Advertisement
ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡಗು ಪ್ರಸ್ ಕ್ಲಬ್‌ನ ನೂತನ ಆಡಳಿತ ಮಂಡಳಿಯ ಪದ ಗ್ರಹಣ ಮತ್ತು ಕಾರ್ಯಚಟುವಟಿಕೆಗಳ ಆರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಸೂಚಿ ಭಾಷಣ ಮಾಡಿದರು.
ಪತ್ರಿಕೋದ್ಯಮದ ಬಿಸ್ನೆಸ್ ಮಾಡೆಲ್‌ನಲ್ಲಿ ನ್ಯೂನತೆ ಇದೆಯೆಂದು ಅಭಿಪ್ರಾಯಪಟ್ಟ ಅವರು, ಮಾಧ್ಯಮ ಗಳ ಮೇಲೆ ಜನ ವಿಶ್ವಾಸ ಕಳೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಈ ರೀತಿಯ ಬೆಳವಣಿಗೆಯ ಷಡ್ಯಂತ್ರ ನಡೆಯುತ್ತಿದೆ ಎನ್ನುವ ಸಂಶಯ ಮೂಡುತ್ತದೆ. ಶಕ್ತಿಶಾಲಿಯಾದ ಮಾಧ್ಯಮ ಮತ್ತು ಪ್ರಜಾ ಪ್ರಭುತ್ವ ಒಟ್ಟಿಗೆ ಸಾಗಬೆೇಕಾಗುತ್ತದೆ. ಜನರು ಮಾಧ್ಯಮದ ಮೇಲಿನ ವಿಶ್ವಾಸವನ್ನು ಕಳೆದುಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾದಂತೆ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು.
Related Articles
Advertisement
ಹೆಣಗಳ ಆಸಕ್ತಿ ಬೇಡ ಹೆಣಗಳ ಬಗ್ಗೆ ಹೆಚ್ಚು ಆಸಕ್ತಿ ತೋರುವ ಬದಲು ಬದುಕಿರುವವರ ಬಗ್ಗೆ ಕಾಳಜಿ ತೋರಿದರೆ ಮತ್ತಷ್ಟು ಸಾವುಗಳು ಸಂಭವಿಸುವುದನ್ನು ತಡೆಯಬಹುದೆಂದು ರೈತರ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖೀಸಿ ಅವರು ಹೇಳಿದರು. ಟಿವಿ ಮಾಧ್ಯಮಗಳಿಗೆ ಉರಿಯುವ ಸುದ್ದಿ ಬೇಕೆಂದು ವಿಷಾದಿಸಿದ ಅವರು, ಇಂದು ಪತ್ರಿಕೆಗಳು ಟಿವಿಯ ಹೆಡ್‌ಲೈನ್‌ಗಳನ್ನೆ ಕಾಪಿ ಮಾಡುತ್ತಿವೆಯೆಂದು ಬೆೇಸರ ವ್ಯಕ್ತಪಡಿಸಿದರು.
ಟಿವಿಗಳ ಲೀಡ್ ಸುದ್ದಿಯನ್ನು ಪತ್ರಿಕೆೆಗಳು ನಮ್ಮ ಮುಂದಿನ ದಿನದ ಲೀಡ್ ಆಗಿ ನಿರ್ಧರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಾಧ್ಯಮಗಳಿಂದ ಭಾಷೆ ಕೆಡುತ್ತಿದೆ ಎನ್ನುವ ಟೀಕೆಗಳು ಕೇಳಿ ಬರುತ್ತಿದೆ. ಇದು ನಿಜವಾಗಿದ್ದು, ಭ್ರಷ್ಟ ಸಮಾಜವನ್ನು ಮತ್ತು ಭ್ರಷ್ಟರ ವಿರುದ್ಧ ಹೋರಾಡುವ ಆತುರದಲ್ಲಿ ಮಾಧ್ಯಮಗಳ ಭಾಷೆಯ ಬಳಕೆ ಹದಗೆಡುತ್ತಿದೆಯೆಂದು ಅವರು ಅಭಿಪ್ರಾಯಪಟ್ಟರು. ಜ್ಞಾನ ಮತ್ತು ಸಿದ್ಧತೆಯ ಕೊರತೆ
