು ಜಯ್‌ ಶಾ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next