Advertisement

ಗಡಿಭಾಗದ ಚೆಕ್‌ಪೋಸ್ಟ್‌  ಸಿಬಂದಿಗೆ ವ್ಯವಸ್ಥಿತ ಶೆಡ್‌: ಸಚಿವ ಎಸ್‌. ಅಂಗಾರ ಆದೇಶ

12:53 AM Aug 08, 2021 | Team Udayavani |

ಪುತ್ತೂರು: ಕರ್ನಾಟಕ-ಕೇರಳ ಗಡಿಭಾಗದ ಕಲ್ಲಪಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿಗೆ ಉಳಿದುಕೊಳ್ಳಲು ಬಸ್‌ ತಂಗುದಾಣ ಹಾಗೂ ಶೌಚಾಲಯಕ್ಕೆ ಸನಿಹದ ಮನೆಗಳಿಗೆ ತೆರಳಬೇಕಾದ ಸಂಕಷ್ಟವನ್ನು ಆಲಿಸಿದ ಸಚಿವ ಎಸ್‌. ಅಂಗಾರ ಅವರು ತತ್‌ಕ್ಷಣ ವ್ಯವಸ್ಥಿತ ಶೆಡ್‌ ಹಾಗೂ ಶೌಚಾಲಯ ನಿರ್ಮಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Advertisement

ತಪಾಸಣ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರಿಗೆ ಅಲ್ಲಿನ ವ್ಯವಸ್ಥೆಯ ಕುರಿತು ಪೊಲೀಸ್‌ ಸಿಬಂದಿ ಗಮನಕ್ಕೆ ತಂದರು. ಅಲ್ಲಿ ಪೋಲಿಸ್‌ ಸಿಬಂದಿ ಮತ್ತು ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಸಂಕಷ್ಟವನ್ನು ಕಣ್ಣಾರೆ ಕಂಡ ಸಚಿವರು ತತ್‌ಕ್ಷಣವೇ ಎಂಜಿನಿಯರ್‌ ಮಣಿಕಂಠ ಅವರಿಗೆ ದೂರವಾಣಿ ಕರೆ ಮಾಡಿ, ಅಲ್ಲೇ ಸನಿಹದಲ್ಲಿ ವ್ಯವಸ್ಥಿತ ಶೆಡ್‌, ಶೌಚಾಲಯ ವ್ಯವಸ್ಥೆ ಮತ್ತು ಸೋಲಾರ್‌ ಲೈಟ್‌ನ ವ್ಯವಸ್ಥೆ ಮಾಡುವಂತೆ ಆದೇಶ ನೀಡಿದರು.

ಗಡಿ ಪ್ರದೇಶದ ಗಡಿಗುರುತಿನ ಸಮಸ್ಯೆ ಪರಿಹರಿಸಲು ಉಭಯ ಜಿಲ್ಲಾಡಳಿತದ ಸಮ್ಮುಖದಲ್ಲಿ ಜಂಟಿ ಸರ್ವೇ ನಡೆಸಲಾಗುವುದು. ರಾಜ್ಯಕ್ಕೆ ಸಂಬಂಧಪಟ್ಟ ರಸ್ತೆಯ ಗಡಿ ಗುರುತನ್ನು ಸಮರ್ಪಕವಾಗಿ ಮಾಡುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್‌ ಅನಿತಾಲಕ್ಷ್ಮೀ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಸರ್ಕಲ್‌ ಇನ್‌ಸ್ಪೆಪೆಕ್ಟರ್‌ ನವೀನ್‌ ಚಂದ್ರ ಜೋಗಿ, ಎಸ್‌ಐ ಹರೀಶ್‌, ಜಿ.ಪಂ. ಮಾಜಿ ಸದಸ್ಯ ಹರೀಶ್‌ ಕಂಜಿಪಿಲಿ,  ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಉಪಾಧ್ಯಕ್ಷ ದಿನೇಶ್‌ ಕಣಕ್ಕೂರು, ಗ್ರಾಮ ಲೆಕ್ಕಾಧಿಕಾರಿ ಶರತ್‌ ಕುಮಾರ್‌, ಪಿಡಿಒ ಕೀರ್ತಿಪ್ರಸಾದ್‌, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್‌ ಮಜಿಗುಂಡಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next