ಪತ್ರಕರ್ತರ ವೃತ್ತಿ ಬದುಕು ಮಾತ್ರ ಸರಿ ಇದ್ದರೆ ಸಾಲದು ತಮ್ಮ ವೈಯಕ್ತಿಕ ಬದುಕು ಕೂಡ ಸರಿಯಾಗಿರ ಬೇಕೆಂದ ದಿನೇಶ್ ಅಮೀನ್ ಮಟ್ಟು, ಉತ್ತಮ ಸಂಗವನ್ನು ಹೊಂದಿರಬೇಕೆಂದರು. ಯಾವುದೋ ಅನ್ಯ ಗ್ರಹದಿಂದ ನಾವು ಬಂದಿದ್ದೇವೆ ಎನ್ನುವ ರೀತಿ ಯಲ್ಲಿ ಪತ್ರಕರ್ತರ ವರ್ತನೆ ಇರಬಾರದು. ನಾವು ಮಾಡುವ ವರದಿ ನಮಗಿಂತ ದೊಡ್ಡದು ಎನ್ನುವ ಮನೋಭಾವನೆ ಇರಬೇಕು. ಹೊಸ ತಲೆಮಾರಿನ ಪತ್ರಕರ್ತರಲ್ಲಿ ಜ್ಞಾನ ಮತ್ತು ಸಿದ್ಧತೆಯ ಕೊರತೆ ಇದೆ. ಓದುಗರ ನಂಬಿಕೆಯನ್ನು ಉಳಿಸುವ ಕೆಲಸವನ್ನು ಪತ್ರಿಕೆಗಳು ಮಾಡಬೇಕಾಗಿದೆ. ಆದರೆ, ಇಂದು ಜಾಹೀರಾತಿನ ಭರಾಟೆಯಿಂದ ಪತ್ರಿಕೆಗಳಿಗೆ ಓದುಗರು ಬೇಕಾಗಿಲ್ಲ. ಕೇವಲ ಗ್ರಾಹಕರು ಇದ್ದರೆ ಸಾಕೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾದಿಸಿದರು. ಪತ್ರಿಕೋದ್ಯಮದ ಮೇಲಿನ ವಿಶ್ವಾಸವನ್ನು ಜನರು ಕಳೆದುಕೊಳ್ಳಬೇಕೆಂದು ವ್ಯವಸ್ಥಿತ ಪಿತೂರಿಗಳು ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಪತ್ರಕರ್ತರು ನಿರಾಶಾವಾದಿಗಳಾಗಬಾರದೆಂದು ದಿನೇಶ್ ಅಮೀನ್ ಮಟ್ಟು ಕಿವಿ ಮಾತು ಹೇಳಿದರು. ಸಮಾನತೆಯಿಂದ ನೋಡಬೇಕು
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಸ್‌ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತ ಶಯನ, ಪತ್ರಕರ್ತರು ನ್ಯಾಯಾಲಯದಂತೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಾರೆ. ವ್ಯಕ್ತಿತ್ವ, ಕಾರ್ಯದಕ್ಷತೆಯೊಂದಿಗೆ ಮಾನವೀಯತೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು. ಪತ್ರಕರ್ತರಿಗೆ ಸ್ವಸಾಮರ್ಥ್ಯ ಮುಖ್ಯವೇ ಹೊರತು, ತಾತ್ಕಾಲಿಕ ನಾಯಕಗಿರಿಗೆ ಪ್ರಯತ್ನಿಸಬಾರದೆಂದರು. ಸಮಾಜದಲ್ಲಿ ಎಲ್ಲರನ್ನು ಸಮಾನತೆಯಿಂದ ನೋಡುವ ಗುಣವನ್ನು ಪತ್ರಕ ರ್ತರು ಹೊಂದಿರಬೇಕೆಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಪತ್ರಿ ಕೋದ್ಯಮದಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದು, ಇದರ ಜತೆಯಲ್ಲಿ ಮೌಲ್ಯವೂ ಉಳಿಯಬೇಕೆಂದರು. ಪ್ರಸ್‌ಕ್ಲಬ್‌ನ ನೂತನ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕ ಮಾತನಾಡಿ, ಜನರ ವಿಶ್ವಾಸಗಳಿಸುವ ಸುದ್ದಿಯನ್ನು ಮಾಡುವ ಮೂಲಕ ಸಮಾಜಮುಖೀ ಚಿಂತನೆಗಳನ್ನು ಪತ್ರಕರ್ತರು ಮಾಡ ಬೇಕೆಂದರು. ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್ ಉಪಸ್ಥಿತರಿದ್ದರು.ಇದೇ ಸಂದರ್ಭ ಕ್ಲಬ್‌ನ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.