Advertisement
ವೈಜ್ಞಾನಿಕವಾಗಿ ನಿರ್ವಹಿಸುವ ಈ ಬೃಹತ್ ಯೋಜನೆಗೆ 4.49 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಶೇ. 35 ಕೇಂದ್ರ ಸರಕಾರ (1.57 ಕೋಟಿ) ಭರಿಸಲಿದೆ. ಶೇ. 23.30 (1.04 ಕೋಟಿ) ರಾಜ್ಯ ಸರಕಾರ, ಶೇ. 41.70 (1.87 ಕೋಟಿ) ನಗರಸಭೆ ಭರ್ತಿ ಮಾಡಲಿದೆ. ತ್ಯಾಜ್ಯ ಸಂಗ್ರಹ ಮತ್ತು ಸಾಗಾಟ ಯೋಜನೆಗೆ 119.13 ಲಕ್ಷ (1.19 ಕೋಟಿ), ಸಂಸ್ಕರಣೆ ಮತ್ತು ನಿರ್ವಹಣೆಗೆ 330.25 ಲಕ್ಷ (3.30 ಕೋಟಿ) ನಿಗದಿ ಮಾಡಲಾಗಿದೆ.
ಬನ್ನೂರು ನೆಕ್ಕಿಲದ ಡಂಪಿಂಗ್ ಯಾರ್ಡ್‌ನ ಆವರಣ ಗೋಡೆ ಎತ್ತರಿಸಿ ವಿದ್ಯುತ್ ಕಾಮಗಾರಿಯ ಕಾರ್ಯ ನಡೆಯುತ್ತಿದೆ. ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಯಾರ್ಡ್ ನಿರ್ಮಾಣಕ್ಕಾಗಿ ಕಾಮಗಾರಿಗಳು, ಯಂತ್ರಗಳ ಖರೀದಿ ಸೇರಿದಂತೆ ಹತ್ತಾರು ಬಗೆಯ ಸಲಕರಣೆಗಳ ಖರೀದಿಗೆ ಸಿದ್ಧತೆ ನಡೆದಿದೆ. ಬನ್ನೂರಿನ ಲ್ಯಾಂಡ್‌ಫಿಲ್ ಸೈಟಿನಲ್ಲಿ ಘನ, ಹಸಿ, ಒಣ ತ್ಯಾಜ್ಯ ಗಳ ವೈಜ್ಞಾನಿಕ ವಿಂಗ ಡಣೆಗೆ ಬೇಕಾದ ಯಂತ್ರ ಗಳ ಜೋಡ ನೆಗೆ ಬೇಕಾದ ಸ್ಥಳ, ಬೆಡ್ಡಿಂಗ್ ಕಾರ್ಯ ನಡೆಯುತ್ತಿದೆ. ಇದರ ಜತೆಗೆ ಶೆಡ್‌ಗಳ ನಿರ್ಮಾಣ, ಕಸ ಸಂಗ್ರಹ, ಸಾಗಾಟಗಳಿಗೆ ಬೇಕಾದ ವಾಹನಗಳ ವ್ಯವಸ್ಥೆ, ಕಾರ್ಮಿಕರು, ತಂತ್ರಜ್ಞರು, ಮೇಲ್ವಿಚಾರಕರು, ಕಾವಲು ಸಿಬಂದಿ ವ್ಯವಸ್ಥೆ ನಗರಸಭೆಯ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದೆ. 75 ಕಾರ್ಮಿಕರು, ಸಿಬಂದಿ ನೇಮಿಸಿಕೊಳ್ಳುವ, 15 ವಾಹನ ಬಳಸಿಕೊಳ್ಳುವ ಯೋಜನೆಯ ಟೆಂಡರ್ ಹಂತ ಮುಗಿದಿದೆ.
Related Articles
30 ವರ್ಷಗಳ ಹಿಂದೆ ನೆಕ್ಕಿಲದಲ್ಲಿ ಸ್ಥಾಪನೆಯಾದ ಲ್ಯಾಂಡ್‌ಫಿಲ್ ಸೈಟ್, ಕ್ರಮೇಣ ಸಮಸ್ಯೆಯ ಆಗರವಾಗಿ ಬೆಳೆದಿದೆ. ಅವೈಜ್ಞಾನಿಕ ತ್ಯಾಜ್ಯ ಸಂಗ್ರಹ, ನಿರ್ವಹಣೆ, ಸಂಸ್ಕರಣೆಯಿಲ್ಲದ ವ್ಯವಸ್ಥೆ, ಪಾಳು ಬಿದ್ದಿರುವ ಎರೆ ಗೊಬ್ಬರ ತಯಾರಿ ವ್ಯವಸ್ಥೆ, ಪರಿಸರದಲ್ಲಿ ಸೃಷ್ಟಿಸಿದ ವಾಸನೆ, ಸ್ಥಳೀಯರಿಗೆ ಪದೇ ಪದೇ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ, ಆಗಾಗ್ಗೆ ಸ್ಥಳೀಯರಲ್ಲಿ ಕಟ್ಟೆಯೊಡೆಯುವ ಆಕ್ರೋಶ. ಹೀಗೆ ಸಮಸ್ಯೆಗಳ ಸರಮಾಲೆಯೇ ಇದರ ಹಿಂದೆ ಬೆಳೆದು ಬಂದಿದೆ. 2017ರಲ್ಲಿ ಈ ಡಂಪಿಂಗ್‌ಯಾರ್ಡ್ ನಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ 3 ವಾರದ ಕಾಲ ಹೊಗೆಯಾಡಿದ್ದು, ಇಡೀ ಕಸದ ಬೆಟ್ಟವನ್ನೇ ಸುಟ್ಟು ಕರಕಲುಗೊಳಿಸಿತ್ತು. 1989ರಲ್ಲಿ ನಿರ್ಮಾಣವಾದ ಬನ್ನೂರು ಡಂಪಿಂಗ್ ಯಾರ್ಡ್ 7 ಎಕ್ರೆ ವಿಸ್ತೀರ್ಣ ಹೊಂದಿದೆ. ಪ್ರತ್ಯೇಕ ಜಾಗಕ್ಕೆ ಆಗ್ರಹವಿದೆಯಾದರೂ ವಿರೋಧದ ಕಾರಣದಿಂದ ಈಡೇರಿಲ್ಲ.
Advertisement
ಆರು ತಿಂಗಳೊಳಗೆ ಪೂರ್ಣನಗರಸಭಾ ವ್ಯಾಪ್ತಿಯಲ್ಲಿ ದೊಡ್ಡ ಸಮಸ್ಯೆಯಾಗಿರುವ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಮಾಡುವ ನಿಟ್ಟಿನಲ್ಲಿ 4.5 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲ ಕಾಮಗಾರಿ ಮುಂದಿನ 6 ತಿಂಗಳೊಳಗೆ ಪೂರ್ಣಗೊಂಡು ಕಾರ್ಯರೂಪಕ್ಕೆ ಬರಲಿದೆ.
– ರೂಪಾ ಟಿ. ಶೆಟ್ಟಿ, ಪುತ್ತೂರು ನಗರಸಭೆ ಪೌರಾಯುಕ್ತೆ ರಾಜೇಶ್ ಪಟ್ಟೆ